ಪಾಕಿಸ್ತಾನದ ಹತ್ತು ಆಟಗಾರರಿಗೂ ಕೊರೋನಾ ಪಾಸಿಟಿವ್! ಭಯ ಬೀಳುತ್ತಿರುವ ಕ್ರಿಕೆಟ್ ಜಗತ್ತು

0
131
Dubai: Pakistan team ahead of the second match (Group A) of Asia Cup 2018 against Hong Kong at Dubai International Cricket Stadium on Sept 16, 2018. (Photo: Surjeet Yadav/IANS)

ಇಂಗ್ಲೇಡ್​ ಪ್ರವಾಸಕ್ಕೆ ಸಿದ್ಧಗೊಂಡಿರುವ ಪಾಕಿಸ್ತಾನ ತಂಡ ಕಳೆದ ವಾರ 29 ಆಟಗಾರರ ತಂಡವನ್ನು ಪ್ರಕಟಿಸಿತ್ತು. ಜೂನ್​ 28 ರಂದು ಮ್ಯಾಚೆಂಸ್ಟರ್​ಗೆ ಪ್ರಯಾಣ ಬೆಳೆಸುವ ಈ ಆಟಗಾರರು ಮೊದಲ ಎರಡು ಹಂತಗಳಲ್ಲಿ ಕೊರೋನಾ ವೈರಸ್​ ತಪಾಸಣೆಗೆ ಒಳಪಡಬೇಕಿತ್ತು. ಆದರೆ ಮೊದಲ ಹಂತದಲ್ಲಿ ಮೂವರು ಆಟಗಾರರಗಿದೆ ಕೊರೋನಾ ಪಾಸಿಟಿವ್​ ಕಾಣಿಸಿಕೊಂಡಿದೆ. ನಂತರದ ಹಂತದ ಪರೀಕ್ಷೆಯಲ್ಲಿ 7 ಆಟಗಾರರಲ್ಲಿ ಕೋವಿಡ್​ ಸೋಂಕು ತಗುಲಿರುವು ದೃಢಪಟ್ಟಿದೆ. ಪಾಕ್​ ಆಟಗಾರರಾದ ಶಾದಬ್ ಖಾನ್, ಹ್ಯಾರಿಸ್ ರೌಫ್, ಹೈದರ್ ಅಲಿ ಮೊದಲ ಹಂತದಲ್ಲಿ ಕೊರೋನಾ ಪಾಸಿಟಿವ್​​ ಕಂಡುಬಂದಿದೆ.

ನಂತರ ಮೊಹ್ಮಮದ್​​ ಹಫೀಜ್​​, ಕಾಶಿಫ್​ ಭಟ್ಟಿ, ಮಹಮ್ಮದ್​​ ಹಸ್ನೈನ್​​, ಫಖರ್​ ಜಮಾನ್​​, ಮೊಹ್ಮಮದ್​​​ ರಿಜ್ವಾನ್​​, ಇಮ್ರಾನ್​ ಖಾನ್​​, ಮೊಹಮ್ಮದ್​ ಹಫೀಜ್​​​ ಮತ್ತು ವಾಹೆಬ್​ ರಿಯಾಜ್​​​ಗೆ ಕೋವಿಡ್-19ರ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಈಬಗ್ಗೆಮಾಧ್ಯಮದವರೊಂದಿಗೆಮಾತನಾಡಿದಪಾಕಿಸ್ತಾನಕ್ರಿಕೆಟ್​ ಮಂಡಲಿಯ (ಪಿಸಿಬಿ) ಸಿಇಒವಾಸಿಮ್​ ಖಾನ್​ ‘ಇದುಸರಿಯಾದಪರಿಸ್ಥಿತಿಯಲ್ಲ. ಕೊರೋನಾಪಾಸಿಟೀವ್​ ಬಂದಿರುವಈ 10 ಆಟಗಾರಉತ್ತಮಆಟಗಾರರು. ಈಆಟಗಾರರಿಂದಉಳಿದಆಟಗಾರರಿಗೂ ಸೋಂಕು ಹರಡಬಹುದು.

ಸೋಂಕು ತಗುಲಿದ ಆಟಗಾರರಿಗೆ ಅಗತ್ಯದ ವೈದ್ಯಕೀಯ ನೆರವು ನೀಡಲಾಗುವುದು. ಅವರಲ್ಲಿ ನೆಗೆಟಿವ್​​ ಬಂದ ಕೂಡಲೇ ಇಂಗ್ಲೆಂಡ್​​ ಪ್ರವಾಸ ಕೈಗೊಂಡು ತಂಡ ಸೇರಿಕೊಳ್ಳಲ್ಲಿದ್ದಾರೆ. ಅದಕ್ಕೂ ಮುನ್ನ ಅವರನ್ನು ಐಸೊಲೇಷನ್​ನಲ್ಲಿ ಇಡಲಾಗಿದೆ. ತಂಡದ ಆಟಗಾರರು 28ಕ್ಕೆ ಮ್ಯಾಂಚೆಸ್ಟರ್​​ಗೆ ಪ್ರಯಾಣ ಬೆಳೆಸಲಿದ್ದಾರೆ’ ಎಂದುಹೇಳಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಬೆಂಗಳೂರು ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

LEAVE A REPLY

Please enter your comment!
Please enter your name here