ರಾಬರ್ಟ್ ಚಿತ್ರ ಎಷ್ಟು ಭಾಷೆಗಳಲ್ಲಿ ಬಿಡುಗಡೆ ಆಗ್ತಿದೆ ಗೊತ್ತೇ, ಸ್ಪಷ್ಟತೆ ಕೊಟ್ಟ ನಿರ್ಮಾಪಕ

0
251

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಾಲ್ಕು ಭಾಷೆಯಲ್ಲಿ ಬರುತ್ತಾ ಅಥವಾ ಇಲ್ಲ ಹಾಗು ಕನ್ನಡಕ್ಕೆ ಬರುತ್ತಿರುವ ಆ ತಮಿಳು ಚಿತ್ರ ಯಾವುದು ಎಂದು ಹೇಳಿಕೊಡುತ್ತೇವೆ ನೋಡಿರಿ. ತಮಿಳು ಸಿನಿಮಾ ಒಂದು ಮೊದಲ ಬಾರಿಗೆ ಕನ್ನಡದಲ್ಲಿ ಡಬ್ ಆಗಿ ಬರುತ್ತದೆಯಾ? ಇಷ್ಟಕ್ಕೂ ಆ ಚಿತ್ರ ಯಾವುದು ಅಂದರೆ ಸೂರೈರಾರು ಪೋಟ್ರು ಅಂತ ಇದರಲ್ಲಿ ಅಭಿಯನಿಸಿರೋದು ತಮಿಳು ನಟ ಸೂರ್ಯ ಅವರು ಇದು ಅವರ ಮೊದಲ ಚಿತ್ರ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗ್ತಾಯಿರೋದು ಕನ್ನಡದಲ್ಲಿ ಇದರ ಟೈಟಲ್ ಬಂದು ಸೂರಾರ ಕೊಂಡಾಡು ಎಂಬ ಟೈಟಲ್ ಮುಖಾಂತರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದರಲ್ಲಿರುವ ವಿಶೇಷತೆ ಏನೆಂದರೆ ಕ್ಯಾಪ್ಟನ್ ಗೋಪಿ ಅವರ ನೈಜ ಕಥೆಯನ್ನು ಆಧರಿಸಿ ಬರುತ್ತಿರುವ ಸಿನಿಮಾ ಇದಾಗಿದೆ. ಒಬ್ಬ ಕನ್ನಡಿಗರ ಕುರಿತು ಸಿನಿಮಾ ಮಾಡುತ್ತಿರುವುದರಿಂದ ನಾವು ಕಂಡಿತವಾಗಿಯೂ ಸಿನಿಮಾ ನೋಡಲೆ ಬೇಕಾಗುತ್ತದೆ.

ಹಾಗೆ ಈ ಸಿನಿಮಾ ಒಟ್ಟಾಗಿ ಮೂರು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ ಕನ್ನಡ, ತೆಲುಗು, ತಮಿಳು ಈ ಮೂರು ಭಾಷೆಯಲ್ಲೂ ಕೂಡ ಈ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಏಕೆಂದರೆ ಕನ್ನಡದ ಸಾಧಕರ ಜೀವನ ಚರಿತ್ರೆಯೊಂದು ಸಿನಿಮಾವಾಗಿ ಬರುತ್ತಿರುವುದರಿಂದ ನಾವು ಕಂಡಿತ ಸ್ವಾಗತ ಮಾಡಬಹುದಾಗಿದೆ. ಹಾಗೇ ಕನ್ನಡ ಸೂಪರ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗುತ್ತದೆ ಅಂದು ಸುದ್ದಿ ಹರಿದಾಡುತ್ತಿತ್ತು.

ಆದರೆ ಇದೀಗ ಮತ್ತೆ ರಾಬರ್ಟ್ ಸಿನಿಮಾ ಒಂದೇ ಭಾಷೆಯಲ್ಲಿ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತದೆ ಎಂದು ಗಾಂಧಿನಗರದಲ್ಲಿ ಸುದ್ದಿಯಾಗಿದೆ. ಇದಕ್ಕೆ ಸ್ಪಷ್ಟತೆ ಹೇಳಿದವರು ಆಚಿತ್ರದ ನಿರ್ಮಾಪಕರಾದ ಉಮಾಪತಿ ಯವರು ಸಂದರ್ಶನ ವೊಂದರಲ್ಲಿ ನಾಲ್ಕು ಭಾಷೆಯಲ್ಲಿ ಬಿಡುಗಡೆ ಮಾಡುತ್ತೇವೆ ಅಂದಿದ್ದರು ಆದರೆ ಈಗ ಈ ಗಾಳಿ ಸುದ್ದಿಗಳಿಗೆಲ್ಲಾ ಉತ್ತರ ದೊರಕಬೇಕಾದರೆ ಸ್ವತಃ ಅವರೇ ಹೇಳುವವರೆಗೂ ನಾವು ಕಾದು ನೋಡಬೇಕಾಗಿದೆ. ಈಗಾಗಲೇ ದರ್ಶನ್ ಅಭಿಮಾನಿಗಳು ರಾಬರ್ಟ್ ಪೋಸ್ಟರ್ ನೋಡಿ ಖುಷ್ ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಅಪ್ಪಳಿಸಲು ಸಿದ್ದವಾಗುತ್ತಿದೆ.

LEAVE A REPLY

Please enter your comment!
Please enter your name here