ಊಟದ ಜೊತೆ ಈರುಳ್ಳಿ ತಿನ್ನುವುದರಿಂದ ಏನಾಗುತ್ತದೆ ಗೊತ್ತೇ, ಇದನ್ನೊಮ್ಮೆ ನೋಡಿ

0
137

‘ಆರೋಗ್ಯವೇ ಭಾಗ್ಯ’ ಎಂಬುದು ಸಾರ್ವಕಾಲಿಕ ಸತ್ಯ. ಆದರೆ ಇಂದು ಆರೋಗ್ಯ ಎಲ್ಲರ ಬಳಿಯೂ ಇರುವುದಿಲ್ಲ, ಆರೋಗ್ಯವಂತ ಮನುಷ್ಯ ಇದ್ದರೆ ಈ ಪ್ರಪಂಚದಲ್ಲಿ ಅವನಂತಹ ಶ್ರೀಮಂತ ಯಾರೂ ಇಲ್ಲ. ಆದರೆ ಇಂದಿನ ಒತ್ತಡ ಜೀವನದಲ್ಲಿ ಆರೋಗ್ಯವಂತ ವ್ಯಕ್ತಿಗಳನ್ನ ನಿರೀಕ್ಷೆ ಮಾಡುವುದು ಅಸಾಧ್ಯ. ಮನುಷ್ಯ ಎಷ್ಟೇ ಆರ್ಥಿಕವಾಗಿ ಸಬಲರಾಗಿದ್ದರು, ಶ್ರೀಮಂತವಾಗಿದ್ದರೂ ಸಹ ಆರೋಗ್ಯದ ಮುಂದೆ ಅದೆಲ್ಲ ನಶ್ವರ, ಅದು ಮಾನಸಿಕರೋಗ ಅಥವಾ ದೈಹಿಕ ರೋಗ ಇರಬಹುದು ಒತ್ತಡದ ಜೀವನದಲ್ಲಿ ಮನುಷ್ಯ ತನ್ನ ಆರೋಗ್ಯಕ್ಕಿಂತ ಹೆಚ್ಚಾಗಿ ಹಣದ ಹಿಂದೆ ಬಿದ್ದು ಹಣಗಳಿಸುವ ಹಪಾಹಪಿಯಲ್ಲಿದ್ದಾರೆ.

ಆದರೆ ಒಮ್ಮೆ ಆರೋಗ್ಯ ಕೈ ಕೊಟ್ಟರೆ ನಾವು ದುಡಿದಂತಹ ಅಷ್ಟು ಹಣವೂ ಸಹ ಆರೋಗ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಜೀವನದಲ್ಲಿ ನಮ್ಮ ಆಹಾರಕ್ರಮವು ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಹಾರಕ್ರಮದ ಮೇಲೆ ನಮ್ಮ ಆರೋಗ್ಯ ಸ್ಥಿತಿ ನಿರ್ಧಾರವಾಗುತ್ತದೆ ಹೀಗಿದ್ದಾಗ ನಾವು ಪ್ರತಿನಿತ್ಯ ಸೇವಿಸುವಂತಹ ಆಹಾರಗಳು ಎಷ್ಟರಮಟ್ಟಿಗೆ ಗುಣಮಟ್ಟದ್ದಾಗಿದೆ, ಆರೋಗ್ಯ ಪೂರಕವಾಗಿರುವಂತಹ ಆಹಾರ ಇಂದಿನ ವಾತಾವರಣದಲ್ಲಿ ಸಿಗುವುದು ಕಷ್ಟಸಾಧ್ಯ.

ಕೆಲವೊಮ್ಮೆ ನಾವು ತಿಳಿದೋ, ತಿಳಿಯದೆಯೋ ಊಟಮಾಡುವಾಗ ಕೆಲವೊಂದಷ್ಟು ಅಭ್ಯಾಸಗಳನ್ನು ರೂಢಿ ಮಾಡಿಕೊಂಡಿರುತ್ತೇವೆ. ಉದಾಹರಣೆಗೆ ಊಟದ ಮಧ್ಯೆ ತಿಂದ್ದದ್ದು ಜೀರ್ಣ ಆಗಲೆಂದು ಊಟ ತಿನ್ನುವ ಮಧ್ಯೆದಲ್ಲಿ ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಇರುತ್ತದೆ. ಕೆಲವರಿಗೆ ಊಟಕ್ಕೂ ಮೊದಲು, ಊಟ ಮಾಡುವ ಮಧ್ಯದಲ್ಲಿ ಊಟವಾದ ನಂತರ ಈರುಳ್ಳಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಎಂಬ ಪ್ರಶ್ನೆ ಕೆಲವರಿಗೆ ಕಾಡುವುದುಂಟು.

ಇದಕ್ಕೆ ಈರುಳ್ಳಿಯಲ್ಲಿ ಕ್ವೆಸರ್ಟಿನ್ ಅಂಶ ಇರುವುದರಿಂದ ಅದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವಂತಹ ರೋಗನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತದೆ. ಅದಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡುವಂತಹ ಅಂಶವನ್ನು ಒಳಗೊಂಡಿದೆ, ದೇಹದ ಒಳಭಾಗದಲ್ಲಿ ಒಳಾಂಗಗಳ ಕೊಬ್ಬು ಉತ್ಪತ್ತಿಯಾಗದಂತೆ ಹಾಗೂ ಹೊಟ್ಟೆ ಭಾಗದಲ್ಲಿ ಬೊಜ್ಜಿನ ಅಂಶ ಸೇರದಂತೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಈರುಳ್ಳಿ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

LEAVE A REPLY

Please enter your comment!
Please enter your name here