ಮದುವೆಯಾದ ವ್ಯಕ್ತಿ ಜೊತೆ ಅನುಷ್ಕಾ ಶೆಟ್ಟಿ ಮದುವೆ! ಆತ ಒಬ್ಬ ಲೆಜೆಂಡರಿ ನಿರ್ದೇಶಕ ಮಗ

0
408

ಸ್ನೇಹಿತರೇ ತೆಲುಗು ಚಲನಚಿತ್ರದ ದೊಡ್ಡ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಯಾರಿಗೆ ತಾನೇ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಅನುಷ್ಕಾ ಶೆಟ್ಟಿ ಅವರು ಮೂಲತಃ ನಮ್ಮ ಕರ್ನಾಟಕದ ಮಂಗಳೂರಿನವರು. ಅನುಷ್ಕಾ ಶೆಟ್ಟಿ ಅವರು ತನ್ನ ಅಂದ ಚಂದದಿಂದ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾಳೆ. ಅನುಷ್ಕಾ ಅವರು ನಟಿಸಿದ ಅರುಂಧತಿ, ರುದ್ರಮ್ಮ ದೇವಿ, ಬಾಹುಬಲಿ ಮುಂತಾದ ಸಿನೆಮಾಗಳು ಯಾವ ರೀತಿ ಸಡ್ಡು ಮಾಡಿತು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಟಿಸಿದ ಬಾಹುಬಲಿಯಲ್ಲಿ ಅವರಿಬ್ಬರ ಕೆಮಿಸ್ಟ್ರಿ ಕೂಡ ತುಂಬಾ ಜೋರಾಗಿತ್ತು.

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಾಹುಬಲಿ ಸಿನಿಮಾ ರಿಲೀಸ್ ಆದಗಿನಿಂದ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್ ಇಬ್ಬರ ಮದುವೆ ಸುದ್ದಿಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಈ ವರ್ಷವೆ ಅನುಷ್ಕಾ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದರ ಬೆನ್ನಲೆ ಈಗ ದೇವಸೇನಾ ಕೈ ಹಿಡಿಯುವ ಹುಡುಗ ಯಾರು ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

ಇತ್ತೀಚಿಗಷ್ಟೆ ಅನುಷ್ಕ ಖ್ಯಾತ ಕ್ರಿಕೆಟರ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಇದರ ಬೆನ್ನಲ್ಲೆ ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಹೌದು, ಸದ್ಯ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಅನುಷ್ಕಾ ತೆಲುಗಿನ ಖ್ಯಾತ ನಿರ್ದೇಶಕರ ಮಗನ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರಂತೆ. ಹಾಗಾದರೆ ಆ ಲೆಜೆಂಡರಿ ನಿರ್ದೇಶಕ ಯಾರು? ಅನುಷ್ಕಾ ಮದುವೆ ಆಗುತ್ತಿರುವ ಹುಡುಗ ಯಾರು ಮುಂದೆ ಓದಿ. ಅನುಷ್ಕಾ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿರುವ ಆ ಹುಡುಗ ಮತ್ಯಾರು ಅಲ್ಲ ಲೆಜೆಂಡರಿ ನಿರ್ದೇಶಕರ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೋವೆಲಮುಡಿ ಎಂದು ಹೇಳಾಗುತ್ತಿದೆ.

ಇಬ್ಬರು ಕೂಡ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಪ್ರಕಾಶ್ 2014ರಲ್ಲಿ ಕನ್ನಿಕಾ ಧಿಲ್ಲಾನ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 2017ರಲ್ಲಿ ಪತ್ನಿಯಿಂದ ದೂರ ಆಗಿ ವಿಚ್ಛೇದನ ಪಡೆದಿದ್ದಾರೆ. ನಂತರ ಅನುಷ್ಕಾ ಜೊತೆ ಪ್ರೀತಿಯಲ್ಲಿ ಇದ್ದಾರೆ ಎಂದು ಹೇಳಾಗುತ್ತಿದೆ. ಪ್ರಕಾಶ್ ಕೊವೆಲಮುಡಿ ಸಹ ನಿರ್ದೇಶಕರು. ಪ್ರಕಾಶ್ ಪತ್ನಿಯಿಂದ ದೂರ ಆಗಿ ವಿಚ್ಛೇದನದ ಪಡೆದ ನಂತರ ಅನುಷ್ಕಾ ಶೆಟ್ಟಿಯನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದು, ಯಾರಿಗೂ ಗೊತ್ತಾಗದ ಹಾಗೆ ಪಾಕಾಡಿಕೊಂಡು ಬಂದಿದ್ದಾರಂತೆ. ಈ ಬಗ್ಗೆ ಅನುಷ್ಕಾ ಆಪ್ತ ಮೂಲಗಳನ್ನು ವಿಚಾರಿಸಿದರೆ ಯಾವುದೆ ಮಾಹಿತಿ ಬಿಟ್ಟುಕೊಡುತ್ತಿಲ್ಲ ಎಂದು ತೆಲುಗಿನ ಅನೇಕ ವೆಬ್ ಸೈಟ್ ಗಳು ವರದಿ ಮಾಡಿವೆ.

ಸದ್ಯ ಅನುಷ್ಕಾ ಮತ್ತು ಪ್ರಕಾಶ್ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಬಗ್ಗೆ ಅನುಷ್ಕಾ ಆಗಲಿ ಅಥವಾ ಪ್ರಕಾಶ್ ಕುಟುಂಬವಾಗಲಿ ಯಾವುದು ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಕ್ರಿಕೆಟರ್ ಮದುವೆ ಆಗುತ್ತಾರೆ ಎನ್ನುವ ಗಾಳಿ ಸುದ್ದಿ ಹಬ್ಬಿದ ಹಾಗೆ ಇದು ಕೂಡ ಗಾಳಿ ಸುದ್ದಿಯ ಅಥವಾ ನಿಜಕ್ಕು ಅನುಷ್ಕಾ ಹಸೆಮಣೆ ಏರಲು ಸಜ್ಜಾಗಿದ್ದಾರಾ ಎನ್ನುವುದು ಕಾದುನೋಡಬೇಕು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಬೆಂಗಳೂರು ಪೇಜ್ ನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here