ಮದುವೆ ಖುಷಿಯಲ್ಲಿದ್ದ ಹಾರ್ದಿಕ್ ಪಾಂಡ್ಯನ ಈಗಿನ ಪರಿಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರತ್ತೆ

0
468

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಹಾರ್ದಿಕ್ ಪಾಂಡ್ಯ ಬ್ಯಾಟ್ ಹಿಡಿದು ಗ್ರೌಂಡ್ ಗೆ ಇಳಿದರೆ ಸಾಕು ಎದುರಾಳಿಗಳಲ್ಲಿ ಭಯ ತುಂಬುಕೊಳ್ಳುತ್ತದೆ. ಮತ್ತೆ ಬೌಲಿಂಗ್ ನಲ್ಲಿ ಕೂಡ ತಾನು ಏನು ಅಂತ ಸಾಬೀತು ಪಡಿಸಿದ್ದಾರೆ. ಇನ್ನು ಹೇಳಬೇಕಾದರೆ ಹೊಸ ವರ್ಷದ ಆರಂಭದಲ್ಲೇ ಸರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೊವ್ನಿಕ್​ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಘೋಷಿಸಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎಲ್ಲರಿಗೂ ಅಚ್ಚರಿ ನೀಡಿದ್ದರು.​

ದುಬೈನಲ್ಲಿ ನೆರವೇರಿಸಿಕೊಂಡ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಸ್ಟಾರ್ ಜೋಡಿ ತಮ್ಮ ಇನ್ ​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡಿದ್ದು ನೋಡಿ ಅನೇಕರು ಶಾಕ್ ಆಗಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಂದಿನಿಂದ ಇಂದಿನವರೆಗೂ ಸುಮ್ಮನೆ ಕುಳಿತಿಲ್ಲ. ಬದಲಾಗಿ ಮೀಮ್ಸ್​ ಗಳನ್ನು ಹರಿಬಿಟ್ಟು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ. ಸಕತ್ ಟ್ರೊಲ್ ಮಾಡುತ್ತಿದ್ದಾರೆ.

ಹಾರ್ದಿಕ್ ನಟಾಶಾ ತಾರಾಜೋಡಿಯು ನೆಟ್ಟಿಗರನ್ನು ಸೆಳೆದಿದ್ದು ಇಂಟೆರ್ ನೆಟ್ ತುಂಬೆಲ್ಲಾ ಮೀಮ್ಸ್ ಗಳು ಹರಿದಾಡುತ್ತಿದೆ. ನತಾಶಾರೊಟ್ಟಿಗೆ ಹಾರ್ದಿಕ್ ಪಾಂಡ್ಯ ತೆಗೆದುಕೊಂಡಿರುವ ಸೆಲ್ಫಿ ಫೋಟೋದಲ್ಲಿ ನತಶಾ ಮುಖವನ್ನು ತೆಗೆದು, ಅದಕ್ಕೆ ಭಿಕ್ಷುಕಿಯಿಂದ ಗಾಯಕಿಯಾದ ರಾನು ಮಂಡಲ್​ ಮುಖ ಸೇರಿಸಿ ಎಡಿಟ್ ಮಾಡಿರುವ ಮೀಮ್ಸ್​ ಹರಿಬಿಟ್ಟು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಬಿಕಿನಿ ಧರಿಸಿ ಭಾವಿ ಪತಿ ಹಾರ್ದಿಕ್ ಜತೆ ಬೀಚ್ ನಲ್ಲಿ ನಿಂತು​ ತೆಗೆಸಿಕೊಂಡಿದ್ದ ಫೋಟೋವನ್ನು ನತಾಶಾ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಇತ್ತೀಚೆಗಷ್ಟೇ ಶೇರ್ ಮಾಡಿಕೊಂಡಿದ್ದರು. ಅದನ್ನು ನೆಟ್ಟಿಗರು ತಮ್ಮದೇ ರಿತಿಯಲ್ಲಿ ಎಡಿಟ್​ ಮಾಡಿ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೈರಲ್ ಆಗಿ ಸಾಕಷ್ಟು ಹಿಟ್ ಪಡೆದುಕೊಂಡಿದೆ, ಅಷ್ಟೇ ಟ್ರೊಲ್ ಗೆ ಗುರಿಯಾಗಿದೆ. ಪಾಪ ಇವರ ಪರಿಸ್ಥಿತಿ ನೋಡಿ ಕೆಲವೊಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು ಹಿಟ್ ಶಾಟ್, ಬಿಗ್ ಶಾಟ್ ಮ್ಯಾನ್ ಸೂಪರ್ ಜೋಡಿ, ಬಹುತ್ ಅಚ್ಚಾ ಹೈ ಎಂದೆಲ್ಲಾ ಕಮೆಂಟ್ ಗಳು ಹರಿದು ಬಂದಿವೆ. ಅಂದಹಾಗೆ ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020, ಎಂಗೇಜ್ಡ್​ ಎಂದು ಬರೆದು ಹಾರ್ದಿಕ್ ಪಾಂಡ್ಯ ಬುಧವಾರ ಸಂಜೆ (ವರ್ಷದ ಮೊದಲ ದಿನ) ಇನ್ ಸ್ಟಾಗ್ರಾಮ್ ಪೋಸ್ಟ್​ನಲ್ಲಿ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದರು.

ಇದರ ಬೆನ್ನಲ್ಲೇ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು. ಸಹಸ್ರಾರು ಲೈಕ್ಸ್ ಗಳು ಬಂದಿದ್ದವು. ಆದರೆ ಕೆಲವೊಂದು ಟ್ರೋಲಿಗರು ಮಾಡಿದ ಕೆಲಸಕ್ಕೆ ಅಭಿಮಾನಿಗಳ ಕಣ್ಣಲಿ ನೀರು ಬರುತ್ತಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರೂ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

LEAVE A REPLY

Please enter your comment!
Please enter your name here