ಕೆಪಿಸಿಸಿ ಪಟ್ಟಕ್ಕಾಗಿ ಸಿದ್ದು ಹಾಗು ಡಿಕೆಶಿ ಕಾದಾಟ,ಹೈಕಮಾಂಡ್ ಯಾರಿಗೆ ಕೊಡುತ್ತಿದ್ದಾರೆ ಗೊತ್ತೇ

0
229

ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯ ಆಟ,ಇತ್ತ ಡಿಕೆಶಿವಕುಮಾರ್ ಸಿಡಿಮಿಡಿ,ಕೆಪಿಸಿಸಿ ಆಯ್ಕೆಗಾಗಿ ರಾಜ್ಯದ ಬಣ ರಾಜಕೀಯ ಕಾಂಗ್ರೇಸ್ ಹೈಕಮಾಂಡ್ಗೆ ತಲೆ ನೋವಾಗಿ ಪರಿಣಮಿಸಿದೆ.ಹಾಗಾಗಿ ಕೆಪಿಸಿಸಿ ಸಾರಥಿಯನ್ನಾಗಿ ಆಯ್ಕೆ ಮಾಡಲು ಹೈಕಮಾಂಡ್ಗೆ ದಿಕ್ಕು ತೋಚದಂತಾಗಿದೆ.ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಯವರು ಸಿದ್ದರಾಮಯ್ಯರನ್ನು ದೆಹಲಿಯ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಚರ್ಚೆನಡೆಸಿದ್ದಾರೆ.ಈ ವೇಳೆ ಸೋನಿಯಾಗಾಂಧಿ ಯವರು ರಾಜ್ಯದಲ್ಲಿ ನಡೆಯುತ್ತಿರುವ ಬಣ ರಾಜಕೀಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ,ಇದರಿಂದಾಗಿ ಡಿಕೆ ಶಿವಕುಮಾರ್ಗೆ ಮರ್ಮಾಘಾತ ವಾಗಿದೆ.

ಇನ್ನು ಸಿದ್ದರಾಮಯ್ಯ ಅವರು ಸೋನಿಯಾ,ರಾಹುಲ್ ಗಾಂಧಿ ಬಳಿ ಡಿಕೆ ಶಿವಕುಮಾರ್ ಬದಲಿಗೆ ಎಂಬಿ ಪಾಟೀಲ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.ಹಾಗದರೇ ಸೋನಿಯಾಗಾಂಧಿ ಮುಂದೆ ಸಿದ್ದು ಹೇಳಿದ್ದೇನು.ಡಿಕೆ ಶಿವಕುಮಾರ್ಗೆ ಕೆಪಿಸಿಸಿ ಪಟ್ಟ ಕಟ್ಟಿದರೆ ಪಕ್ಷಕ್ಕೆ ಏನೂ ಪ್ರಯೋಜನವಿಲ್ಲ,ಒಕ್ಕಲಿಗ ಮತಗಳು ಜೆಡಿಎಸ್ ಪಕ್ಷಕ್ಕೆ ಅಧಿಕವಾಗಿದ್ದು.ಕಾಂಗ್ರೆಸ್ ಜೊತೆಗಿರುವ ಒಕ್ಕಲಿಗರ ಮತಗಳು ಎಲ್ಲೂ ಹೋಗಲ್ಲ.ಬಿಜೆಪಿಗೆ ಪ್ರಬಲವಾಗಿ ಎದುರೇಟು ನೀಡಲು ಲಿಂಗಾಯಿತ ಮತಗಳೇ ನಿರ್ಣಾಯಕ ವಾಗಿದೆ.ಜತೆಗೆ ಡಿಕೆಶಿಯ ಮೇಲೆ ಹಲವು ಕೇಸ್ ಗಳಿವೆ ಅವು ಮುಂದೆ ತೊಡಕಾಗಬಹುದು.

ಡಿಕೆಶಿ ಕೇಸ್ ಗಳ ಬಗ್ಗೆ ಕಾನೂನಿನ ಸಲಹೆ ಪಡೆಯಬೇಕಾಗಿದೆ.ಬಿಜೆಪಿ ಐಟಿ,ಇಡಿ ಬಳಸಿಕೊಂಡು ಡಿಕೆಶಿಯನ್ನು ಟಾರ್ಗೆಟ್ ಮಾಡಲಾಗಿದೆ.ಡಿಕೆ ಶಿವಕುಮಾರ್ ಮತ್ತೆ ಸಿಕ್ಕಿಬಿದ್ದರೆ ಪಕ್ಷಕ್ಕೆ ಭಾರಿ ಮುಜುಗರವಾಗಲಿದೆ ಎಂದು ಸಿದ್ದರಾಮಯ್ಯ ವಾದ ಮಾಡಿದ್ದಾರೆ ಎನ್ನಲಾಗಿದೆ.ಸಿದ್ದು ಟೀಂದೆಹಲಿಯಲ್ಲಿ ಲಾಬಿ ಮಾಡುತ್ತಿದ್ದರೆ ಇತ್ತ ಡಿಕೆಶಿ ಪ್ರತಿಕ್ರಿಯಿಸಿ ದೆಹಲಿಯಲ್ಲಿ ರಾಜಕೀಯ ಮಾಡುವವರು ಮಾಡಲಿಬಿಡಿ ಎಂದು ಸಿದ್ದು ಅಂಡ್ ಟೀಂಗೆ ಟಾಂಗ್ ನೀಡಿದ್ದಾರೆ,ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ಕಾರ್ಯಾಧ್ಯಕ್ಷರ ವಿಚಾರದಲ್ಲಿಯೂ ಕೂಡ ಡಿಕೆಶಿ ಯವರು ಅಪಸ್ವರ ಎತ್ತಿದ್ದರು ಆದರೆ ಸಿದ್ದರಾಮಯ್ಯ ನವರು ಕಾರ್ಯಾಧ್ಯಕ್ಷರು ಇರುತ್ತಾರೆ ಎಂದು ಹೇಳಿರುವುದು ಡಿಕೆಶಿ ಕೆಂಗಣ್ಣಿಗೆ ಗುರಿಯಾಗಿದೆ.ಮೊದಲಿಂದಲೂ ಸಿದ್ದು ಡಿಕೆಶಿ ಅಷ್ಟಕಷ್ಟೆ ಈಗ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ವಿಚಾರವಾಗಿ ಮತ್ತಷ್ಟು ಭಿನ್ನಾಭಿಪ್ರಾಯ ಸ್ಪೋಟಗೊಂಡಿದೆ,ಒಟ್ಟಾರೆಯಾಗಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ರಾಜ್ಯಕಾಂಗ್ರೆಸ್ ನಲ್ಲಿ ಒಡಕು ಮೂಡಿಸುತ್ತಿದೆ.ಮತ್ತೊಂದೆಡೆ ಹೈಕಮಾಂಡ್ ಅಂಗಳದಲ್ಲಿರುವ ಕೆಪಿಸಿಸಿ ಚೆಂಡು ಯಾರ ಕೈ ಸೇರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

LEAVE A REPLY

Please enter your comment!
Please enter your name here