ಶೈನ್ ಶೆಟ್ಟಿ ಅವರ ‘ಗಲ್ಲಿ ಕಿಚನ್’ ಹೋಟೆಲ್ ದಿನದ ಗಳಿಕೆ ಎಷ್ಟು ಗೊತ್ತೇ

0
477

ಬಿಗ್ ಬಾಸ್ಗೆ ಹೋಗುವ ಮೊದಲೇ ಶೈನ್ ಶೆಟ್ಟಿ ಅವರಿಗೆ ಒಂದು ಅವಕಾಶ ಸಿಕ್ಕಿತ್ತಂತೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಒಂದು ಸಿನಿಮಾದ ಮಾತುಕತೆ ಆಗಿತ್ತು. ಬಿಗ್ ಬಾಸ್ ಆಫರ್ ಬಂದಾಗ ನಾನು ಚಿತ್ರತಂಡದ ಜೊತೆ ಮಾತಕತೆ ನಡೆಸಿದೆ. ಆಗ ಅವರು ಬಿಗ್‍ ಬಾಸ್‍ಗೆ ಹೋಗಿ ಎಂದು ಹೇಳಿದ್ದರು. ನಾನು ಬಿಗ್ ಬಾಸ್ ಗೆದ್ದಾಗ ಅವರು ಕರೆ ಮಾಡಿದ್ದರು. ಶೀಘ್ರದಲ್ಲೇ ಯಾರು, ಯಾವ ಪ್ರೊಡಕ್ಷನ್ ಹೌಸ್, ಯಾವ ಬ್ಯಾನರ್ ಎನ್ನುವುದನ್ನು ಹೇಳುತ್ತೇನೆ ಎಂದು ಶೈನ್ ತಿಳಿಸಿದ್ದಾರೆ.

ಶೈನ್ ಶೆಟ್ಟಿ ಅವರು ನಟಿಸುತ್ತಿರುವ ಸಿನಿಮಾವನ್ನು ‘ರಿಷಬ್ ಶೆಟ್ಟಿ ಫಿಲ್ಮ್ಸ್’ ನಿರ್ಮಿಸುತ್ತಿದೆ ಎಂಬ ವಿಷಯ ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ. ‘ಕಥಾಸಂಗಮ’ ಚಿತ್ರದ ಏಳು ನಿರ್ದೇಶಕರಲ್ಲಿ ಒಬ್ಬರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಶೈನ್ ಈ ಸಿನಿಮಾದ ಮಾತುಕತೆ ನಡೆಸಿದ್ದರು.

ಬಿಗ್ ಬಾಸ್ ಗೆದ್ದ ಬಳಿಕ ಮಾತನಾಡಿದ ಶೈನ್, ಈ ಕ್ಷಣ ನಾನು ಖುಷಿಯಲ್ಲಿ ತೇಲಾಡುತ್ತಿದ್ದೇನೆ. ನನ್ನ ಇಷ್ಟು ವರ್ಷ ಶ್ರಮಕ್ಕೆ ಹಾಗೂ ಪ್ರಯತ್ನಕ್ಕೆ ಒಂದು ಫಲ ಸಿಕ್ಕಿದೆ. ದೇವರು ಕೊಡಬೇಕಾದರೆ ಎಲ್ಲವನ್ನು ಕೊಡುತ್ತಾರೆ ಎನ್ನುವಂತ ಫೀಲಿಂಗ್ ನಲ್ಲಿ ನಾನಿದ್ದೇನೆ ಎಂದು ಗೆಲುವಿನ ಅನುಭವವನ್ನು ಹಂಚಿಕೊಂಡಿದ್ದರು. ಈಗ ಶೈನ್ ಶೆಟ್ಟಿ ಅವರ ಹೋಟೆಲ್ ವಿಷಯ ನೋಡಿರಿ, ಚಿತ್ರರಂಗದಲ್ಲಿ ಅವಕಾಶಗಳು ಕಮ್ಮಿ ಆದಾಗ ತೆಗೆದ ಗಲ್ಲಿ ಕಿಚನ್ ಇಂದು ತುಂಬಾ ಸುದ್ದಿಯಾಗುತ್ತಿದೆ.

ಬಿಗ್ ಬಾಸ್ ಸೀಸನ್7 ಬಹಳ ರೋಚಕತೆಯಿಂದಾಗಿ ಎಲ್ಲರಲ್ಲೂ ಕುತೂಹಲ ಮೂಡಿಸಿ ಶೈನ್ ಶೆಟ್ಟಿ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು ಇದು ಹಳೆಯ ಸುದ್ದಿ. ಹಾಗದರೇ ಮತ್ತೆ ಶೈನ್ ಶೆಟ್ಟಿ ಸುದ್ದಿಯಾಗಿರುವುದು ಅವರು ಗಲ್ಲಿಯಲ್ಲಿ ಕಿಚನ್ ಆರಂಭಿಸಿದ್ದಕ್ಕಾಗಿ, ಹೌದು ಅರೆ ಇದೇನು ಬಿಗ್ ಬಾಸ್ ಗೆದ್ದ ಎಲ್ಲರೂ ಸಿನಿಮಾ ಅದು ಇದು ಅಂಥ ಬ್ಯುಸಿಯಾದ್ರೆ ಇವ್ರೇನಪ್ಪ ಅಂದುಕೊಂಡ್ರ ಪೂರ್ತಿ ವರದಿ ಓದಿ.

ಶೈನ್ ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಧಾರವಾಹಿ, ರಿಯಾಲಿಟಿ ಸಿಂಗಿಂಗ್ ಶೋ, ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದರು ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷೀಬಾರಮ್ಮ ಧಾರವಾಹಿಯ ಚಂದನ್ ಪಾತ್ರಧಾರಿಯಾಗಿ ಅವರು ಹೆಂಗಳೆಯರ ಮನಗೆದ್ದಿದ್ದರು. ಆದರೆ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಒಲವು ಇದ್ದಕಾರಣ ಧಾರವಾಹಿಗೆ ಗುಡ್ಬೈ ಹೇಳಿ ಅಲ್ಲಿಂದ ಹೊರ ಬಂದ್ದಿದ್ದರು. ಅದಾದ ನಂತರ ಅವರಿಗೆ ಆರ್ಥಿಕವಾಗಿ ಸಮಸ್ಯೆ ಆದದ್ದು ಅಷ್ಟಿಷ್ಟಲ್ಲ ಅದು ಅದನ್ನು ಅನುಭವಿಸಿದ ಶೈನ್ ಶೆಟ್ಟಿ ಯವರಿಗೆ ಗೊತ್ತು.

ಇದರ ಮಧ್ಯೆ ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಅಲೆದರು. ಆದರೆ ಯಾವುದೇ ರೀತಿಯ ಪ್ರಯೋಜನ ವಾಗಲಿಲ್ಲ ಇತ್ತ ಧಾರವಾಹಿ ಇಲ್ಲ ಸಿನಿಮಾ ಅವಕಾಶ ಕೂಡ ಇಲ್ಲ ಏನೋ ಮಾಡಲು ಹೋಗಿ ಏನೋ ಆಯ್ತು ಅನ್ನೋ ಹಾಗೆ ಆಯ್ತು ಇವರ ಪರಿಸ್ಥಿತಿ. ಇನ್ನು ಇದನ್ನೇ ನಂಬಿಕೊಂಡಿದ್ದರೆ ಜೀವನ ಕಷ್ಟ ಎಂದು ಅರಿತ ಶೈನ್ ತಮ್ಮಲ್ಲಿದ್ದ ಅಲ್ಪ ಮೊತ್ತದ ಹಣದಿಂದ ಒಂದು ಫುಡ್ ಟ್ರಕ್ ಮಾಡುವ ಆಲೋಚನೆ ಬರುತ್ತದೆ. ಆಗ ಶುರುವಾಗುವುದೇ ಈ ಗಲ್ಲಿ ಕಿಚನ್ ಹೋಟೇಲ್ ಹಾಗ ಮತ್ತೊಮ್ಮೆ ಯೋಚನೆ ಬರುವುದು.

ಅದನ್ನು ಎಲ್ಲಿ ಆರಂಭಿಸೋದು ಎಂದು, ಆಗ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಸುತ್ತಾಮುತ್ತಾ ಹೀಗೆಲ್ಲಾ ಚೈನೀಸ್ ರೆಸ್ಟೋರೆಂಟ್ ಗಳದ್ದೆ ಸೌಂಡು ಇದರ ಮಧ್ಯೆ ಮಾಡಿದರೆ ಕ್ಲಿಕ್ ಆಗುಬಹುದೆಂದು ಅಲ್ಲಿ ಆರಂಭಿಸುತ್ತಾರೆ. ಇಲ್ಲಿ ಒಂದಿಬ್ಬರೂ ಹುಡುಗರನ್ನು ಕೆಲಸಕ್ಕೆ ನೇಮಿಸಿಕೊಂಡು ಫುಡ್ ಟ್ರಕ್ ನಿರ್ವಹಣೆ ಮಾಡುತ್ತಾರೆ, ತದನಂತರ ಬ್ಯುಸಿನೆಸ್ ಕೂಡ ಯಶಸ್ವಿಯಾಗುತ್ತಾ ಸಾಗುತ್ತದೆ ಇದರ ಮಧ್ಯೆ ಕೆಲವು ಸಂದರ್ಶನ ನಿರೂಪಕರಾಗಿಯೂ ಕೆಲಸ ನಿರ್ವಹಿಸುತ್ತಾರೆ.

ತದನಂತರ ಅವಕಾಶ ಸಿಕಿದ್ದೇ ಕಲರ್ಸ್ ಕನ್ನಡದ ಕಿರುತರೆಯ ಜನಪ್ರಿಯ ರಿಯಾಲಿಟಿಶೋ ಈ ಬಿಗ್ ಬಾಸ್ ಕಾರ್ಯಕ್ರಮ ಇದರ ಮೂಲಕ ತಮ್ಮ ಮಾತು, ನಡವಳಿಕೆ ಗುಣಗಳಿಂದಾಗಿ, ಟಾಸ್ಕ್ ಮುಖಾಂತರ ಪ್ರಬಲ ಸ್ಪರ್ಧಿಯಾಗಿ ಆಟವಾಡಿ ಬಿಗ್ ಬಾಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು. ಈಗ ಬಿಗ್ ಬಾಸ್ ಗೆದ್ದ ಹಣದಿಂದ ತಮ್ಮ ಫುಡ್ ಟ್ರಕ್ ಅನ್ನು ಮತ್ತಷ್ಟು ದೊಡ್ಡದಾಗಿ ಮಾಡಬೇಕು ಮತ್ತು ಫ್ರಾಂಚೈಸಿಯನ್ನು ತೆರೆಯಬೇಕು ಎಂದು ಶೈನ್ ಶೆಟ್ಟಿ ಆಸೆಯನ್ನೊಂದಿದ್ದಾರೆ.

ಇವರ ಗಲ್ಲಿ ಕಿಚನ್ ಅಲ್ಲಿ ಸಬ್ಬಕ್ಕಿ ಇಡ್ಲಿ, ದೋಸೆ, ಅದರಲ್ಲಿ ಸ್ಪೆಷಲ್ ನೀರ್ ದೋಸೆ, ರೈಸ್ ಬಾತ್ ಹೀಗೆ ವೆರೈಟಿ ರೀತಿಯ ಆಹಾರದ ರುಚಿಯನ್ನು ನೋಡಬಹುದಾಗಿದೆ. ಇವರ ಗಲ್ಲಿ ಕಿಚನ್ ಇರುವುದು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಸಂಜೆ 5ರಿಂದ 11ರವರೆಗೆ ಇರುತ್ತದೆ ನಿಮಗೇನಾದರೂ ಶೈನ್ ಶೆಟ್ಟಿ ಯವರನ್ನು ನೋಡಬೇಕು ಅವರ ಗಲ್ಲಿ ಕಿಚನ್ ನ ದೋಸೆಯ ರುಚಿಯನ್ನು ಸವಿಯಬೇಕು ಅಂದರೆ ಒಮ್ಮೆ ಭೇಟಿ ನೀಡಬಹುದು. ಸಂಜೆ ಇಂದ ರಾತ್ರಿಯವರೆಗೆ ತೆರೆಯುವ ಈ ಗಲ್ಲಿ ಕಿಚನ್ ದಿನಕ್ಕೆ ಮೂರ್ನಾಲ್ಕು ಸಾವಿರದಷ್ಟು ಗಳಿಸುತ್ತಿದೆ ಹಾಗು ರಜೆ ದಿನಗಳಾದ ಭಾನುವಾರ ತುಸು ಹೆಚ್ಚು ಸಂಪಾದನೆ ಮಾಡುತ್ತಾರೆ.

LEAVE A REPLY

Please enter your comment!
Please enter your name here