ವ್ಯಾಪಕವಾಗಿ ಹಬ್ಬುತ್ತಿರುವ ಭಯಾನಕ ‘ಕೊರೊನ’ ವೈರಸ್,ಈ ಲಕ್ಷಣಗಳು ಕಂಡು ಬಂದರೆ ನಿಲ್ಲಲೇಬೇಡಿ

0
780

ಕಳೆದ ವಾರದಿಂದ ಶುರು ಆಗಿರುವ ಹೊಸ ‘ಕೊರೊನ’ ವೈರಸ್ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ,ಚೀನಾ ಇಂದ ಶುರು ಆಗಿರುವ ಈಹೊಸ ಮಾರಣಾಂತಿಕ ವೈರಸ್ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅಷ್ಟೇ ಅಲ್ಲದೆ ಕೊನೆಗೆ ಭಾರತಕ್ಕೂ ಬರುವ ಸೂಚನೆಗಳಿವೆ ಹೀಗಾಗಿ ನೀವು ಎಚ್ಚರವಹಿಸಲೇಬೇಕು, ಎಸ್.ಎ.ಆರ್.ಎಸ್ ಎಂಬ ಕಾಯಿಲೆಯು ಈ ವೈರಸ್ ಇಂದ ಹರಡುತ್ತಿದ್ದು ಇದು ಕೆಲವೇ ದಿನಗಳಲ್ಲಿ ಮನುಷ್ಯನ ಪ್ರಾಣವನ್ನೇ ತೆಗೆದುಕೊಳ್ಳುತ್ತದೆ. ಚೀನಾ ಇಂದ ಹರಡಿರುವ ಈ ಭಯಾನಕ ವೈರಸ್ ಈಗ ಹೊಂಗ್ ಕೊಂಗ್ ದೇಶಕ್ಕೂ ತಲುಪಿದೆ, ಅಷ್ಟೇ ಏಕೆ ನಿನ್ನೆ ಆಸ್ಟ್ರೇಲಿಯಾ ದೇಶದಲ್ಲಿಯೂ ಕೂಡಾ ಒಬ್ಬ ವ್ಯಕ್ತಿಗೆ ಕೊರೊನ ವೈರಸ್ ಇರುವುದು ಪತ್ತೆಯಾಗಿದ್ದು ಇದು ತುಂಬಾ ವೇಗವಾಗಿ ಹರಡುತ್ತಿದೆ. ಈ ವೈರಸ್ ಸೋಂಕಿದರೆ ಬರುವ ಲಕ್ಷಣಗಳು ಏನೆಂದು ಹೇಳುತ್ತೇವೆ ಮುಂದೆ ನೋಡಿರಿ.

ಇದು ಎಷ್ಟರ ಮಟ್ಟಿಗೆ ವೇಗವಾಗಿ ಹರಡುತ್ತಿದೆ ಅಂದರೆ ಮೊನ್ನೆಯಷ್ಟೇ ಶುರುವಾಗಿದ್ದ ಈ ವೈರಸ್ ಕಾಯಿಲೆ ಈಗಾಗಲೇ ಚೀನಾ ದೇಶದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 1500ಜನರಿಗೆ ಬಂದಿದ್ದು ಅದರಲ್ಲಿ 44ಜನ ಈ ಭಯಾನಕ ಕಾಯಿಲೆಗೆ ಮೃತಪಟ್ಟಿದ್ದಾರೆ. ಈ ಭಯಾನಕ ಕಾಯಿಲೆ ಜಗತ್ತಿನ ಯಾವುದೇ ಜಾಗವನ್ನು ಬಿಡುತ್ತಿಲ್ಲ ಹಾಗು ಕೊರೊನ ವೈರಸ್ ತಗುಲಿರುವ ಮೂರು ಜನರು ಯುರೋಪ್ ಖಂಡದಲ್ಲಿ ಪತ್ತೆಯಾಗಿದ್ದಾರೆ. ಈ ವೈರಸ್ ಭಾರತದಲ್ಲೂ ಬಂದಿರುವ ಸಣ್ಣ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಭಾರತ ದೇಶದಿಂದ ಚೀನಾ ದೇಶಕ್ಕೆ ಪ್ರವಾಶಕ್ಕೆಂದು ಹೋಗಿದ್ದ ಕೇರಳ ಮೂಲದ ಸುಮಾರು ಅರವತ್ತು ಜನ ಮೊನ್ನೆ ಭಾರತಕ್ಕೆ ವಾಪಸ್ ಆಗಿದ್ದು ಅದರಲ್ಲಿ ಏಳು ಜನರ ಮೇಲೆ ನಿಗಾ ಇಡಲಾಗಿದೆ ಯಾಕೆಂದರೆ ಆ ಏಳು ಜನರಲ್ಲಿ ಕೊರೊನ ವೈರಸ್ ಸಣ್ಣ ಸಣ್ಣ ಲಕ್ಷಣಗಳು ಕಂಡುಬಂದಂತಿದ್ದು ಅವರ ಮೇಲೆ ನಿಗಾ ಇಡಲಾಗಿದೆ, ಭಾರತ ದೇಶದ ಪಕ್ಕದ ದೇಶ ನೇಪಾಳ್ ಅಲ್ಲಿಯೂ ಕೂಡಾ ನಿನ್ನೆ ಕೊರೊನ ವೈರಸ್ ಸೋಂಕಿರುವ ರೋಗಿಯೊಬ್ಬರು ದಾಖಲಾಗಿದ್ದಾರೆ. ಹಾಗಾದರೆ ಬನ್ನಿ ಈ ಭಯಾನಕ ‘ಕೊರೊನ’ ವೈರಸ್ ಲಕ್ಷಣಗಳನ್ನು ನೋಡೋಣ.

ಮನುಷ್ಯರಲ್ಲಿ ಕೊರೊನ ವೈರಸ್ ಇಂದ ಕಾಣಿಸಿಕೊಳ್ಳುವ ಲಕ್ಷಣಗಳು:

1.ತಲೆ ನೋವು

2.ಮೂಗು ಸ್ರವಿಯುಕೆ(ಮೂಗಿನಿಂದ ನಿರಂತರ ನೀರು/ದ್ರವ ಬರುವುದು ಅಥವಾ ನೆಗಡಿ ಎನ್ನಬಹುದು)

3.ಸುಸ್ತು,ಆಯಾಸ ಆಗುವುದು

4.ಕೆಮ್ಮು

5.ಜ್ವರ

6.ಗಂಟಲು ಒಣಗುವುದು

7.ಉಸಿರಾಟದ ತೊಂದರೆ, ಮೈಕೈ ನೋವು ಹಾಗು ಇತರೆ ಲಕ್ಷಣಗಳು ಕಂಡುಬರುತ್ತವೆ. ಮುಖ್ಯವಾಗಿ ಈ ವೈರಸ್ ಒಬ್ಬರ ಉಸಿರಿಂದ ಇನ್ನೊಬ್ಬರಿಗೆ ಹರಡುತ್ತಿದ್ದು ನೆಗಡಿ ಕೆಮ್ಮು ಹಾಗು ಜ್ವರ ಇರುವವರಿಂದ ದೂರ ಇರಿ ಹಾಗು ಮುಖಕ್ಕೆ ಮಾಸ್ಕ್ ಅಥವಾ ಕರ್ಚಿಫ್ ಅನ್ನು ಕಟ್ಟಿಕೊಂಡು ಓಡಾಡಿ,ಇದು ಮಾರಣಾಂತಿಕ ವೈರಸ್ ಆಗಿದ್ದು ಜೀವ ಹಾನಿ ಆಗುವ ಸಾಧ್ಯತೆಗಳು ಬಹಳ ಹೆಚ್ಚಾಗಿವೆ.

LEAVE A REPLY

Please enter your comment!
Please enter your name here