ನಿಖಿಲ್ ಅವರು ರೇವತಿ ಅವರನ್ನು ಮದುವೆಯಾಗಲು ಕಾರಣ ಇಲ್ಲಿದೆ ನೋಡಿ,ಸತ್ಯ ಹೇಳಿದ ನಿಖಿಲ್

0
773

ಕನ್ನಡ ಚಲನಚಿತ್ರದ ಸ್ಟಾರ್ ನಟ ನಿಖಿಲ್ ಕುಮಾರ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ನಿಖಿಲ್ ಜಾಗ್ವಾರ್ ಸಿನೆಮಾದಿಂದ ಕನ್ನಡ ಇಂಡಸ್ಟ್ರಿ ಗೆ ಪರಿಚಯವಾಗಿ ಅನೇಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಿಖಿಲ್ ಮತ್ತು ರಚಿತಾರಾಮ್ ಅವರ ಈ ಮದ್ಯೆ ಮದುವೆಯ ಸುದ್ದಿ ಈಗ ತುಂಬಾ ವೈರಲ್ ಆಗ್ತಿದೆ. ಕಳೆದ ಒಂದು ವಾರದಿಂದ ಎಲ್ಲೆಲ್ಲೂ ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಮದುವೆಯದ್ದೇ ಗುಲ್ಲು. ನಟ ನಿಖಿಲ್ ಕುಮಾರ್ ಮದುವೆ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚಿಗಷ್ಟೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದ ನಿಖಿಲ್ ಕುಮಾರ್ ನನ್ನ ಮದುವೆ ಬಗ್ಗೆ ಸದ್ಯದಲ್ಲೇ ಅನೌನ್ಸ್ ಮಾಡುವೆ. ಅಲ್ಲಿಯವರೆಗೂ ಆತುರ ಬೇಡ.

ನನ್ನ ಮದುವೆ ಬಗ್ಗೆ ಈಗ ಕೇಳಿಬರುತ್ತಿರುವ ಗಾಸಿಪ್ ಸುಳ್ಳು. ಒಂದು ವರ್ಷದಿಂದ ಮನೆಯಲ್ಲಿ ನನಗೆ ಹುಡುಗಿ ಹುಡುಕುತ್ತಿದ್ದಾರೆ. ಸದ್ಯದಲ್ಲೇ ಅದು ಫೈನಲ್ ಆಗಲಿದೆ ಎಂದು ತಿಳಿಸುವೆ ಎಂದಿದ್ದರು. ನಟಿ ರಚಿತಾ ರಾಮ್ ಹಾಗೂ ನಿಖಿಲ್ ಕುಮಾರ್ ನಡುವೆ ಪ್ರೀತಿ ಪ್ರೇಮ ನಡೆಯುತ್ತಿದೆ, ಇಬ್ಬರು ಮದುವೆಯಾಗುತ್ತಾರೆ ಎನ್ನುವ ಮಾತಿತ್ತು. ಆದರೆ, ನಿಖಿಲ್ ಮದುವೆ ಆಗುತ್ತಿರುವ ಹುಡುಗಿ ಬುಲ್ ಬುಲ್ ಬೆಡಗಿ ಅಲ್ಲ. ನಿಖಿಲ್ ಮದುವೆಯಾಗುವ ಹುಡುಗಿ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟವರಲ್ಲ.

ಒಂದು ಕಡೆ ನಿಖಿಲ್ ಕುಮಾರ್ ಕುಟುಂಬ ರಾಜಕೀಯದ ದೊಡ್ಡ ಹಿನ್ನಲೆ ಇದೆ. ಮತ್ತೊಂದು ಕಡೆ ನಿಖಿಲ್ ಸಿನಿಮಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರು ಮದುವೆಯಾಗುವ ಹುಡುಗಿ ಸಿನಿಮಾ ಅಥವಾ ರಾಜಕೀಯ ಕುಟುಂಬದವರಾಗಿರಬಹುದು ಎಂಬ ಸುದ್ದಿ ಇತ್ತು. ಆದರೆ, ಜಾಗ್ವರ್ ಹುಡುಗನ ಜೀವನಕ್ಕೆ ಕಾಲಿಡುತ್ತಿರುವ ಹುಡುಗಿ ಬೆಂಗಳೂರಿನ ಉದ್ಯಮಿಯೊಬ್ಬರ ಮಗಳು. ನಿಖಿಲ್ ಕುಮಾರ್ ಭಾವಿ ಮಾವ ಸಿನಿಮಾ ಅಥವಾ ರಾಜಕೀಯ ಕ್ಷೇತ್ರದಲ್ಲಿ ಇಲ್ಲ.

ನಿಖಿಲ್ ಕುಮಾರಸ್ವಾಮಿ ಅವರು ರೇವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಈಗ ಖಚಿತಪಡಿಸಿದ್ದಾರೆ, ನಿಖಿಲ್ ಅವರ ವಧು ಶೀಘ್ರದಲ್ಲೇ ಶೀಘ್ರದಲ್ಲೇ ಮಾಜಿ ವಿಜಯನಗರ ಸಚಿವ ಎಂ.ಕೃಷ್ಣಪ್ಪ ಅವರ ಮೊಮ್ಮಗಳು. ದಂಪತಿಗಳು ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಎರಡು ಕುಟುಂಬಗಳಿಗೆ ಪರಸ್ಪರ ಒಪ್ಪಿಗೆಯಾಗಿ, ಮದುವೆ ದಿನಾಂಕವನ್ನೂ ನಿಗದಿ ಮಾಡಿದ್ದಾರೆ. ಬೆಂಗಳೂರಿನಲ್ಲಿಯೇ ಮದುವೆ ನಡೆಯಲಿದೆ. ನಾನು ಮದುವೆ ಆಗುವ ಹುಡುಗಿ ಯಾರು ಅಂತ ಶೀಘ್ರದಲ್ಲಿ ಹೇಳುವೆ. ನಾನು ಮದುವೆ ಆಗುವ ಹುಡುಗಿಗೂ ಚಿತ್ರರಂಗಕ್ಕೂ ಸಂಬಂಧ ಇಲ್ಲ. ಆಕೆ ತುಂಬಾ ಸಿಂಪಲ್. ನಮ್ಮ ಸಂಸ್ಕೃತಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ ನನ್ನ ಮದುವೆ ಬಗ್ಗೆ ಅಪ್ಪ-ಅಮ್ಮ ಡಿಸೈಡ್ ಮಾಡುತ್ತಾರೆ.

ಮದುವೆಯ ದಿನಾಂಕದ ವದಂತಿಗಳನ್ನು ಸ್ಪಷ್ಟಪಡಿಸಿದ ನಿಖಿಲ್, ನಮ್ಮ ಮದುವೆಯಲ್ಲಿ ವಿಭಿನ್ನ ದಿನಾಂಕಗಳಿವೆ ಎಂದು ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಅದನ್ನು ದೃಢ ಪಡಿಸಿದ ನಂತರ ಅದನ್ನು ಸುದ್ದಿ ಮಾಧ್ಯಮಗಳೊಂದಿಗೆ ಪ್ರಕಟಿಸುತ್ತೇನೆ, ಅಲ್ಲಿಯವರೆಗೂ ಸುದ್ದಿ ಮಾಧ್ಯಮಗಳು ಬೇರೆ ಬೇರೆ ದಿನಾಂಕಗಳನ್ನು ಪ್ರಕಟಿಸಬಾರದು ಎಂದು ಹೇಳಿದರು.

ನಾನು ರೇವತಿ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದೇನೆ, ಕೃಷ್ಣಪ್ಪ ಅವರದ್ದು ಸಂಪ್ರದಾಯಸ್ಥ ಕುಟುಂಬ. ಬಹುಶಃ ಕೃಷ್ಣಪ್ಪ ಅವರನ್ನು ನೋಡಿ ನಾನು ಮದುವೆಗೆ ಒಪ್ಪಿಕೊಂಡೆ ಎಂದು ಸಂದರ್ಶನವೊಂದರಲ್ಲಿ ನಿಖಿಲ್ ಕುಮಾರ್ ಹೇಳಿದ್ದಾರೆ. ರೇವತಿ ಜೊತೆಗೆ ನಾನಿನ್ನೂ ಮಾತನಾಡಿಲ್ಲ. ನನ್ನ ತಂದೆ ತಾಯಿ ನನಗೆ ಒಳ್ಳೆಯ ಹುಡುಗಿಯನ್ನು ಆರಿಸುತ್ತಾರೆ ಎಂಬ ನಂಬಿಕೆ ನನಗಿದೆ. ಹಾಗಾಗಿ ಕಣ್ಮುಚ್ಚಿಕೊಂಡು ಮದುವೆಗೆ ಒಪ್ಪಿಕೊಂಡಿದ್ದೇನೆ’ ಎಂದಿದ್ದಾರೆ ನಿಖಿಲ್ ಕುಮಾರ್.

LEAVE A REPLY

Please enter your comment!
Please enter your name here