ಟ್ಯಾಟೂ ಹಾಕಿಸಿಕೊಳ್ಳುವವರು ಈ ರೋಗಗಳ ಬಗ್ಗೆ ಎಚ್ಚರವಹಿಸಿ

0
281

ಇಂದು ಟ್ಯಾಟೋ ಹಾಕಿಸಿಕೊಳ್ಳುವುದು ಇಂದಿನ ಯುವಕ ಯುವತಿಯರಿಗೆ ಒಂದು ರೀತಿಯ ಕ್ರೇಜ಼್ ಆಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ, ಆದರೆ ಇದು ಇತಿ ಮಿತಿ ಗಡಿಯನ್ನು ಮೀರಬಾರದು. ಇದನ್ನು ನಾವು ನಮ್ಮ ಪೂರ್ವಿಕರ ಜಮಾನದಲ್ಲಿ ಗಮನಿಸುವುದಾದರೆ ಹಿಂದೆಲ್ಲಾ ವಯಸ್ಸಾದ ಅಜ್ಜ ಅಜ್ಜಿಯರು ತಮ್ಮ ಕೈಯ ಮಧ್ಯಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಹಾಗೆ ಮದುವೆಯಾದ ಹೆಂಗಸರು ತನ್ನ ಗಂಡನ ಹೆಸರನ್ನು ಹೇಳುವುದಕ್ಕೆ ನಾಚಿಕೆ ಮುಜುಗರ ಪಡುತಿದ್ದರು, ಆದ ಕಾರಣ ಅವರು ಕೂಡ ಈ ರೀತಿಯಾಗಿ ತನ್ನ ಗಂಡನ ಹೆಸರನ್ನು ಅಥವಾ ಅವರ ಹೆಸರಿನ ಆರಂಭದ ಅಕ್ಷರವನ್ನು ಹಚ್ಚೆಯಾಗಿ ಹಾಕಿಸಿಕೊಳ್ಳುತಿದ್ದರು.

ಆದರೆ ಇಂದು ಹರೆಯದ ಯುವಕರಿಂದ ಸೆಲೆಬ್ರಿಟಿಗಳವರೆಗೆ ಇದರ ಹುಚ್ಚು ಹಲವರಿಗೆ ಹೆಚ್ಚಾಗಿದೆ, ಅದರಲ್ಲೂ ಭಿನ್ನ ವಿಭಿನ್ನ ಶೈಲಿಯ ಟ್ಯಾಟೋಗಳು ಕಾಲಿನಿಂದ ಕುತ್ತಿಗೆಯವರಿಗೆ ಟ್ಯಾಟೋ ಹಾಕಿಸಿಕೊಳ್ಳುವ ಪರಿ ನೋಡಿದರೆ ನಿಜಕ್ಕೂ ಎತ್ತ ಸಾಗುತ್ತಿದೆ ಈ ಯುವಕರ ಆಸಕ್ತಿ ಎನ್ನುವಂತಿದೆ. ಅವರ ರುಚಿ, ಅಭಿಪ್ರಾಯಗಳು, ಯೋಚನಾ ಕ್ರಮಗಳು ವಿಭಿನ್ನವಾಗಿವೆ, ಅದು ಈ ಟ್ಯಾಟೋಗಳಲ್ಲೂ ಕೂಡ ಮುಂದುವರೆದಿದೆ. ನೀವು ಕೂಡ ಟ್ಯಾಟೋ ಪ್ರಿಯರೆ ಹಾಗಾದ್ರೆ ನೀವು ವರದಿಯನ್ನು ಸಂಪೂರ್ಣವಾಗಿ ಓದಲೇಬೇಕಾಗುತ್ತದೆ.

ಹೌದು ಟ್ಯಾಟೋವನ್ನು ನೀವು ಎಲ್ಲಿ ಹಾಕಿಸಿಕೊಳ್ಳಬೇಕು? ಯಾರ ಹತ್ತಿರ ಹಾಕಿಸಿಕೊಳ್ಳಬೇಕು ಎಂದು ತಿಳಿಯದಿದ್ದರೆ ಇಂದು ಈ ಟ್ಯಾಟೋವನ್ನು ಬೀದಿ ಬೀದಿ ಗಳಲ್ಲಿ ಪ್ರತಿಷ್ಟಿತ ರಸ್ತೆಗಳ ಬದಿಯಲ್ಲಿ ಹಾಕುತ್ತಿರುತ್ತಾರೆ, ಆದರೆ ಇವರಿಗೆ ಎಷ್ಟರಮಟ್ಟಿಗೆ ಟ್ಯಾಟೋ ಬಗ್ಗೆ ಅರಿವಿದೆ ಅದನ್ನು ಹಾಕುವ ಕೌಶಲ್ಯವಿದಿಯಾ ಎಂಬುದನ್ನು ನಾವುಯೋಚಿಸಬೇಕಾಗುತ್ತದೆ. ನಾವೇನಾದರೂ ಇಂತಹವರ ಬಳಿ ಹಾಕಿಸಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗದರೆ ಯಾರ ಬಳಿ ಟ್ಯಾಟೋ ಹಾಕಿಸಿಕೊಳ್ಳಬೇಕು ಟ್ಯಾಟೋ ಹಾಕುವವರ ಹಿನ್ನೆಲೆಯನ್ನು ಕೂಡ ಗಮನಿಸಬೇಕಾಗಿರುತ್ತದೆ.

ಇದಕ್ಕೆ ಅಂತಾನೆ ಕೆಲವು ವ್ಯಕ್ತಿಗಳು ತರಬೇತಿ ಪಡೆದು ಗುಣಮಟ್ಟದ ಟ್ಯಾಟೋಗಳನ್ನು ಹಾಕುವವರು ಇರುತ್ತಾರೆ. ಕಮ್ಮಿ ಹಣಕ್ಕೆ ಟ್ಯಾಟೋ ಹಾಕ್ತಾರೆ ಅಂತ ನೀವು ಅವರಿವರ ಬಳಿ ಹಾಕಿಸಿಕೊಳ್ಳಬೇಡಿ, ಎಚ್ಚರವಿರಲಿ ಟ್ಯಾಟೋ ಹಾಕಿಸಿಕೊಳ್ಳುವಾಗ ನೂರಕ್ಕೂ ಹೆಚ್ಚುಭಾರಿ ಚುಚ್ಚುತ್ತಾರೆ ಆಗ ಚೂಜಿಯು ನಿಮ್ಮರಕ್ತದೊಂದಿಗೆ ಸಂಪರ್ಕ ಹೊಂದುತ್ತದೆ, ಇದರಿಂದ ಸಾಂಕ್ರಮಿಕ ರೋಗದ ಜೊತೆಗೆ ಏಡ್ಸ್ ನಂತಹ ಕಾಯಿಲೆಗಳಿಗೆ ದಾರಿಮಾಡಿಕೊಡುತ್ತವೆ ಅದರಿಂದ ಟ್ಯಾಟೋ ಹಾಕಿಸಿಕೊಳ್ಳುವಾಗ ಇರಲಿ ಎಚ್ಚರ.

ನಂತರ ಟ್ಯಾಟೋ ಹಾಕಿಸಿಕೊಂಡ ಮೇಲೆ ಚರ್ಮದ ಆರೈಕೆ ಮಾಡಬೇಕಾಗಿರುತ್ತದೆ ಸೂರ್ಯನ ಕಿರಣಗಳಿಗೆ ಬೀಳದಂತೆ ನೋಡಿಕೊಳ್ಳಬೇಕು. ಕೆಲವು ಸಲ ಬೇಸಿಗೆ ಸಮಯದಲ್ಲಿ ಹಾಕಿಸಿಕೊಂಡಾಗ ಬೆವರಿನಿಂದ ತುರಿಕೆ ಪ್ರಾರಂಭವಗುತ್ತದೆ ಆಗ ನೀವು ಅದನ್ನು ಉಜ್ಜಬಾರದು, ಯಾವುದೇ ಕ್ರೀಮ್ ಗಳನ್ನು ಹಚ್ಚಬಾರದು. ಅದಕ್ಕಾಗಿಯೇ ಟ್ಯಾಟೋವನ್ನು ಚಳಿಗಾಲ ಅಥವಾ ವಾತವರಣ ತಂಪಾಗಿದ್ದಾಗ ಹಾಕಿಸಿಕೊಳ್ಳಬೇಕು ಆಗ ಈ ರೀತಿಯ ಸಮಸ್ಯೆಗಳಿಂದ ದೂರ ಉಳಿಯಬಹುದು.

ಟ್ಯಾಟೋ ವಿನ್ಯಾಸದಲ್ಲಿ ಆದಷ್ಟು ಸಣ್ಣಟ್ಯಾಟೋವಿರಲಿ ತುಂಬಾ ದೊಡ್ಡದಾದ ಟ್ಯಾಟೋ ನೋಡಲು ವಿಕಾರವಾಗಿ ಕಾಣಬಹುದು ಹಾಗೆ ಟ್ಯಾಟೋವನ್ನು ನೀವು ಪ್ರೀತಿಸುವ ವ್ಯಕ್ತಿಗಳ ಹೆಸರಿನ ಅಕ್ಷರವನ್ನು ಹಾಕಿಸಿಕೊಳ್ಳುವಾಗ ಸ್ವಲ್ಪ ಮುಂದಾಲೋಚನೆ ಇರಲಿ, ಅವರೇನಾದರೂ ನಿಮ್ಮನ್ನು ಬಿಟ್ಟು ಹೋದಾಗ ನಿಮ್ಮ ಮದುವೆಯ ಸಂಧರ್ಭದಲ್ಲಿ ತೊಡಕಾಗಬಹುದು.

ಹಾಗಾಗಿ ನಿಮಗೇನಾದರೂ ಟ್ಯಾಟೋ ತೆಗೆಸಬೇಕು ಅಂದನಿಸಿದಾಗ ಅದನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ, ಇದಕ್ಕಾಗಿ ನೀವು ಚರ್ಮದ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಕೇವಲ ಚುಚ್ಚುಮದ್ದಿಗೆ ಎದುರುವ ವ್ಯಕ್ತಿಗಳು ಟ್ಯಾಟೋ ಹಾಕಿಸಿಕೊಳ್ಳಬೇಕು ಎನ್ನುವವರು ನೀವಾಗಿದ್ದರೆ ಇದಕ್ಕೆಲ್ಲಾ ಒಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

LEAVE A REPLY

Please enter your comment!
Please enter your name here