ಕೊಹ್ಲಿ ಅನುಷ್ಕಾ ಶರ್ಮಾ ಡಿವೋರ್ಸ್! ಬಿಜೆಪಿ ಶಾಸಕರಿಂದ ವಿರಾಟ್ ಕೊಹ್ಲಿಗೆ ಒತ್ತಾಯ!

0
382

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಗ್ರೌಂಡ್ ಇಳಿಯುತ್ತಿದ್ದಂತೆಯೇ ಎದುರಾಳಿಗಳ ಮುಖದಲ್ಲಿ ಭಯ ತುಂಬುಕೊಳ್ಳುತ್ತದೆ. ಅಂತಹ ಆಟಗಾರನ ಮೇಲೆ ಒಂದು ಸುದ್ದಿ ಹರಿದಾಡುತ್ತಿದೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಸದಾ ಬಿಜಿಯಾಗಿರುತ್ತಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಮನೆಯಲ್ಲೇ ಬಂಧಿಯಾಗಿದ್ದು ಅನೋನ್ಯತೆ ಹೆಚ್ಚಿಸಿಕೊಂಡಿದೆ. ಆದರೂ ಈಗ ಟ್ವಿಟರ್‌ನಲ್ಲಿ ‘ವಿರೂಷ್ಕಾ ಡಿವೋರ್ಸ್’ ಹ್ಯಾಷ್‌ಟ್ಯಾಗ್ ಭರ್ಜರಿ ಟ್ರೆಂಡಿಂಗ್‌ನಲ್ಲಿದೆ!

ಈ ಹ್ಯಾಷ್‌ಟ್ಯಾಗ್ ನೋಡಿದಾಗ, ಕೊಹ್ಲಿ-ಅನುಷ್ಕಾ ನಿಜಕ್ಕೂ ವಿಚ್ಛೇದನ ಪಡೆದುಕೊಳ್ಳುತ್ತಾರಾ ಎಂಬ ಅನುಮಾನ ಮೂಡುವುದು ಸಹಜ. ಆದರೆ, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ನಡುವೆ ಮದುವೆಗೂ ಮುನ್ನ ಮೂಡಿದ್ದ ಬಿರುಕಿನ ವರದಿಯನ್ನೇ ಬಳಸಿಕೊಂಡು ಅವರಿಬ್ಬರ ನಡುವೆ ಈಗ ಮನಸ್ತಾಪ ಮೂಡಿದೆ ಎಂಬ ಸುಳ್ಳುಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ 2017ರ ಡಿಸೆಂಬರ್‌ನಲ್ಲಿ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅದಕ್ಕೆ ಮುನ್ನ 2016ರಲ್ಲೊಮ್ಮೆ ಅವರಿಬ್ಬರ ಸಂಬಂಧ ಮುರಿದುಬಿದ್ದಿತ್ತು. 2016ರ ಫೆಬ್ರವರಿಯಲ್ಲಿ ಬಂದಿದ್ದ ಆಗಿನ ವರದಿಯನ್ನೇ ಮತ್ತೆ ಶೇರ್ ಮಾಡಿಕೊಂಡ ಕೆಲವರು, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುಳ್ಳುಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಇದಕ್ಕೆ ಪ್ರತಿಯಾಗಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ವಿರೂಷ್ಕಾ ಡಿವೋರ್ಸ್’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಸುಳ್ಳುಸುದ್ದಿ ಹರಿಬಿಟ್ಟವರನ್ನೇ ಟ್ರೋಲ್ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡಿದವರ ವಿರುದ್ಧ ವಿವಿಧ ಮೀಮ್ಸ್ ಮತ್ತು ತಮಾಷೆಗಳನ್ನು ವಿರೂಷ್ಕಾ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಇದರಿಂದಾಗಿ ಟ್ವಿಟರ್‌ನಲ್ಲಿ ಶನಿವಾರ ‘ವಿರೂಷ್ಕಾ ಡಿವೋರ್ಸ್’ ಹ್ಯಾಷ್‌ಟ್ಯಾಗ್ ಭರ್ಜರಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ.

ಇದಕ್ಕೆ ಮುನ್ನ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಅನುಷ್ಕಾ ಶರ್ಮ ನಿರ್ಮಾಣದ ಪಾತಾಳ ಲೋಕ ವೆಬ್ ಸಿರೀಸ್‌ನಲ್ಲಿನ ಕೆಲವು ಆಕ್ಷೇಪಾರ್ಹ ಅಂಶಗಳನ್ನೇ ನೆಪವಾಗಿಟ್ಟುಕೊಂಡು, ಅನುಷ್ಕಾಗೆ ವಿರಾಟ್ ಕೊಹ್ಲಿ ವಿಚ್ಛೇದನ ನೀಡಬೇಕೆಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ದೂರು ದಾಖಲಿಸಿದ್ದರು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಇನ್ನಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಬೆಂಗಳೂರು ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

LEAVE A REPLY

Please enter your comment!
Please enter your name here