ಊಟದಲ್ಲಿ ದಾಖಲೆ ಮಾಡಿದ ಬೆಂಗಳೂರು ವ್ಯಕ್ತಿ,ಬರೀ ಊಟಕ್ಕೆಂದೇ ಎಷ್ಟು ಲಕ್ಷ ಖರ್ಚು ಮಾಡಿದ್ದಾನೆ ಗೊತ್ತೇ

0
723

ಇಲ್ಲೊಬ್ಬ ಭೂಪ ಊಟಕ್ಕಾಗಿಯೇ ಲಕ್ಷಾನುಗಟ್ಟಲೆ ದುಡ್ಡನ್ನು ಖರ್ಚು ಮಾಡಿದ್ದಾನೆ,ಯಾರವನು ಎಲ್ಲಿ ಏನು ಹೇಗೆ ತಿಳಿಯೋಣ ಬನ್ನಿ,ಭಾರತ ದೇಶದಲ್ಲಿ ಅತಿ ಹೆಚ್ಚು ಹೋಟೇಲ್ ಹೊಂದಿರುವ ನಗರ ಬೆಂಗಳೂರು ಹಾಗೂ ಅಂದಾಜು 10ಲಕ್ಷ ಕ್ಕಿಂತಲೂ ಹೆಚ್ಚು ಜನರು ಈಹೋಟೇಲ್ಗಳ ಮೇಲೆಯೇ ಅವಲಂಬಿತರಾಗಿದ್ದಾರೆ ಎಂದು ವರದಿ ತಿಳಿಸುತ್ತವೆ,ಇದು ಬೆಂಗಳೂರಿನ ಕಥೆಯಾದರೆ ಇನ್ನು ರಾಷ್ಠ್ರದ ರಾಜಧಾನಿ ದೆಹಲಿಯ ಕಥೆಯೇ ಬೇರೆ,ಅಲ್ಲಿ ಅಂದಾಜು ವರ್ಷಕ್ಕೆ ಒಂದು ಕುಟುಂಬವೇ 200 ಭಾರಿ ಹೋಟೇಲ್ ಗಳಿಗೆ ಭೇಟಿ ನೀಡುತ್ತಿರುತ್ತವೆ,ಇಡೀ ಭಾರತ ದೇಶದಲ್ಲಿ ಆನ್ಲೈನ್ ಆರ್ಡರ್ ಮುಖಾಂತರವೇ ಗ್ರಾಹಕರು 3.5 ಲಕ್ಷ ರುಪಾಯಿಗಳಷ್ಟು ಉಳಿತಾಯ ಮಾಡುತ್ತಾರೆ.ಈ ಆರ್ಡರ್ ಮಾಡುವ ಊಟಗಳಲ್ಲಿ ಉತ್ತರಭಾರತ ಶೈಲಿಯ ಊಟವೇ ಹೆಚ್ಚು ಜನಪ್ರಿಯವಾಗಿದೆ ಎಂಬುದೇ ವೈಶಿಷ್ಟವಾಗಿದೆ.

ಭಾರತದ ಮಹಾನಗರಗಳಾದ ಬೆಂಗಳೂರು ಹೈದೆರಾಬಾದ್ ಮುಂಬೈ ಚೆನ್ನೈ ಮತ್ತು ದೆಹಲಿ ಅಂತಹ ದೊಡ್ಡ ದೊಡ್ಡ ನಗರಗಳಲ್ಲಿ ಹೋಟೆಲ್ ಉದ್ಯಮಕ್ಕೆ ತುಂಬಾ ಬೇಡಿಕೆ ಇದೆ ಯಾಕೆಂದರೆ ಅಲ್ಲಿನ ಲಕ್ಷಾನುಗಟ್ಟಲೆ ಜನ ಹೋಟೆಲ್ಗಳ ಮೇಲೆಯೇ ಅವಲಂಬಿತರಾಗಿರುತ್ತಾರೆ.ಬೇರೆ ಊರುಗಳಿಂದ ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವವರಂತೂ ಮೂರೂ ಹೊತ್ತು ಹೋಟೆಲ್ ಊಟದ ಮೇಲೆಯೇ ಅವಲಂಬಿತರಾಗಿರುತ್ತಾರೆ,ಹೀಗಾಗಿ ಕೆಲ ವೆಬ್ಸೈಟ್ ಗಳು ಹೀಗೆ ಆನ್ಲೈನ್ ಅಲ್ಲಿ ಊಟವನ್ನು ತರಿಸುವ ವೆಚ್ಚದ ಬಗ್ಗೆ ಲೆಕ್ಕ ಇಟ್ಟಿರುತ್ತವೆ.

ಸಾಮಾನ್ಯವಾಗಿ ನಾವು ಹೋಟೆಲ್ಗೆ ಊಟಕ್ಕೆಂದು ಹೋದಾಗ ಯಾವ ಯಾವ ಐಟಂಯಿದೆ,ಅದಕ್ಕೆ ರೇಟ್ ಎಷ್ಟಿದೆ ಎಂದು ನೋಡುತ್ತೇವೆ ಆದರೆ ಇಲ್ಲೊಬ್ಬ ಪ್ರಳಯಾಂತಕ ತಿಂದಿದ್ದ ಬಿಲ್ ಎಷ್ಟು ಗೊತ್ತೇ,ಬರೋಬ್ಬರಿ ಎರಡು ಲಕ್ಷದ ಎಂಬತ್ತು ಸಾವಿರ(280000).ಹೌದು ಇದು ಆಶ್ಚರ್ಯವಾದರೂ ಸತ್ಯ.ಅದರಲ್ಲೂ ಅವನು ಬೆಂಗಳೂರಿನವ ಎನ್ನುವುದು ಕುತೂಹಲ,ಅಂದಹಾಗೆ ಇದು ರೆಸ್ಟೋರೆಂಟ್ ಸೆಲ್ಲೂಷನ್ ಕಂಪನಿ ಡೈನ್ಔಟ್ ಎಂಬ ಸಂಸ್ಥೆ ತನ್ನ ವಾರ್ಷಿಕ ವರದಿಯಲ್ಲಿ ಬಿಡುಗಡೆ ಮಾಡಿದೆ.2019ರಲ್ಲಿ ಈ ರೀತಿ ಬಿಲ್ ಬಗ್ಗೆ ಯೋಚನೆ ಮಾಡದೇ ತಿಂದು ದಾಖಲೆಯ ಮಾಡಿರುವವರ ಬಗ್ಗೆ ತಿಳಿಸಿದೆ.

LEAVE A REPLY

Please enter your comment!
Please enter your name here