ಮೊಬೈಲ್ ನೀರಲ್ಲಿ ಬಿದ್ದು ನೀರು ಒಳ ಹೊಕ್ಕಾಗ ಹೀಗೆ ಮಾಡಿ ಮೊಬೈಲ್ ಮೊದಲಿನಂತೆ ರೆಡಿ ಆಗುತ್ತದೆ

0
559

ನೀರಿನಲ್ಲಿ ನಿಮ್ಮ ಫೋನ್ ಯಾವಾಗಲಾದರು ಬಿದ್ದಿದೇಯಾ, ಅಂತಹ ಸಮಯದಲ್ಲಿ ನಾವು ಏನ್ ಮಾಡಬಹುದು. ಹೌದು ಕೆಲವು ಸಲ ನಮ್ಮ ಗಮನ ತಪ್ಪಿ,ಯಾವುದೋ ಕೆಲಸ ಕಾರ್ಯದಲ್ಲಿ ಮಗ್ನರಾಗಿದ್ದಾಗ ಕೈಜಾರಿ ಮೊಬೈಲ್ ಫೋನ್ ಕೆಳಗೆ ಬೀಳಬಹುದು, ಆದರೆ ಅದೆ ಫೋನ್ ನೀರಲ್ಲಿ ಬಿದ್ದಾಗ ಏನ್ ಮಾಡಬೇಕು? ಸರಿ ನಿಮ್ಮ ಫೋನ್ ಐಪಿ53 ರೇಟೆಂಗ್ ಹೊಂದಿದ್ದರೆ ನಿರ್ದಿಷ್ಟವಾಗಿ ಗಮನವಿಡಿ ಯಾಕಂದ್ರೇ ಇದರರ್ಥ ಅದು ಭಾಗಶ ವಾಟರ್ ಪ್ರೂಫ್ ಆಗಿರಬಹುದು. ಆದರೆ ತುಂತುರು ಹನಿ ಸೋಕಿದರೆ ಫೋನ್ ನಿಮ್ಮ ಕೈಬಿಡಬಹುದು, ಯಾಕಂದ್ರೆ ಈ ರೇಟಿಂಗ್ ಹೊಂದಿರುವ ಸ್ಮಾರ್ಟ್ ಫೋನ್ ಗಳು ಮಳೆಯಲ್ಲಿ ಬಳಕೆ ಮಾಡಿದರೆ ಅವು ಹಾನಿಗೊಳಗಾಗಬಹುದು.

ಆದರೆ ಐಪಿ 67ಮತ್ತು 68 ಐಪಿ ರೇಟಿಂಗ್ ಹೊಂದಿರುವ ಫೋನ್ ಗಳು ಈಸಮಯದಲ್ಲಿ ನೀವು ಪಡೆಯುವಷ್ಟು ಹತ್ತಿರದಲ್ಲಿವೆ. ಈ ರೇಟಿಂಗ್ ಹೊಂದಿರುವ ಫೋನ್ ಗಳುಈಗ ಸಾಮಾನ್ಯವಾಗಿವೆ. ವಿಶೇಷವಾಗಿ ಕೆಲವು ವರ್ಷಗಳಿಂದ ಹೋಲಿಸಿದರೆ ಫ್ಲಾಗ್ ಶಿಪ್ ಗಳಲ್ಲಿ ಮಧ್ಯಶ್ರೇಣಿಯ ಫೋನ್ಗಳು ಉತ್ತಮವಾಗಿವೆ. ಈ ಕೆಳಗಿನ ವಿಧಾನ ಕೇವಲ ಐಪಿ 67ಮತ್ತು 68 ಸರ್ಟಿಫೈಡ್ ಅಲ್ಲದ ಫೋನ್ ಗಳಿಗೆ ಅನ್ವಯಿಸುತ್ತದೆ. ಫೋನ್ ನೀರಲ್ಲಿ ಬಿದ್ದ ನಂತರ ಪಾಲಿಸಬೇಕಾದ ಕೆಲಸಗಳಿವು, ನೀರಿನಿಂದ ತೆಗೆದು ಅದರಲ್ಲಿರುವ ನೀರನ್ನು ಪೂರ್ತಿಯಾಗಿ ಆದಷ್ಟು ತೆಗೆಯಿರಿ ಕೆಲವು ಸ್ಮಾರ್ಟ್ ಪೋನ್ ಗಳು ವಾಟರ್ ಪ್ರೂಫ್ ಹೊದಿಕೆಯನ್ನು ಹೊಂದಿರುತ್ತವೆ.

ಅದು ನೀರಿನಲ್ಲಿ ಕೆಲವು ಸೆಕೆಂಡುಗಳ ಕಾಲ ಹಾನಿಯಾಗದಂತೆ ತಡೆಯುತ್ತದೆ.ನೀರಿನಿಂದ ತೆಗೆದ ತಕ್ಷಣ ಸ್ವಿಚ್ ಆಫ್ ಮಾಡಿ ಇದರಿಂದ ಯಾವುದೇ ರೀತಿಯ ಶಾರ್ಟ್ ಸರ್ಕೂಟ್ ಆಗದೆ ಫೋನ್ ಇಂಟರ್ನಲ್ ಗಳನ್ನು ಹಾನಿಯಾಗದಂತೆ ತಡೆಯುತ್ತದೆ. ಫೋನ್ ಸ್ವಿಚ್ ಆಫ್ ಮಾಡಿದ ನಂತರ ಸಿಮ್ ಕಾರ್ಡ್,ಬ್ಯಾಟರಿ,ಮೆಮೊರಿ ಕಾರ್ಡ್ ಗಳನ್ನು ತೆಗೆದು ಒಣಗಿದ ಬಟ್ಟೆಯಿಂದ ಒರೆಸಿ, ನಂತರ ಮುಖ್ಯವಾಗಿ ಹೆಡ್ ಫೋನ್ ಚಾರ್ಜಿಂಗ್ ಫೋರ್ಟಲ್ಲಿ ಮತ್ತು ಫೋನಿನ ಬಟನ್ ಗಳ ಸುತ್ತಾಮುತ್ತಾ ತಿರುಗಿಸಿ ನಂತರ ಒಣಗಿದ ಬಟ್ಟೆಯಿಂದ ಅದನ್ನು ಸುಲಭವಾಗಿ ಅದನ್ನು ಆರಿಸಿ ಒರೆಸಿರಿ.

ಇದು ಸಾಮಾನ್ಯವಾಗಿ ಬಳಸುವ ಮತ್ತು ತಿಳಿದ ತಂತ್ರಗಳಲ್ಲಿ ಒಂದಾಗಿದೆ, ಗಾಳಿಯಾಡದ ಅಥವಾ ಜಿ಼ಪ್ ಪ್ಯಾಕ್ ಕವರನ್ನು ಪಡೆಯಿರಿ ಮತ್ತು ಅದರಲ್ಲಿ ಅಕ್ಕಿಯನ್ನು ತುಂಬಿಸಿ. ಅಕ್ಕಿ ಒಳಗೆ ನಿಮ್ಮಫೋನ್ ಇರಿಸಿ ಜಿ಼ಪ್ ಲಾಕ್ ಕವರ್ ಗಾಳಿಯಾಡದ ಹಾಗೆ ಬಿಗಿಯಾಗಿ ಮುಚ್ಚಿ ಮತ್ತು ಒಣ ಸ್ಥಳದಲ್ಲಿ ಇರಿಸಿ. ಕನಿಷ್ಟ 24ರಿಂದ 48 ಘಂಟೆ ವರೆಗೂ ಫೋನ್ ಅನ್ನು ಅದರ ಒಳಗಡೆಯೇ ಬಿಡಿ ನಂತರ ಸಿಮ್, ಬ್ಯಾಟರಿ,ಮೆಮೊರಿ ಎಲ್ಲವನ್ನು ಹಾಕಿ ಆನ್ ಮಾಡಿ ಫೋನ್ ಒಳಗಡೆ ಹೆಚ್ಚು ನೀರಿಲ್ಲದಿದ್ದರೆ ಆನ್ ಆಗುತ್ತದೆ.

ಕೊನೆಯದಾಗಿ ಇದರ ನಂತರವೂ ಕೆಲಸ ಮಾಡದಿದ್ದರೆ ನೀರಿನಲ್ಲಿ ಮುಳುಗುವಿಕೆ ಗೆ ಯಾವುದೇ ಮೊಬೈಲ್ ಕಂಪನಿಯು 100% ಗ್ಯಾರಂಟಿ ಕೊಡುವುದಿಲ್ಲ, ನೀರಿನಲ್ಲಿಬಿದ್ದ ಫೋನ್ ಮರುಪಡೆಯುವುದು ನಿಮ್ಮ ಫೋನ್ ಮತ್ತೆ ಕೆಲಸ ಮಾಡುವಲ್ಲಿ ಶೇಕಡಾ50% ಮಾತ್ರ ಅವಕಾಶವಿದೆ. ಅಕ್ಕಿಯ ವಿಧಾನವನ್ನು ಪ್ರಯತ್ನಿಸಿದ ನಂತರವೂ ಕಾರ್ಯ ನಿರ್ವಹಿಸದಿದ್ದರೆ ಅದನ್ನು ಮೊಬೈಲ್ ಸರ್ವಿಸ್ ಸೆಂಟರ್ಗೆ ತೆಗೆದುಕೊಂಡು ಹೋಗಿ ನಿಮ್ಮ ಫೋನ್ ಅನ್ನು ರಿಪೇರಿ ಮಾಡಿಸಕೊಳ್ಳ ಬೇಕಾಗುತ್ತದೆ ಹಾಗು ಅದಕ್ಕೆ ತಗಲುವ ಸಂಪೂರ್ಣ ಖರ್ಚನ್ನು ನೀವೇ ಭರಿಸಬೇಕಾಗಿರುತ್ತದೆ.

LEAVE A REPLY

Please enter your comment!
Please enter your name here