ಈಗಲೂ ತಮಿಳು ತೆಲುಗು ಜನರು ಮುಗಿಬಿದ್ದು ನೋಡುತ್ತಿದ್ದಾರೆ ಕನ್ನಡದ ಈ ಸಿನಿಮಾವನ್ನ!

0
562

ದಿಯಾ ಸಿನಿಮಾ ಖ್ಯಾತಿಯ ನಾಯಕ ಪೃಥ್ವಿ ಅಂಬರ್ಗೆ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರಿಂದ ಪ್ರಶಂಸೆ! ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಂದ ಮೆಚ್ಚುಗೆಯ ಮಾತುಗಳನ್ನು ಪಡೆದು ಸ್ವತಃ ಪುನೀತ್ ಅವರ ಪಿಆರ್ಕೆ ಪ್ರೊಡಕ್ಷನ್ ಇಂದ ಬಂಪರ್ ಆಫರ್ ಪಡೆದ ಪೃಥ್ವಿ. ಕನ್ನಡ ಚಿತ್ರರಂಗ ಮತ್ತೆ ತನ್ನ ವೈಭವವನ್ನು ಮರಕಳಿಸುತ್ತಿದೆ ಎಂದರೆ ತಪ್ಪಾಗಲಾರದು ಹೌದು ಕಳೆದ ವರ್ಷಗಳಲ್ಲಿ ಬಂದ ಕನ್ನಡ ಚಿತ್ರಗಳು ವಿಭಿನ್ನ ಪ್ರಯೋಗ ಮಾಡಿ ಯಶಸ್ಸು ಪಡೆದಿವೆ. ಅದರಲ್ಲೂ ಹೊಸಬರ ಚಿತ್ರವೇ ಗಮನ ಸೆಳೆದಿರುವುದು ನಿಜಕ್ಕೂ ಖುಷಿಯ ವಿಚಾರ. ಅದೇ ಕ್ಲಾಸ್ ಸಿನಿಮಾ ಜಾನರ್ ಆಗಿರುವ ‘ದಿಯಾ’ ಸಿನಿಮಾ ಹೆಚ್ಚು ಅಭಿನಯಕ್ಕೆ ಒತ್ತು ನೀಡಿರುವಂತೆ ಸಸ್ಪೆನ್ಸ್ ಮೂಲಕವೇ ತನ್ನತ್ತ ಗಮನ ಸೆಳೆದು ಚಿತ್ರರಸಿಕರನ್ನು ರಂಜಿಸಿತು.

ದಿಯಾ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಪಡೆದರು ಸಹ ಥಿಯೇಟರ್ ಅಂಗಳದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಈ ಲಾಕ್ ಡೌನ್ ಸಮಯದಲ್ಲಿ ಅಮೇಜಾನ್ ಪ್ರೈಮ್ ಓಟಿಟಿ ಪ್ಲಾಟ್ ಪಾರ್ಮ್ ಮೂಲಕ ವೀಕ್ಷಣೆ ಮಾಡಿದವರಿಂದ ಭಾರಿ ಜನ ಮೆಚ್ಚುಗೆ ಪಡೆಯಿತು. ಈ ಚಿತ್ರದಲ್ಲಿ ಮಧ್ಯಭಾಗದಲ್ಲಿ ಬಂದು ಚಿತ್ರದ ಅಂತಿಮವಾಗಿ ಕಾಡುವ ಪಾತ್ರ ಎಂದರೆ ಅದು ಆದಿ. ಆದಿ ಪಾತ್ರವನ್ನು ಮೆಚ್ಚಿ ನಟ ಪುನೀತ್ ರಾಜ್ ಕುಮಾರ್ ಕರೆ ಮಾಡಿ ಪೃಥ್ವಿ ಅಂಬಾರ್ ಕರೆಮಾಡಿ ನಿಮ್ಮ ಅಭಿನಯ ಚೆನ್ನಾಗಿದೆ ಮುಂದಿನ ದಿನಗಳಲ್ಲಿ ಭೇಟಿ ಮಾಡೋಣ ಎಂದು ಹೇಳಿದ್ದಾರೆ ಎಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೃಥ್ವಿ ಅಂಬಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಅದಲ್ಲದೆ ಇವರ ಅಭಿನಯಕ್ಕೆ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಹ ಕರೆಮಾಡಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅವರ ಪ್ರೋತ್ಸಾಹಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ತಿಳಿಸಿದ್ದಾರೆ, ಪೃಥ್ವಿ ಅಂಬಾರ್ ಮೂಲತಃ ಕಾಸರ ಗೋಡಿನವರಾಗಿದ್ದು ತುಳುವಿನಲ್ಲಿ ಹದಿನೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ರಾಧರಮಣ, ಲವಲವಿಕೆ, ಸಾಗರ ಸಂಗಮ, ಜೊತೆಜೊತೆಯಲಿ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪೃಥ್ವಿ ಅಂಬಾರ್ ಸಧ್ಯಕ್ಕೆ ಹೆಂಗಳೆಯರ ಮನಗೆದ್ದು ಮನೆ ಮಾತಾಗಿದ್ದಾರೆ.

ದಿಯಾ ಸಿನಿಮಾ ರಿಲೀಸ್ ಆಗುವ ಮುಂಚೆಯೇ ಪೃಥ್ವಿ ಅಂಬಾರ್11 ವರ್ಷಗಳ ಹಿಂದೆ ಹೈದರ್ ಬಾದ್ ನಲ್ಲಿ ನಡೆದ ಗ್ರೇಟ್ ಕರ್ನಾಟಕ ಡ್ಯಾನ್ಸ್ ಲೀಗ್ ರಿಯಾಲಿಟಿ ಶೋನಲ್ಲಿ ಪರಿಚಯವಾಗಿದ್ದ ಮುಂಬೈ ಮೂಲದ ಪಾರುಲ್ ಶುಕ್ಲಾ ಅವರನ್ನು ಮದುವೆಯಾಗಿದ್ದಾರೆ ನನ್ನ ಪತ್ನಿ ನನ್ನ ಕಷ್ಟದ ದಿನಗಳಿಂದಲೂ ನನ್ನ ಬೆನ್ನೆಲುಬಾಗಿ ನಿಂತಿದ್ದಾಳೆ ಎಂದು ತನ್ನ ಮಡದಿಯ ಬಗ್ಗೆ ಪ್ರಶಂಸೆ ಮಾತುಗಳನ್ನಾಡಿದ್ದಾರೆ. ಪೃಥ್ವಿ ಅಂಬಾರ್ ಸಧ್ಯಕ್ಕೆ ನವೀನ್ ದ್ವಾರಕನಾಥ್ ಅವರ ನಿರ್ದೇಶನದಲ್ಲಿ ಫಾರ್ ರೆಗ್ ಎಂಬ ಸಿನಿಮಾದಲ್ಲಿ ಲಾಕ್ ಡೌನ್ ಮುಗಿದ ನಂತರ ಬಿಝಿಯಾಗಲಿದ್ದಾರೆ.

ಜೊತೆಗೆ ರಾಕೇಟ್ ಎಂಬ ಸಿನಿಮಾ ಅವರ ಕೈಯಲ್ಲಿದೆ ದಿಯಾ ಸಿನಿಮಾದ ಈ ನಾಯಕ ತನ್ನ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಅಷ್ಟೇ ಏಕೆ ನೀವು ಸಾಮಾಜಿಕ ಜಾಲತಾಣಗಳಿಗೆ ಹೋದರೆ ಸಾಕು ಹೊರರಾಜ್ಯದ ಹಾಗು ಪಕ್ಕದ ತಮಿಳುನಾಡು, ಕೇರಳ ಹಾಗು ಆಂಧ್ರದ ಜನರು ಈ ಚಿತ್ರಕ್ಕೆ ಮುಗಿಬಿದ್ದಿದ್ದು ಪ್ರತಿನಿತ್ಯ ದಿಯಾ ಚಿತ್ರವನ್ನು ಹಾದಿ ಹೊಗಳುತ್ತಿದ್ದಾರೆ. ದಿಯಾ ಮತ್ತು ಲವ್ ಮಾಕ್ ಟೈಲ್ ತರದ ಚಿತ್ರಗಳಿಂದ ಕನ್ನಡ ಚಿತ್ರರಂಗವನ್ನು ಪರಭಾಷಿಗರು ಮೆಚ್ಚುತ್ತಿರುವುದು ಸಂತೋಷಕರ ವಿಷಯ. ನೀವು ಡೈ ಹಾಗು ಲವ್ ಮಾಕ್ ಟೈಲ್ ಚಿತ್ರವನ್ನು ನೋಡಿಲ್ಲ ಅಂದರೆ ಅಮೆಜಾನ್ ಅಥವಾ ಟೆಲಿಗ್ರಾಂ ಅಲ್ಲಿ ನೋಡಬಹುದು.

LEAVE A REPLY

Please enter your comment!
Please enter your name here