ನಗುನಗುತ್ತಲೇ ಪಿವಿಆರ್ ಕಂಪನಿಗೆ ಬಿಸಿ ಮುಟ್ಟಿಸಿದ ಪುನೀತ್ ರಾಜಕುಮಾರ್

  0
  447

  ನಟ ಪುನೀತ್ ರಾಜ್ ಕುಮಾರ್ ಹೆಚ್ಛು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ, ಅಕಸ್ಮಾತ್ ಕಾಣಿಸಿಕೊಂಡರೂ ಯಾವುದಾದರು ಕಾರ್ಯಕ್ರಮದ ನಿಮಿತ್ತ ತೆರಳಿರುತ್ತಾರೆ. ಅಂತದ್ದೆ ಪ್ರಸಂಗ ಲಾಕ್ ಡೌನ್ ಆಗುವ ಕೆಲ ದಿನಗಳ ಮುಂಚೆ ಓಲ್ಡ್ ಮದ್ರಾಸ್ ರಸ್ತೆಯಲ್ಲಿರುವ ಪಿವಿಆರ್ ಮಳಿಗೆ ಯೊಂದಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನ ಬಂದಿದ್ದ ಕಾರಣ ಅಲ್ಲಿ ಕಾಣಿಸಿಕೊಂಡರು. ಕಾರಣ ಪಿವಿಆರ್ನ ವಾರ್ಷಿಕೋತ್ಸವದ ಪ್ರಯುಕ್ತ ಅಲ್ಲಿ ಒಂದಷ್ಟು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

  ಅದರ ಜೊತೆಗೆ ಕಾರ್ಯಕ್ರಮಕ್ಕೆ ಕರೆದ ಪಿವಿಆರ್ ಸಂಸ್ಥೆಗೆ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗಳು ಪುನೀತ್ ರಾಜ್ ಕುಮಾರ್ ಅವರನ್ನು ನಿಜಕ್ಕೂ ಪೇಚಿಗೆ ಸಿಲುಕುವಂತಾಯಿತೇನೋ ಎಂದು ಭಾವಿಸಿದ್ದರು. ಆದರೆ ನಟ ಪವರ್ ಸ್ಟಾರ್ ಎಂದಿನಂತೆ ತಮ್ಮ ಹಸನ್ಮುಖದ ಮುಖಾಂತರ ತಮ್ಮ ಅನುಭವವನ್ನು ಹಂಚಿಕೊಂಡರು.

  ವಿಷಯ ಏನೆಂದರೆ ಬಹಳ ದಿನಗಳಿಂದಲೂ ಪಿವಿಆರ್ ಸಿಂಗಲ್ ಸ್ಕ್ರೀನ್ ಗಳು ಕನ್ನಡ ಚಿತ್ರಗಳಿಗೆ ಅಷ್ಟೇನೂ ಪ್ರೋತ್ಸಾಸ ಕೊಟ್ಟಿಲ್ಲ, ಕನ್ನಡ ಚಿತ್ರಗಳಿಗೆ ಮಲತಾಯಿ ಧೋರಣೆ ತೋರುತ್ತಲೇ ಬಂದಿವೆ. ಪರಭಾಷೆ ಚಿತ್ರಗಳಿಗೆ ನೀಡುವಷ್ಟು ಅವಕಾಶ ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನ ಅವಕಾಶ ಕಡಿಮೆ ಎಂದರೆ ತೀರಾ ಕಡಿಮೆ.

  ಒಂದುವೇಳೆ ಕನ್ನಡ ಚಿತ್ರಗಳಿಗೆ ಶೋಕೊಟ್ಟರೂ ಅದರ ಬಾಡಿಗೆಯೂ ಕೂಡ ದುಬಾರಿಯಾಗಿರುತ್ತದೆ. ಇವೆಲ್ಲಾ ಕಾರಣದಿಂದ ಮಲ್ಟಿಪ್ಲೆಕ್ಸ್ ಗಳು ಕನ್ನಡ ಚಿತ್ರವನ್ನು ಪೋಷಿಸುತ್ತಿಲ್ಲ ಎಂಬ ಆರೋಪ ಆಗಾಗೆ ಕೇಳಿಬರುತ್ತದೆ. ಇದೇ ಪ್ರಶ್ನೆಯನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಕೇಳಲಾಯಿತು ಅದಕ್ಕೆ ಸಮಾಧಾನವಾಗಿ ನಗು ನಗುತ್ತಲೆ ಪಿವಿಆರ್ ಅವರಿಗೆ ಬಿಸಿಮುಟ್ಟಿಸಿದರು.

  ಕನ್ನಡ ಚಿತ್ರಗಳಿಗೆ ಇನ್ನು ಮುಂದೆ ಪಿವಿಆರ್ ಗಳಲ್ಲಿ ಹೆಚ್ಚು ಅವಕಾಶ ಸಿಗಬೇಕು, ನಾನೂ ಹೆಚ್ಚು ಸಿನಿಮಾ ಲೋಕಲ್ ಥಿಯಟರ್ ನಲ್ಲಿ ಯೇ ನೋಡಿ ಎಂಜಾಯ್ ಮಾಡಿರೋದು ಅಲ್ಲಿರುವ ಎಂಜಾಯ್ ಮೆಂಟ್ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿಗುವುದಿಲ್ಲ ನನಗೆ ಸಿಂಗಲ್ ಸ್ಕ್ರೀನ್ ಇಷ್ಟ ಎಂದು ತಿಳಿಸಿದರು. ಹಾಗೆ ತಾವು ಮೊದಲ ಭಾರಿಗೆ ಪಿವಿಆರ್ ನಲ್ಲಿ ನೋಡಿದ ಸಿನಿಮಾ ಅಂದರೆ ಅದು ಜೋಗಿ. ಆಗ ಸೌತ್ ಸಿನಿಮಾದ ಸೂಪರ್ ಸ್ಟಾರ್ ರಜನಿಕಾಂತ್, ಅಪ್ಪಾಜಿ, ಶಿವಣ್ಣ ಅವರೊಂದಿಗೆ ಸಿನಿಮಾ ನೋಡಿದ್ದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನ್ನಡ ಚಿತ್ರದ ಪರ ಈಹೇಳಿಕೆ ನಿಜಕ್ಕೂ ಪಿವಿಆರ್ ಸಂಸ್ಥೆಯವರಿಗೆ ಅರ್ಥವಾಯಿತು ಎಂದು ತಿಳಿಯಬಹುದು.

  LEAVE A REPLY

  Please enter your comment!
  Please enter your name here