ಕೊನೆಗೂ ಐಪಿಎಲ್ ನಡೆಸಲು ಸಜ್ಜು, ಯಾವಾಗ ಶುರು ಆಗುತ್ತಿದೆ ಗೊತ್ತೇ

0
73

ಕ್ರಿಕಟ್ ಲೋಕದ ರೋಚಕ ಆಟವೆಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇದು ದೇಶದ ವಿವಿಧ ರಾಜ್ಯಗಳ ತಂಡಗಳ ನಡುವೆ ನಡೆಯುವ ರೋಚಕವಾದ ಪಂದ್ಯಾವಳಿಗಳು, ಇದು ರಾಷ್ಟ್ರೀಯ ಅಂತರಾಷ್ಟ್ರೀಯ ಪಂಧ್ಯಾವಳಿಗಿಂತಲೂ ಗಮನ ಸೆಳೆಯುತ್ತವೆ. ಅಷ್ಟರಮಟ್ಟಿಗೆ ಐಪಿಎಲ್ ಕ್ರೇಜ಼್ ಹೊಂದಿರುತ್ತದೆ ಅದರಲ್ಲೂ ಟಿಕೆಟ್ ಬುಕಿಂಗ್, ಬೆಟ್ಟಿಂಗ್ ಇತ್ಯಾದಿ ಚಟುವಟಿಕೆಗಳಿಗೆ ಐಪಿಎಲ್ ಕಾಲ ಸುಗ್ಗಿಕಾಲ ಅನ್ನಬಹುದು ಆ ರೀತಿಯಲ್ಲಿ ಹಣದ ಹೊಳೆ ಹರಿಯುತ್ತದೆ. ಇನ್ನು ಗೇಮ್ಸ್ 44 ದಿನದ ಐಪಿಎಲ್ ಕೋಟವನ್ನು 5ಕ್ರೀಡಾಂಗಣದಲ್ಲಿ ನಡೆಸಲು ಭರ್ಜರಿ ಯೋಜನೆಯನ್ನೆ ಹಾಕಿಕೊಂಡಿದೆ ಬಿಸಿಸಿಐ.

ಪ್ರಪಂಚದ ರೋಚಕತೆಯ ಮತ್ತು ಉನ್ನತ ಮಟ್ಟದ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅನ್ಞು ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ )ಯೋಚಿಸಿದ್ದು ಅದರ ತಾತ್ಕಾಲಿಕ ವೇಳಾಪಟ್ಟಿಯನ್ನು ಬಹಿರಂಗ ಮಾಡಿದ್ದಾರೆ. ಸುಮಾರು 60ಪಂದ್ಯಗಳನ್ನು 44 ದಿನದ ಸಮಯದೊಂದಿಗೆ ಅಂದರೆ, ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಪಂಧ್ಯಾವಳಿ ನಡೆಸಿ ಐಪಿಎಲ್ ಮುಗಿಸಬೇಕು ಎಂದು ಬಿಸಿಸಿಐ ತಯಾರಿಯಲ್ಲಿದೆ.

ಈ ಭಾರಿ ಹೋಮ್ ಗ್ರೌಂಡ್ ಪಂಧ್ಯಾವಳಿ ಇರುವುದಿಲ್ಲ ಅದರ ಬದಲಾಗಿ ಐದು ಕ್ರೀಡಾಂಗಣ ಆಯ್ಕೆ ಮಾಡಿಕೊಂಡು ಇಡೀ ಟೂರ್ನಿಯನ್ನು ನಡೆಸಲಾಗುವುದು ಎಂದು ತಿಳಿಸಿದೆ, ಇದರ ಜೊತೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ತನ್ನ ಎಲ್ಲಾ ಫ್ರಾಂಚೈಸಿ ಮತ್ತು ಐಪಿಎಲ್ ಕ್ರಿಕೆಟ್ ಪ್ರಸಾರದ ಮಾಧ್ಯಮ ಹಕ್ಕುದಾರರಾದ ಸ್ಟಾರ್ ಇಂಡಿಯಾ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ.

ಬಿಸಿಸಿಐ ಯೋಜನೆಯಂತೆ ಐಪಿಎಲ್ ನ ನಿಗದಿತ ದಿನಾಂಕವಾಗಿರುವ ಸೆಪ್ಟಂಬರ್ ಇಂದ ನವೆಂಬರ್ ಇದು ಅವಲಂಬಿತರಾಗಿರುವುದು ಆಸ್ಟ್ರೇಲಿಯಾದಲ್ಲಿ ನಡೆಯಬಹುದಾದ ವಿಶ್ವಕಪ್ ಪಂಧ್ಯಾವಳಿ ರದ್ದಾದರೆ ಮಾತ್ರ ಐಪಿಎಲ್ ಕ್ರಿಕೆಟ್ ಗೇಮ್ ಆರಂಭಿಸಲು ಸಾಧ್ಯವಾಗುತ್ತದೆ, ಇಲ್ಲವಾದಲ್ಲಿ ತಾತ್ಕಲಿಕವಾಗಿ ಐಪಿಎಲ್ ದಿನಾಂಕವನ್ನು ಮುಂದೂಡುವ ಸಾಧ್ಯತೆ ಇರುತ್ತದೆ.

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯು ದಿನಾಂಕ ಜೂನ್ 10ರಂದು ನಡೆದ ನಂತರ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಬೋರ್ಡ್ ಸಭೆಯಲ್ಲಿ ತೀರ್ಮಾನಿಸಿ ಸದಸ್ಯ ಮಂಡಳಿಗೆ ಸೂಚನೆ ನೀಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಕಾರಣ ವಿಶ್ವಕಪ್ ಗೆ ಸಂಬಂಧಪಟ್ಟಂತಹ ವಿಚಾರದ ನಿರ್ಧಾರಗಳು ಸಧ್ಯದ ಮಟ್ಟಿಗೆ ಕಷ್ಟ ಸಾಧ್ಯವಾಗಿರುವುದರಿಂದ ಆದಷ್ಟು ಬೇಗ ಐಪಿಎಲ್ ನಡೆಸುವ ಬಗ್ಗೆ ಮಂಡಳಿಗೆ ಸೂಚನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here