ತಾಜ್ ಮಹಲಿನ ಈ ಒಂದು ಬಾಗಿಲನ್ನು ತೆಗೆಯಲು ಸರ್ಕಾರವೇ ಭಯ ಬೀಳುತ್ತಿರುವುದೇಕೆ ಗೊತ್ತೇ

0
271

ನಿಗೂಢ ರಹಸ್ಯ ಎಂಬುದು ಎಲ್ಲರನ್ನೂ ಕುತೂಹಲ ಕೆರಳಿಸುತ್ತದೆ ಅದೇನು? ಅದ್ಯಾಕೆ ಇಲ್ಲದೆ, ಅದರ ರೂಪ ಏಕೆ ಹಾಗಿದೆ ಆ ಸ್ಥಳಕ್ಕೆ ಹೋಗುವುದಾದರೂ ಹೇಗೆ ಅಲ್ಲಿ ಏನಾದರೂ ನಿಧಿ ಇದಿಯ? ಅಲ್ಲಿ ಸದಾ ಆ ಮನೆಗೆ ಬೀಗ ಹಾಕಿದಂತೆಯೇ ಇರುತ್ತದಲ್ಲ ಅಲ್ಲಿ ಯಾರಾದರೂ ವಾಸ ಮಾಡುತ್ತಿದ್ದಾರೆಯೇ ಹಾಗದರೇ ಅವರ್ಯಾಕೆ ಯಾರಿಗೂ ಕಾಣಿಸಿಕೊಳ್ಳುವುದಿಲ್ಲ. ಹೀಗೆ ನಮಗೇನಾದರೂ ನಿಗೂಢವಾದ ವಿಷಯ, ವಸ್ತು ನೋಡಿದಾಗ, ಕೇಳಿದಾಗ ನಮ್ಮೊಳಗೆ ಮೂಡುವ ಪ್ರಶ್ನೆಗಳು ಇವು. ಜಗತ್ತಿನೊಳಗೆ ಹಲವಾರು ನಿಗೂಡಗಳಿವೆ ಅದೇ ರೀತಿ ನಮ್ಮನ್ನು ಕುತೂಹಲ ಕೆರಳಿಸುವಂತೆ ಮಾಡುವ ವರದಿಯೊಂದಿದೆ.

ಅದೇನು ಅಂದರೆ ಪ್ರಪಂಚದ ಏಳು ಅದ್ಬುತಗಳಲ್ಲಿ ಒಂದಾದ ಷಹಜಹಾನ್ ನಿರ್ಮಿಸಿರುವ ಅಮೃತಶಿಲೆಯಿಂದ ತಲೆಯೆತ್ತಿರುವ ತಾಜ್ ಮಹಲ್ ಬಗ್ಗೆ ಹೌದು ಕೆಲವು ವಿಷಯಗಳನ್ನು ಎಲ್ಲರಿಂದಲೂ ಮುಚ್ಚಿಡಲಾಗಿದೆ. ಅದು ತಾಜ್ ಮಹಲ್ನ ನೆಲಮಾಳಿಗೆಯ ರಸ್ತೆ ಇದನ್ನು ಸಾರ್ವಜನಿಕವಾಗಿ ತಿಳಿಸಲು ಇದರ ಬಗ್ಗೆ ಮಾಹಿತಿ ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತವೆ. ಹಾಗದರೆ ಅದಕ್ಕೆ ಕಾರಣವಾದು ಏನು? ನಮಗೆಲ್ಲರಿಗೂ ತಿಳಿದಿರುವಂತೆ ತಾಜ್ ಮಹಲ್ ನ ನಿರ್ಮಾಣ 1631ರಲ್ಲಿ ಆರಂಭವಾಗಿ 1658ರಂದು ಇದರ ನಿರ್ಮಾಣ ಕಾರ್ಯ ಮುಗಿದಿತ್ತು.

ಅದಕ್ಕಾಗಿ ಇದನ್ನು ಪ್ರಪಂಚದಲ್ಲಿ ತನ್ನದೆಯಾದ ಪ್ರಾಧನ್ಯತೆಯನ್ನು ಪಡೆದುಕೊಂಡಿತು ಆದರೆ ಇದರಲ್ಲಿ ಒಂದು ವಿಷಯ ಬಹಿರಂಗವಾಗಿದೆ ಇತ್ತೀಚಿನ ದಿನಗಳಲ್ಲಿ ಸಂಶೋಧಕರು ತಾಜ್ ಮಹಲ್ನ ನೆಲಮಾಳಿಗೆಯಲ್ಲಿ ಸಾವಿರಾರು ಕೊಠಡಿಗಳಿವೆ ಎನ್ನುವುದು ಎಲ್ಲರನ್ನು ಕುತೂಹಲಕ್ಕೆ ತಳ್ಳಿದೆ. ತಾಜ್ ಮಹಲ್ ಅಡಿಪಾಯ ಅದರ ಮೇಲೆ ಎಷ್ಟು ಎತ್ತರವಾಗಿ ಕಟ್ಟಿದ್ದಾರೋ ಅಷ್ಟು ಅಡಿಪಾಯಲನ್ನು ಭೂಮಿಯ ಕೆಳಗೆ ಕಟ್ಟಿದ್ದಾರೆ ಎಂಬುದು ಹಿಂದೆ ರಾಜರ ಕಾಲದಲ್ಲಿ ಯಾವುದೇ ಕೋಟೆಯನ್ನು ನಿರ್ಮಿಸುವಾಗ ಅದಕ್ಕೆ ತಮಗೆ ಬೇಕಾದಾಗ ಯಾರಿಗೂ ತಿಳಿಯದ ಹಾಗೇ ಓಡಾಡಲು, ರಾಜ್ಯದ ರಹಸ್ಯಗಳನ್ನು ಕಾಪಾಡಲು ಸುರಂಗ ಮಾರ್ಗಗಳನ್ನು ಕೋಟೆಯ ಒಳಗಡೆಯೇ ಕಟ್ಟಿಸುತ್ತಿದ್ದರು.

ಹಾಗೆಯೇ ಷಹಜಹಾನು ಕೂಡ ತಾಜ್ ಮಹಲ್ ಕಟ್ಟಿಸುವಾಗ ನೆಲಮಾಳಿಗೆಯಲ್ಲಿ ಒಂದು ರಸ್ತೆಯನ್ನು ನಿರ್ಮಿಸಿರಬಹುದು ಅದು ತುಂಬಾ ದೂರದ ದಾರಿಗೆ ಮಾರ್ಗವಾಗಿದೆ ಇದನ್ನು ಷಹಜಹಾನ್ ಮುಚ್ಚಿಟ್ಟಿದ್ದಾನೆ. ಸಂಶೋಧಕರು ಹೇಳುವ ಪ್ರಕಾರ ಕೆಲವು ಕೊಠಡಿಗಳನ್ನು ಇಟ್ಟಿಗೆಗಳಿಂದ ಮುಚ್ಚಿಟ್ಟಿದನು, ಆದರೆ ಯಾಕೆ ಮುಚ್ಚಿಟ್ಟ ಎಂಬುದಕ್ಕೆ ಕೆಲವು ಸಂಶೋಧಕರು ಈ ಕೋಣೆಯ ಒಳಗೆ ಮುಮ್ತಾಜ್ ನ ಸಮಾಧಿ ಇದೆ ಎಂದು ಹೇಳುತ್ತಾರೆ ಹಾಗಾಗಿ ಸರ್ಕಾರ ಆದೇಶದ ಮೇರೆಗೆ ಈ ಕೋಣೆಗಳನ್ನು ಮುಚ್ಚಲಾಗಿದೆ ಎಂದು ತಿಳಿಸುತ್ತಾರೆ.

ಕೆಲವು ಪುರಾತನ ಶಾಸ್ತ್ರ ಸಂಸ್ಥೆಗಳು ತಾಜ್ ಮಹಲ್ ನ ಸ್ಥಳದಲ್ಲಿ ಮುಂಚೆ ಅಲ್ಲಿ ಶಿವನ ದೇವಾಲಯವಿತ್ತು ಅದಕ್ಕೆ ತೇಜೋ ಮಂದಿರ ಅಂತ ಕರೆಯುತ್ತಿದ್ದರು ನಂತರ ಅದರ ಮೇಲೆ ತಾಜ್ ಮಹಲ್ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಈ ನೆಲ ಮಾಳಿಗೆಗಳು ತಾಜ್ ಮಹಲ್ ಗಿಂತ ಹಳೆಯದಾಗಿದೆ ಎಂದು ಹೇಳುತ್ತಾರೆ. ಆದರೆ ಈಗ ಹರಿದಾಡುತ್ತಿರುವ ಸುದ್ದಿ ಏನೆಂದರೆ ನೆಲಮಾಳಿಗೆಯಲ್ಲಿ ಬೆಲೆಬಾಳುವ ವಜ್ರ ವೈಡುರ್ಯಗಳಿವೆ.

ಇದೇನಾದರು ಹೊರಗಡೆ ಬಂದರೆ ಇಡೀ ಇತಿಹಾಸವೇ ಬದಲಾಗುತ್ತದೆ ಎಂದು ಹಲವು ಸಂಶೋಧಕರು ಹೇಳುವಂತೆ ಈ ಕೊಠಡಿಗಳನ್ನು ಮೊದಲೆ ತೆಗೆದು ಮತ್ತೆ ಮುಚ್ಚಲಾಗಿದೆ ಎಂದು ಆಗ ಮತ್ತಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ, ಈ ಕೊಠಡಿಗಳಿಂದ ಅಂಥದೆನಿದೆ ಸರ್ಕಾರಕ್ಕೆ ಏಕೆ ಇದರ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿವೆ ಎಂಬುದನ್ನು ಇತಿಹಾಸಕಾರರು ಮುಂದೆ ಏನಾದರೂ ಸಂಶೋಧಿಸಿ ಇದಕ್ಕೆ ಸಂಬಂಧಪಟ್ಟಂತಹ ವಿಚಾರವನ್ನು ಏನಾದರು ಬಹಿರಂಗ ಪಡಿಸುತ್ತಾರಾ ಎಂದು ಭವಿಷ್ಯದಲ್ಲಿ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here