ಮಂಗಳ ಗ್ರಹದಲ್ಲಿ ಸೆರೆಸಿಕ್ಕಿದ್ದ್ದಈ ವಿಚಿತ್ರ ಆಕೃತಿ ಅಸಲಿಗೆ ಏನು ಗೊತ್ತೇ

0
776

ವಿಜ್ಞಾನ ಲೋಕದಲ್ಲಿ ಕ್ಷಣಕ್ಕೊಂದು ಅಚ್ಚರಿ ನಡೆಯುತ್ತಿರುತ್ತವೆ ಮತ್ತು ಹೊಸ ಸಂಶೋಧನೆಗಳು, ಪ್ರಯೋಗಗಳು ಕೂಡ ನಡೆಯುತ್ತಿರುತ್ತವೆ. ಇನ್ನು ತಂತ್ರಜ್ಞಾನದಲ್ಲಿಯೂ ಹಲವಾರು ಸಂಶೋಧನೆಗಳು ನಡೆಯುತ್ತವೆ. ಹೀಗೆ ಗ್ರಹಗಳ ಮೇಲೂ ಕೂಡ ವಾಸ ಮಾಡಬಹುದಾದ ಯೋಗ್ಯ ಗ್ರಹಗಳು ಇವಿಯಾ ಇದ್ದರೆ ಅದು ಯಾವುದು ಅಲ್ಲಿ ಮನುಷ್ಯ ಜೀವಿಸಬಹುದಾದ ವಾತವರಣ ಮೂಲಭೂತ ಗಾಳಿ, ನೀರು, ನೆಲದ ಮೂಲಗಳು ಇದಿಯಾ ಎಂಬುದರ ಬಗ್ಗೆ ವಿಚಾರ ಸಂಶೋಧನೆಗಳು ನಡೆದಿರುತ್ತದೆ. ಹೀಗೆ ಅಮೇರಿಕಾದ ನಾಸಾವು ಹಲವು ಬಾರಿ ಈ ಮಂಗಳ ಗ್ರಹದ ಮೇಲೆ ಪ್ರಯೋಗ ಮಾಡುತ್ತಲೆ ಬಂದಿರುತ್ತದೆ.

ಮಂಗಳವು ಪ್ರಸ್ತುತಕ್ಕಿಂತ ಗಮನಾರ್ಹವಾಗಿ ಹೆಚ್ಚು ವಾಸಯೋಗ್ಯವಾಗಿತ್ತೆನ್ನುವುದಕ್ಕೆ ಕೆಲವು ಸಾಕ್ಷ್ಯಾಧಾರಗಳಿವೆ. ಮಂಗಳದ ಮೇಲೆ ಜೀವಿಗಳು ಅಸ್ತಿತ್ವದಲ್ಲಿ ಇದ್ದವೆ? ಎನ್ನುವುದಕ್ಕೆ ಉತ್ತರವಿಲ್ಲ. 70ರ ದಶಕದ ನಡುವೆ ಉಡಾಯಿಸಲಾದ ವೈಕಿಂಗ್ ಅನ್ವೇಷಕಗಳು ಮಂಗಳದ ಮೇಲಿಳಿದು ಅಲ್ಲಿಸೂಕ್ಷ್ಮ ಜೀವಿಗಳ ಇರುವಿಕೆಯನ್ನುಕಂಡುಹಿಡಿಯಲು ಮಂಗಳದ ಮಣ್ಣಿನೊಂದಿಗೆ ಕೆಲವು ಪ್ರಯೋಗಗಳನ್ನು ನಡೆಸಿದವು. ಈ ಪ್ರಯೋಗಗಳ ಫಲಿತಾಂಶಗಳು ಆಶಾದಾಯಕವಾಗಿದ್ದವಾದರೂ, ತದನಂತರ ಹಲವು ವಿಜ್ಞಾನಿಗಳು ಈ ಫಲಿತಾಂಶಗಳನ್ನು ಅಲ್ಲಗಳೆದರು, ಈ ಉಲ್ಕೆಯು ಮಂಗಳದಿಂದ ಭೂಮಿಗೆ ಬಂದಿತು ಎಂದು ನಂಬಲಾಗಿದೆ.

ಸಣ್ಣ ಪ್ರಮಾಣದಲ್ಲಿ ಕಂಡುಬಂದ ಮೀಥೇನ್ ಮತ್ತು ಫಾರ್ಮಾಲ್ಡಿಹೈಡ್ ಸಂಯುಕ್ತಗಳು ಮಂಗಳದ ಮೇಲೆ ಜೀವಿಗಳಿರುವುದಕ್ಕೆ ಸಾಕ್ಷಿ ಎಂದೂ ಸೂಚಿಸಲಾಗಿದೆ. ಜೀವಿಗಳಿಲ್ಲದಿದ್ದರೆ ಈ ವಸ್ತುಗಳು ಮಂಗಳದ ವಾಯುಮಂಡಲದಲ್ಲಿ ಬಹುಬೇಗನೆ ಪತನವಾಗುತ್ತಿದ್ದವು. ಆದರೆ ಈ ವಸ್ತುಗಳು ಅಗ್ನಿಪರ್ವತಗಳ ಚಟುವಟಿಕೆಯಿಂದ ಅಥವಾ ಗ್ರಹದ ಒಳಗಿನಿಂದಲೂ ಮೇಲ್ಮೈಗೆ ಬಂದಿರಬಹುದು. ಸಾಧಾರಣವಾಗಿ ಮಂಗಳವನ್ನು ವಾಸಯೋಗ್ಯವಾಗಿ ಪರಿಗಣಿಸಲು ಕೆಲವು ಕಾರಣಗಳಿದ್ದರೂ, ವಾಸದ ಮುನ್ನ ಎದುರಿಸಬೇಕಾದ ಹಲವಾರು ಸಮಸ್ಯೆಗಳೂ ಇವೆ.

ಅಮೇರಿಕಾದ ನಾಸಾವು ಹಲವು ಪ್ರಯೋಗಗಳನ್ನು ಮಾಡಿದ್ದರೂ ಎಲ್ಲ ವಿಚಾರವನ್ನು ಅವು ಸಾರ್ವಜನಿಕವಲಯಕ್ಕೆ ಬಿಟ್ಟು ಕೊಡುವುದಿಲ್ಲ .ಮಂಗಳಗ್ರಹದಲ್ಲಿ ಚಿತ್ರಿತವಾದ ಕೆಲವು ಚಿತ್ರಗಳು ದೀಪದ ಬೆಳಕಿನಂತೆ ಮಿಂಚತೊಡಗಿತು ಇದು ಸೂರ್ಯನ ಚಹರೆಯೇ ಇರಬೇಕೆಂದು ತಿಳಿಸಪಡುತ್ತದೆ, ಆದರೆ ಇದ್ಯಾವುದಕ್ಕೂ ನಿಖರವಾದ ಸಾಕ್ಷ್ಯಾಧಾರಗಳಿಲ್ಲ. 1976 ಜುಲೈ 25ರಲ್ಲಿ ವೈಕಿಂಗ್ ವಾನ್ ಯಾನವನ್ನು ಮಾರ್ಸ್ನಲ್ಲಿ ಕಳುಹಿಸಲಾಗಿತ್ತು. ಮಂಗಳ ಗ್ರಹದ ಮೇಲೆ ಮೊದಲ ಬಾರಿಗೆ ಲ್ಯಾಂಡ್ ಆದಾಗಿತ್ತು. ಇದು ಅಲ್ಲಿಂದ ತೆರಳುವಾಗ ಮಂಗಳ ಗ್ರಹದ ಮೇಲ್ಮೈಲಕ್ಷಣಗಳನ್ನು ತೆಗೆದಿರುತ್ತದೆ, ಈ ಚಿತ್ರದಲ್ಲಿ ಮನುಷ್ಯನನ್ನು ಹೋಲುವ ಚಿತ್ರವು ಕಂಡು ಬಂದಿರುತ್ತದೆ.

ಆದರೆ ಇದನ್ನು ನಾಸಾವು ಅದು ಬಂಡೆ ಕಲ್ಲಿನ ನೆರಳಿನ ಆಕೃತಿ ಎಂದು ಸಮರ್ಥನೆ ನೀಡಿತ್ತು. ಹಾಗೇ ಮಂಗಳದಲ್ಲಿ ಕಾಣಿಸಿಕೊಂಡ ಪಿರಮಿಡ್ ಆಕೃತಿಯನ್ನು ನಾಲ್ಕು ಇಂಚು ಎತ್ತರದ ಬಂಡೆ ಎಂದು ತಿಳಿಸಿತು ನಾಸಾ. ಅದಲ್ಲದೆ ಮಂಗಳದಲ್ಲಿ ರಹಸ್ಯ ಮಹಿಳೆಯ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಯುಎಫ್ಓ ಲಾಜಿಸ್ಗಳು ಇದನ್ನು ಮಹಿಳೆ ಆಕೃತಿ ಎಂದು ವಾದಿಸಿದರೂ ಅದನ್ನು ನಾಸಾವು ಇದೆಲ್ಲಾ ಕಾಕತಾಳೀಯ ಎಂದು ತಳ್ಳಿಹಾಕಿದೆ.

ಮಂಗಳವು ಸೂರ್ಯನ ವಾಸಯೋಗ್ಯ ವಲಯದ ಮಿತಿಯಿಂದ 0.5ಖಗೋಳಮಾನ ಆಚೆಯಿರುವುದರಿಂದ ಇಲ್ಲಿ ನೀರು ಸದಾಕಾಲ ಹೆಪ್ಪುಗಟ್ಟಿ ಮಂಜಾಗಿರುತ್ತದೆ. ಹೀಗಿದ್ದರೂ, ಹಿಂದಿನ ಕಾಲದಲ್ಲಿ ಇಲ್ಲಿ ನೀರು ಜಲರೂಪದಲ್ಲಿ ಇತ್ತೆಂಬುದಕ್ಕೆ ಸಾಕ್ಷಿಗಳಿವೆ. ಹೀಗಾಗಿ ಇದು ಬಹಳ ದೊಡ್ಡ ಸಮಸ್ಯೆಯಲ್ಲವೆಂದು ಪರಿಗಣಿಸಬಹುದು. ಇದಕ್ಕಿಂತ ದೊಡ್ಡದಾದ ಗಂಭೀರ ಸಮಸ್ಯೆಗಳೆಂದರೆ, ಮಂಗಳದ ಮೇಲೆ ಕಾಂತಕ್ಷೇತ್ರ ಇಲ್ಲದಿರುವುದು ಹಾಗೂ ಅತಿ ವಿರಳವಾದ ವಾಯುಮಂಡಲ.

ಇವುಗಳ ಪರಿಣಾಮ ಮೇಲ್ಮೈನ ಮೇಲೆ ಶಾಖದ ಸಂವಹನ ಉಂಟಾಗದಿರುವುದು, ಸೂರ್ಯನ ವಿಕಿರಣ ಮತ್ತು ಉಲ್ಕೆಗಳಿಂದ ರಕ್ಷಣೆ ಸಿಗದಿರುವುದು, ನೀರನ್ನು ಜಲರೂಪದಲ್ಲಿಟ್ಟುಕೊಳ್ಳಲು ಅಗತ್ಯವಾದಷ್ಟು ವಾಯು ಒತ್ತಡ ಇಲ್ಲದಿರುವುದು ಇದಲ್ಲದೆ, ಮಂಗಳದಲ್ಲಿ ಅಗ್ನಿಪರ್ವತಗಳ ಚಟುವಟಿಕೆಗಳು ಸಂಪೂರ್ಣವಾಗಿ ಅಥವಾ ಬಹುಮಟ್ಟಿಗೆ ನಿಂತುಹೋಗಿವೆ. ಇದರ ಕಾರಣದಿಂದಾಗಿ ಮೇಲ್ಮೈ ಮತ್ತು ಗ್ರಹದ ಒಳಭಾಗಗಳ ನಡುವೆ ಖನಿಜಗಳ ಚಲನೆ ನಡೆಯುತ್ತಿಲ್ಲ.

LEAVE A REPLY

Please enter your comment!
Please enter your name here