ಕೊಹ್ಲಿಯ ಹೊಸ ವಾಚ್! ಬೆಲೆ ಪಾಕಿಸ್ತಾನಿ ಆಟಗಾರರ ಒಂದೂವರೆ ತಿಂಗಳದ ಸಂಬಳಕಿಂತ ಜಾಸ್ತಿ

0
93

ಭಾರತೀಯ ಕ್ರಿಕೇಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ವಿರಾಟ್ ಕೊಹ್ಲಿ ಅವರನ್ನು ನೋಡಿದರೆ ಸಾಕು ಎದುರಾಳಿಗಳ ಕಣ್ಣಲ್ಲಿ ಭಯ ತುಂಬುಕೊಳ್ಳುತ್ತದೆ ಅವರನ್ನು ಎದುರುಸಕ್ಕೆ ನಾನಾಪ್ರಯತ್ನ ಮಾಡಿ ವಿಫಲರಾಗುತ್ತಾರೆ. ವಿರಾಟ್ ಕೊಹ್ಲಿ ಯವರು ಜಗತ್ತಿನ ಅತ್ಯಂತ 100 ಶ್ರೀಮಂತ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅದು ಭಾರತ ದೇಶದ ಏಕೈಕ ಕ್ರಿಕೆಟ್ ಆಟಗಾರರಾಗಿದ್ದಾರೆ. ಆದುದರಿಂದ ಅವರ ಸಂಬಳ, ಅವರು ಉಪಯೋಗಿಸುವ ವಸ್ತುಗಳ ಬ್ರ್ಯಾಂಡ್ ಮತ್ತು ಜೀವನಶೈಲಿ ತುಂಬಾ ಹಾಯ್ ಫಾಯ್ ಯಾಗಿರುವದರಲ್ಲಿ ಸಂದೇಹವೇ ಇಲ್ಲ.

ವಿರಾಟ್ ಕೊಹ್ಲಿ ಯವರು ಸೋಶಿಯಲ್ ಮಿಡಿಯಾದಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ಅದರಲ್ಲಿ ಮುಂಬಯಿಯಲ್ಲಿಯ ಮಾನ್ಸೂನ್ ಆಗಮನದ ಆಸ್ವಾದ ತಗೆದುಕೊಳ್ಳುತ್ತ ವಿರಾಟ್ ಅವರು ಪುಸ್ತಕ ಓದುತ್ತಿದ್ದಾರೆ. ಆದರೆ ಈ ಫೋಟೋದಲ್ಲಿ ಅವರು ಕೈಯಲ್ಲಿ ಧರಿಸಿರುವ ಗಡಿಯಾರದ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ. ವಿರಾಟ್ ಧರಿಸಿರುವ ಗಡಿಯಾರದ ಬೆಲೆ ಎಷ್ಟಿದೆ ಎಂದರೆ ಪಾಕಿಸ್ತಾನದ ಒಬ್ಬ A ಗ್ರೇಡ್ ಆಟಗಾರನ ಒಂದೂವರೆ ತಿಂಗಳಿನ ಸಂಬಳದಷ್ಟಿದೆ.

ಲಾಕ್ಡೌನ್ ದಿಂದಾಗಿ ಯಾವುದೇ ಕ್ರಿಕೇಟ್ ಸ್ಪರ್ಧೆ ನಡೆಯದ ಕಾರಣ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮ ಜೊತೆ ಮುಂಬಯಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ವಿರಾಟ್ ಕೊಹ್ಲಿ ಅವರು ತಮ್ಮ ಅಭಿಮಾನಿಗಳಿಗೆ ಕಾಲ ಕಾಲಕ್ಕೆ ಸೋಶಿಯಲ್ ಮೀಡಿಯಾ ಮುಖಾಂತರ ಅಪ್ಡೇಟ್ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ಯಾವತ್ತೂ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ.

ಅಷ್ಟೇ ಅಲ್ಲ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ತಮ್ಮ ಫ್ಯಾನ್ಸ್ ಜೊತೆಗೆ ಸಂವಾದ ಕೂಡಾ ಸಾಧಿಸುತ್ತಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ ಇತ್ತೀಚೆಗೆ ಬಿಡುಗಡೆ ಮಾಡಿದ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಆಟಗಾರರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಒಬ್ಬರಾಗಿದ್ದಾರೆ. ವಿರಾಟ್ ಕೊಹ್ಲಿಯವರು 196 ಕೋಟಿ ರೂ.ಗಳೊಂದಿಗೆ 66 ನೇ ಸ್ಥಾನದಲ್ಲಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ವಿಶ್ವದಲ್ಲೇ ಹೆಚ್ಚು ಹಣ ಗಳಿಸುವ ಪ್ರಸಿದ್ಧ ವ್ಯಕ್ತಿಗಳಲ್ಲಿ ವಿರಾಟ್ ಕೂಡಾ ಒಬ್ಬರು. ಭಾರತದ ಸ್ಟಾರ್ ವಿರಾಟ್ ಐದನೇ ಸ್ಥಾನದಲ್ಲಿದ್ದಾರೆ. ಅವರು ವರ್ಷಕ್ಕೆ 123 ಕೋಟಿ 61,06,601 ರೂಪಾಯಿಗಳನ್ನು ಗಳಿಸುತ್ತಾರೆ. ವಿರಾಟ್ ಕೊಹ್ಲಿ ಅವರ ಪ್ರತಿಯೊಂದು ಪೋಸ್ಟ್ ಗೆ 2 ಕೋಟಿ 20,59,748 ರೂ. ಗಳಿಸುತ್ತಾರೆ. ವಿರಾಟ್ ಅವರು ಲಾಕ್ಡೌನ್ ನಲ್ಲಿ 3 ಸ್ಪಾನ್ಸರ್ ಪೋಸ್ಟ್ ಮಾಡಿದ್ದಾರೆ ಅದರಿಂದ ಅವರು ಬಹಳಷ್ಟು ಮೊತ್ತ ಪಡೆದಿದ್ದಾರೆ. ಅವರು ಪ್ರತಿ ಪೋಸ್ಟ್ ಗೆ ಸರಾಸರಿ 1.2 ಕೋಟಿ ರೂಪಾಯಿ ಗಳಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಇತ್ತೀಚೆಗೆ ತನ್ನ 21 ಆಟಗಾರರ ಕೇಂದ್ರ ಒಪ್ಪಂದಗಳನ್ನು ಪ್ರಕಟಿಸಿತು. ಬಾಬರ್ ಅಜಮ್, ಅಜರ್ ಅಲಿ ಮತ್ತು ಶಾಹೀನ್ ಶಾ ಅಫ್ರಿದಿ ಇವರನ್ನು ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಈ ಮೂವರು ‘ಎ ಗ್ರೇಡ್’ ಆಟಗಾರರಿಗೆ ತಿಂಗಳಿಗೆ 5 ಲಕ್ಷ 16,489 ರೂ. ಸಂಬಳ ನೀಡುವದು. ವಿರಾಟ್ ಅವರ ಈ ಹೊಸ ಗಡಿಯಾರದ ಬೆಲೆಯಲ್ಲಿ ಪಾಕಿಸ್ತಾನದ ಎ ಗ್ರೇಡ್ ಆಟಗಾರನ ಒಂದೂವರೆ ತಿಂಗಳಿನ ಸಂಬಳ ಕೊಡಬಹುದು.

ವಿರಾಟ್ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರ ಕೈಯಲ್ಲಿ ಹೊಸ ಗಡಿಯಾರವನ್ನು ಕಾಣಬಹುದು. ವಿರಾಟ್ ಧರಿಸಿರುವ ಗಡಿಯಾರದ ಬೆಲೆ ಸುಮಾರು 8 ಲಕ್ಷ 60,700 ರೂ. ಇದೆ. ಈ ನಮ್ಮ ಲೇಖನ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಲೈಕ್ ಮಾಡಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಬೆಂಗಳೂರು ಪೇಜ್ ತಪ್ಪದೆ ಲೈಕ್ ಮಾಡಿ.

LEAVE A REPLY

Please enter your comment!
Please enter your name here