ಮೆದುಳಿಗೆ ತೊಂದರೆ ಮಾಡುವ ಈ 9 ಹವ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಅವನ್ನು ಬಿಟ್ಟುಬಿಡಿ

0
955

ಆರೋಗ್ಯವೇ ಭಾಗ್ಯ. ನೋಡಿ ಈ ಒಂದು ವಾಕ್ಯ ಎಷ್ಟು ಅರ್ಥಗರ್ಭಿತವಾದುದು. ಮನುಷ್ಯನ ಜೀವನದಲ್ಲಿ ಎಲ್ಲಾ ಸುಖಗಳಿದ್ದರೂ ಆರೋಗ್ಯ ಸರಿಯಿಲ್ಲದಿದ್ದರೆ ಏನಿದ್ದರೂ ವ್ಯರ್ಥ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಮ್ಮ ಸರಿಯಾಗಿರದ ಜೀವನಶೈಲಿಯಿಂದ ಕಲಬೆರಕೆ ಆಹಾರ ಸೇವನೆಗಳಿಂದ ಮತ್ತು ಇನ್ನಿತರ ವಿವಿಧ ರೀತಿಗಳಿಂದ ಆರೋಗ್ಯದ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಇನ್ನು ನಮಗೆ ಗೊತ್ತಿಲ್ಲದಂತೆ ನಾವು ಮಾಡುವ ಕೆಲವು ತಪ್ಪುಗಳು ನಮಗೆ ಮುಳುವಾಗುತ್ತದೆ..

ಮೆದುಳು ಮಾನವನ ಪ್ರತಿಯೊಂದು ಕೆಲಸವನ್ನು ಮಾಡುವ ಶಕ್ತಿಶಾಲಿ ಭಾಗ. ಅಂತಹ ಮೆದುಳಿಗೆ ನಮ್ಮ ಕೆಲವು ಹವ್ಯಾಸಗಳು ತೊಂದರೆಯನ್ನುಂಟುಮಾಡುತ್ತದೆ. ಒಂದು ವೇಳೆ ಇವೇನಾದರೂ ನಿಮ್ಮಲ್ಲಿದ್ದರೆ ಇವತ್ತೇ ಅವುಗಳನ್ನು ದೂರ ಮಾಡಿ ಆರೋಗ್ಯದಿಂದಿರಿ ಮತ್ತು ಸಾಧ್ಯವಾದರೆ ನಿಮ್ಮವರೊಂದಿಗೂ ಹಂಚಿಕೊಂಡು ಸಹಾಯ ಮಾಡಿರಿ. ಬನ್ನಿ ಹಾಗಿದ್ದರೆ ಆ ಒಂಭತ್ತು ಹವ್ಯಾಸಗಳ ಬಗ್ಗೆ ತಿಳಿಯೋಣ.

ಮೊದಲನೆಯದು ಬೆಳಗಿನ ತಿಂಡಿಯನ್ನು ತಿನ್ನದೇ ಇರವುದು, ಎರಡನೆಯದು ಬೆಳಗಿನ ಸಮಯದಲ್ಲಿ ಅತಿಯಾಗಿ ನಿದ್ರೆ ಮಾಡುವುದು, ಮೂರನೆಯದು ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಅನಾವಶ್ಯಕವಾಗಿ ಯೋಚನೆ ಮಾಡುವುದು, ನಾಲ್ಕನೆಯದು ಅತಿಯಾಗಿ ಮಾತನಾಡುವುದು, ಐದನೆಯದು ಮೂತ್ರವನ್ನು ತಡೆಗಟ್ಟುವುದು, ಆರನೆಯದು ಟಿವಿ ಕಂಪ್ಯೂಟರ್ ಮೊಬೈಲ್ ಗಳ ಮುಂದೆ ಕುಂತು ಆಹಾರ ಸೇವನೆ ಮಾಡುವುದು, ಏಳನೆಯದು ಅವಶ್ಯಕತೆಗಿಂತ ಹೆಚ್ಚಿನ ಸಕ್ಕರೆ ಸೇವನೆ, ಎಂಟನೆಯದು ನಮ್ಮ ದೇಹದ ಸಾಮರ್ಥ್ಯ ಮೀರಿ ಅತಿಯಾಗಿ ಆಹಾರ ಸೇವನೆ ಮಾಡುವುದು, ಇನ್ನು ಕೊನೆಯದಾಗಿ ನಿದ್ರೆ ವೇಳೆ ಸ್ಕ್ಯಾರ್ಫ್ ಟೋಪಿ ಸಾಕ್ಸ್ ಧರಿಸುವುದು

LEAVE A REPLY

Please enter your comment!
Please enter your name here