ಟಿಕ್ ಟಾಕ್ ಅಲ್ಲಿ ಭಾರತೀಯರ 80ಲಕ್ಷ ರೇಟಿಂಗ್ಸ್ ಅನ್ನು ಡಿಲೀಟ್ ಮಾಡಿದ ಗೂಗಲ್ ಕೊಟ್ಟ ಕಾರಣವೇನು ಗೊತ್ತೇ

0
236

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಷ್ಟರ ಮಟ್ಟಿಗೆ ಬೆಸೆತು ಹೋಗಿದೆ ಅಂದ್ರೆ ಮೂಲಭೂತ ಅವಶ್ಯಕತೆಗಳಲ್ಲೊಂದು ಅನ್ನೋ ಮಟ್ಟಿಗೆ ಜೀವನದ ಭಾಗವಾಗಿದೆ. ಜಾಗತಿಕಮಾನದಲ್ಲಿ ಸ್ಪರ್ಧೆ ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲೂ ಉಂಟು ಅದೇ ರೀತಿ ಈ ಸಾಮಾಜಿಕ ಜಾಲತಾಣದಲ್ಲೂ ಕೂಡ ಅದರಲ್ಲೂ ಈ ಫೇಸ್ ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಇಂತಹ ದೈತ್ಯ ಕಂಪನಿಗಳನ್ನೆ ಹಿಂದಿಕ್ಕಿ ಮುನ್ನುಗ್ಗುತ್ತಿದುದು ಚೀನಾದ ಟಿಕ್ಟಾಕ್ ಎಂಬ ಸಾಮಾಜಿಕ ಜಾಲತಾಣ. ಇದು ಎಲ್ಲರಿಗೂ ತಿಳಿದಿರುವ ವಿಷಯ ಇದೀಗ ಹೆಚ್ಚು ಚರ್ಚಿತವಾಗಿರುವ ವಿಷಯ ಅಂದರೆ ಟಿಕ್ ಟಾಕ್ ರೇಟಿಂಗ್ ಇದ್ದಕಿದ್ದಂತೆ ಗಣನೀಯವಾಗಿ ಇಳಿಮುಖ ಕಂಡಿದೆ.

ಕಾರಣ ಕೊರೋನ ಎಂಬ ಮಹಾಮಾರಿ ವೈರಸ್ ಅನ್ನು ಪರಿಚಯಿಸಿದ ಚೀನಾ ದೇಶದ ಎಲ್ಲ ವಸ್ತುಗಳನ್ನು ಭಾರತದೇಶದಲ್ಲಿ ನಿಷೇಧ ಮಾಡಬೇಕು, ಟಿಕ್ ಟಾಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂಬ ಕೂಗು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿಯೆ ಸದ್ದು ಮಾಡಿದೆ. ಟ್ವಿಟ್ಟರ್ ಹ್ಯಾಷ್ ಟ್ಯಾಗ್ ಅಭಿಯಾನವು ಸಹ ನಡೆಯುತ್ತಿದ್ಧು ಇದರ ಪರಿಣಾಮ ಏನೋ ಎಂಬಂತೆ ಟಿಕ್ ಟಾಕ್ ನ ರೇಟಿಂಗ್ ಗಣನೀಯವಾಗಿ ಇಳಿಮುಖ ಕಂಡಿದೆ.

ದೈತ್ಯ ಕಂಪನಿಗಳನ್ನು ಹಿಂದಿಕ್ಕಿ ನಂ1ಸ್ಥಾನದಲ್ಲಿದ್ದ ಟಿಕ್ ಟಾಕ್ ಇದೀಗ ರೇಟಿಂಗ್ ಕುಸಿತ ಕಂಡಿತು. ಗೂಗಲ್ ನಲ್ಲಿ ಟಿಕ್ ಟಾಕ್ ಬಗ್ಗೆ ಕೆಲವರು ನಕರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುವುದಲ್ಲದೆ ಋಣಾತ್ಮಕ ಕಮೆಂಟ್ ಮಾಡಿರುವುದರ ಪರಿಣಾಮ ಟಿಕ್ ಟಾಕ್ನ ಡೌನ್ ಲೌಡ್ ಮತ್ತು ಬಳಕೆದಾರರ ಪ್ರಮಾಣ ಕಡಿಮೆ ಆಗಿತ್ತು, ಆದ ಕಾರಣ ಗೂಗಲ್ ನಲ್ಲಿದ್ದ ಐದು ಮಿಲಿಯನ್ ನಕರಾತ್ಮಕ ವಿಮರ್ಶೆಗಳನ್ನು ತೆಗೆದುಹಾಕಲಾಗಿದೆ. ಪ್ರಸ್ತುತದ ಮಟ್ಟಿಗೆ ಟಿಕ್ ಟಾಕ್ ನ ರೇಟಿಂಗ್ 4.4 ಆಗಿದ್ದು ಕೊಂಚ ಚೇತರಿಕೆ ಕಂಡಿದೆ.

ಗೂಗಲ್ ತಂಡದವರು ಹೇಳುವ ಪ್ರಕಾರ ಗೂಗಲ್ ನಿಯಮಗಳಂತೆ ತುಂಬಾ ಜನರು ಬೇಕಂತಲೇ ಒಂದು ಅಪ್ಲಿಕೇಶನ್ ಅನ್ನು ನಕಾರಾತ್ಮಕ ರೇಟಿಂಗ್ಸ್ ಇಂದ ಹಾಳುಮಾಡುವಂತಿಲ್ಲ ಎಂದು ಸುಮಾರು ಎಪ್ಪತ್ತು ಲಕ್ಷ ಭಾರತೀಯರ ನೆಗೆಟಿವ್ ರೇಟಿಂಗ್ಸ್ ಅನ್ನು ಡಿಲೀಟ್ ಮಾಡಿದೆ, ಇದರಿಂದ ಟಿಕ್ ಟಾಕ್ ರೇಟಿಂಗ್ಸ್ ಮತ್ತೆ ನಾಲ್ಕಕ್ಕೇರಿದೆ.

LEAVE A REPLY

Please enter your comment!
Please enter your name here