ಎಷ್ಟೋ ಜನಕ್ಕೆ ಗೊತ್ತೇ ಇರದ ‘ನಿರ್ಮಾ’ ಪೌಡರ್ ಪ್ಯಾಕೆಟ್ ಮೇಲಿರುವ ಹುಡುಗಿಯ ದುರಂತ ಕಥೆ

0
1188

ಇದು ತನ್ನ ಪ್ರೀತಿಯ ಮಗಳ ಅಕಾಲಿಕ ಮರಣದಿಂದ ತನ್ನ ಮಗಳ ಹೆಸರನ್ನೆ ದೇಶದಾದ್ಯಂತ ಪ್ರಸಿದ್ದಿ ಮಾಡಿದ ರೋಚಕ ಕಥೆ. ನಾವು ಜೀವನದಲ್ಲಿ ಏನಾದ್ರು ಸಾಧಿಸಬೇಕು, ಸಮಾಜದಲ್ಲಿ ತನ್ನದೇಯಾದ ಒಂದು ಐಡೆಂಟಿಟಿ ಇರಬೇಕು, ನಾಲ್ಕು ಜನರು ನನ್ನನ್ನು ಗೌರವಿಸಬೇಕು ಅಂತ ನಾವೆಲ್ಲರೂ ಕನಸು ಕಾಣುವುದು ಸಹಜ. ಆದರೆ ಅದನೆಲ್ಲಾ ಸಾಧಿಸಬೇಕಾದರೆ ಸಾಗರದಷ್ಟು ಸಮಸ್ಯೆಗಳನ್ನೂ ಎದುರಿಸಲೇ ಬೇಕಾಗಿರುತ್ತದೆ. ಮೊದಲಿಗೆ ಸಾಧನೆ ಮಾಡಲು ಹೊರಟಿರುವ ನೀವು ಕೆಲವು ಸಾಧಕರ ಹಿನ್ನೆಲೆ ಅವರ ಶ್ರಮವನ್ನು ತಿಳಿದುಕೊಳ್ಳುವುದು ಉತ್ತಮ. ಆ ರೀತಿಯಲ್ಲಿ ನಮಗೆ ನಿರ್ಮಾ ಪೌಡರ್ ಸ್ಥಾಪಕ ಕರ್ಸನ್ ಬಾಯಿ ಪಟೇಲ್ ಅವರು, ನಾವು ಬಾಲ್ಯದ ದಿನಗಳಲ್ಲಿ ಜಾಹೀರಾತು ಒಂದು ಬಾಯಲ್ಲಿ ಗುನುಗುತಿತ್ತು.

ಅದೇ ಈಗ ನೀವು ಗುನುಗುತ್ತಿರುವುದೇ ವಾಷಿಂಗ್ ಪೌಡರ್ ನೀರ್ಮಾ ವಾಷಿಂಗ್ ಪೌಡರ್ ನೀರ್ಮಾ ಹಾಲಿನಂತ ಬಿಳುಪು, ಮಿಂಚಿನಂತೆ ಹೊಳಪು, ಎಸ್ ಇದೇ ಜಾಹೀರಾತಿನ ಸರಕಿನ ಮಾಲೀಕ ಈ ಕರ್ಸನ್ ಬಾಯಿಪಟೆಲ್ ಇವರು 1945ರಲ್ಲಿ ಅಹಮದಾಬಾದ್ ರುಪ್ಪೂರ್ ಎಂಬ ಊರಿನಲ್ಲಿ ಜನಿಸಿರುತ್ತಾರೆ. ಇವರೂ ಸಹ ಬಡ ಕುಟುಂಬದಲ್ಲಿಯೇ ಹುಟ್ಟಿದ್ದು ಇವರು ರಸಾಯನ ಶಾಸ್ತ್ರದಲ್ಲಿ ಬಿ.ಎಸ್.ಸಿ.ಪದವಿ ಪಡೆದ ನಂತರ ಅಹಮದಾಬಾದ್ನ ಲ್ಯಾಬ್ ವೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಇದು ಇವರಿಗೆ ಆಸಕ್ತಿದಾಯಕ ವಾಗಿರಲಿಲ್ಲ.

ಅದಕ್ಕಾಗಿ ಕೆಲಸ ಮುಗಿದ ಬಳಿಕ ಸಂಜೆಯ ಬಿಡುವಿನ ವೇಳೆಯಲ್ಲಿ ತಮ್ಮ ಮನೆಯ ಹಿದೆ ಇದ್ದ ಖಾಲಿ ಜಾಗದಲ್ಲಿ ಕೆಲವು ರಾಸಾಯನಿಕ ವಸ್ತುಗಳನ್ನು ಬಳಸಿಕೊಂಡು ವಿವಿಧ ಪ್ರಯೋಗ ಮಾಡುತ್ತಿದ್ದರು. ದಿನನಿತ್ಯದ ಶ್ರಮ ಎಂಬಂತೆ ಒಂದು ದಿನ ಹಳದಿ ರೂಪದ ಕೆಮಿಕಲ್ ತಯಾರಾಗುತ್ತದೆ, ಆ ಹಳದಿಯ ಕೆಮಿಕಲ್ ಮುಂದೆ ಹಳದಿಯ ಬಣ್ಣದ ಪೌಡರ್ ಆಗಿ ಪರಿವರ್ತಿಸಿ ಮಾರಾಟ ಮಾಡಲು ಆರಂಭಿಸುತ್ತಾರೆ. ತಮ್ಮ ಕೆಲಸ ಮುಗಿದ ಬಳಿಕ ಸೈಕಲ್ ಏರಿ ಮನೆಮನೆಗೆ ಕೇಜಿ ಗೆ ಮೂರು ರುಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಅಂದಿನ ಕಾಲದಲ್ಲಿ ಹಿಂದೂಸ್ಥಾನ್ ಡಿಟರ್ಜೆಂಟ್ ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿತ್ತು.

ದಿನ ಕಳೆದಂತೆ ಇವರ ಪೌಡರನ್ನು ಜನ ಇಷ್ಟ ಪಡಲು ಆರಂಭಿಸಿದರು ಕಡಿಮೆಯ ದರದಲ್ಲಿ ಉತ್ತಮ ಗುಣಮಟ್ಟದ ಪೌಡರ್ ಆಗಿರುವುದರಿಂದ ಇವರ ಆದಾಯವು ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಇದರ ಜನಪ್ರಿಯತೆ ಕೂಡ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾಗ ಕರ್ಸನ್ ಬಾಯಿ ಪಟೆಲ್ ಕೈಯಲಿದ್ದ ಕೆಲಸ ಬಿಟ್ಟು ಇದನ್ನೆ ಇನ್ನಷ್ಟು ವಿಸ್ತರಿಸಿ ಗುಜರಾತ್ ನಲ್ಲಿ ಹಲವು ಶಾಖೆಯನ್ನು ಆರಂಭಿಸುತ್ತಾರೆ. ಈತ ತನ್ನ ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುತ್ತಿದ್ದು ಅವರ ಮಗಳಾದ ನಿರುಪಮಾಳನ್ನು ಇವಳನ್ನು ಎಲ್ಲರೂ ಗುರುತಿಸುವಂತೆ ಪ್ರಸಿದ್ದವ್ಯಕ್ತಿ ಮಾಡಬೇಕೆಂದು ಕನಸು ಹೊಂದಿದ್ದನು, ಆದರೆ ದುರದೃಷ್ಟಾವಶಾತ್ ಆ ಹುಡುಗಿ ಅಪಘಾತವೊಂದರಲ್ಲಿ ಗಾಯಗೊಂಡು ಮರಣಹೊಂದುತ್ತಾಳೆ.

ಅನುಪಮಾಳನ್ನು ಪಟೇಲ್ ಪ್ರೀತಿಯಿಂದ ನಿರ್ಮಾ ಎಂದೇ ಕರೆಯುತ್ತಿದ್ದನು, ಇದೇ ಮಗಳ ನೆನಪಿನ ನೋವಿನಲ್ಲಿದ್ದ ಕರ್ಸನ್ ಪಟೇಲ್ ಬಾಯಿ ಪಟೇಲ್ ಅವಳ ಹೆಸರನ್ನೆ ತನ್ನ ಡಿಟರ್ಜೆಂಟ್ ಪೌಡರ್ಗೆ ನಿರ್ಮಾ ಎಂದು ತನ್ನ ಮುದ್ದುಮಗಳ ಹೆಸರನ್ನೆ ಇಟ್ಟು ಅವಳ ಛಾಯಾಚಿತ್ರವನ್ನೆ ಅದರಲ್ಲಿ ರಚಿಸುತ್ತಾರೆ. ಹೀಗಾಗಿ ಅದರ ಕವರ್ ನಲ್ಲಿ ಮಗುವೊಂದು ನಲಿಯುತ್ತಿರುವ ದೃಶ್ಯವನ್ನು ಈಗಲೂ ನಾವು ನೋಡಬಹುದು. ಕರ್ಸನ್ ಬಾಯಿಪಟೆಲ್ ಇಷ್ಟೇ ಅಲ್ದೇ ಅಹಮದಾಬಾದ್ ನಲ್ಲಿ ನಿರ್ಮಾ ವಿಶ್ವವಿಧ್ಯಾಲಯವನ್ನು ಸ್ಥಾಪಿಸಿದ್ದಾರೆ. ನಿರ್ಮಾ ಸಂಸ್ಥೆಯಲ್ಲಿ ಸುಮಾರು 17000ಜನ ಉದ್ಯೋಗ ಕಂಡುಕೊಂಡಿದ್ದಾರೆ ಇದರ ವಾರ್ಷಿಕ ಆದಾಯ ಎರಡೂವರೇ ಸಾವಿರ ಕೋಟಿ ಏನೇ ಆಗಲೀ ಮನಸ್ಸೊಂದಿದ್ದರೆ ಮಾರ್ಗ ಎಂಬುದಕ್ಕೆ ಇವರು ಉದಾಹರಣೆ ಯಾಗಿದ್ದಾರೆ.

ಮಗಳ ದುರಂತ ಸಾವಿನಿಂದ ಕುಗ್ಗಿ ಹೋಗಿದ್ದ ಪಟೇಲ್ ಅವರು ಅವರ ನೆನಪನ್ನು ಹಾಗೆ ಇರಿಸಬೇಕೆಂದು ತಮ್ಮ ಪ್ರಾಡಕ್ಟ್ ಮೇಲೆಯೇ ಅವರ ಅಂದರೆ ನಿರುಪಮಾ ಅವರ ಹೆಸರನ್ನೇ ಆ ಪೌಡರ್ಗೆ ಇರಿಸಿ ಮಗಳ ಫೋಟೋ ಅನ್ನು ಅದರಲ್ಲಿ ಪ್ರಿಂಟ್ ಮಾಡಿಸಿ ಮಾರಾಟ ಮಾಡುತ್ತಾರೆ, ನಮ್ಮ ಬಾಲ್ಯದಲ್ಲಿ ನಿರ್ಮಾ ಕಂಪನಿಯ ಸೋಪುಗಳು ಬಹಳ ಪ್ರಸಿದ್ದಿ ಪಡೆದಿದ್ದವು. ಅಷ್ಟಕ್ಕೂ ನೀವು ಇಲ್ಲಿ ನೋಡುತ್ತಿರುವ ವಯಸ್ಸಾದ ವ್ಯಕ್ತಿ ನಿರ್ಮಾ ಪ್ಯಾಕೆಟ್ ಮೇಲೆ ಇರುವ ಹುಡುಗಿ ಚಿತ್ರವನ್ನು ಬಿಡಿಸಿರುವ ಮೂಲ ಚಿತ್ರಗಾರ.

ಇವರು ಮೂಲತಃ ಬಾಂಗ್ಲಾದೇಶದಲ್ಲಿ ಜನಿಸಿದ್ದು ಚಿತ್ರಗಾರ ಆಗಬೇಕೆಂದು ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಬರುತ್ತಾರೆ, ನಿರ್ಮಾ ಹುಡುಗಿಯ ಚಿತ್ರವನ್ನು ಬಿಡಿಸಿದ್ದ ಇವರ ವೃತ್ತಿಯಲ್ಲಿ ಇವರದ್ದು ಇದೆ ಶ್ರೇಷ್ಠ ಕೆಲಸ. ಒಂದು ಕಡೆ ಮಗಳ ನೆನಪನ್ನು ತನ್ನ ಬ್ರಾಂಡ್ ಮೇಲೆ ಹಾಕಿಸಿದ ಅಪ್ಪ ಇನ್ನೊಂದು ಕಡೆ ಆ ಮಗುವಿನ ಚಿತ್ರವನ್ನು ಬಿಡಿಸಿ ಅದನ್ನು ಜಗತ್ತಿಗೆಲ್ಲಾ ಗೊತ್ತು ಮಾಡಿಸಿದ ಈ ಕಲಾವಿದ, ಇಬ್ಬರಿಗೂ ನಮ್ಮೆಲ್ಲರ ಕಡೆಯಿಂದ ಒಂದು ದೊಡ್ಡ ಸಲಾಂ, ಆದರೆ ಈ ಕಲಾವಿದ ನಮ್ಮನ್ನೆಲ್ಲಾ ಅಗಲಿ ಸುಮಾರು 13ವರ್ಷಗಳೇ ಕಳೆದಿವೆ.

LEAVE A REPLY

Please enter your comment!
Please enter your name here