ಕೆ ಎಲ್ ರಾಹುಲ್-ಆಥಿಯಾ ಶೆಟ್ಟಿ ಮದುವೆ!ಗ್ರೀನ್ ಸಿಗ್ನಲ್ ಕೊಟ್ಟ ಸುನೀಲ್ ಶೆಟ್ಟಿ

0
372

ಟೀಮ್ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ವಿಶ್ವದ ಒಬ್ಬ ಶ್ರೇಷ್ಠ ಆಟಗಾರ ಎನ್ನುವುದು ನಿಮಗೆಲ್ಲ ತಿಳಿದೇ ಇದೆ. ಕೆ ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಳೆದ ಕೆಲ ದಿನಗಳಿಂದ ರಾಹುಲ್ ಮತ್ತು ಅಥಿಯಾ ಶೆಟ್ಟಿ ಇಬ್ಬರೂ, ಪಾರ್ಟಿಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ರು. ಅಷ್ಟೇ ಅಲ್ಲ, ಇಬ್ಬರೂ ಫೋಟೋಗಳಲ್ಲಿ ಜೊತೆಜೊತೆಯಾಗಿ ಕಾಣಿಸಿಕೊಂಡು, ತಮ್ಮ ಲವ್​ ಬಗ್ಗೆ ಹಿಂಟ್ ಕೊಟ್ಟಿದ್ರು. ಇಷ್ಟಾಗಿದ್ರೆ ಓಕೆ! ರಾಹುಲ್ ಮತ್ತು ಅಥಿಯಾ ಶೆಟ್ಟಿ, ಹೊಸ ವರ್ಷದ ಸಂಭ್ರಮಾಚರಣೆಯನ್ನ ಥೈಲೆಂಡ್​ನಲ್ಲಿ ಆಚರಿಸಿಕೊಂಡಿದ್ದರು.

ಕೆ ಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಇಬ್ಬರೂ ಲವರ್ಸ್​ ಅನ್ನೋದನ್ನ ಪರೋಕ್ಷವಾಗಿ ಜಗತ್ತಿಗೆ ಸಾರಿದ್ದಾರೆ. ಇದೀಗ ಬಾಲಿವುಡ್​​ ನಟ ಸುನೀಲ್ ಶೆಟ್ಟಿ, ಕೆ.ಎಲ್.ರಾಹುಲ್ ಮತ್ತು ಪುತ್ರಿ ಅಥಿಯಾ ಮದುವೆಗೆ, ಗ್ರೀನ್ ಸಿಗ್ನಲ್ ನೀಡಿರುವ ಬಗ್ಗೆ ಸೂಚನೆ ಸುಳಿವು ಸಿಕ್ಕಿದೆ. ಅಥಿಯಾ ಯಾರನ್ನ ನೋಡುತ್ತಿದ್ದಾಳೋ ಅವರ ಬಗ್ಗೆ ನನಗೆ ಖುಷಿ ಇದೆ ಮತ್ತು ಒಳ್ಳೆಯ ಅಭಿಪ್ರಾಯವೂ ಇದೆ.

ಅವರು ಒಳ್ಳೆಯ ಕುಟುಂಬದಿಂದ ಬಂದಿದ್ದಾರೆ. ಹೀಗಾಗಿ ನನಗೂ ಮತ್ತು ನನ್ನ ಪತ್ನಿಗೂ, ಅಥಿಯಾ ಹುಡುಗನ ಬಗ್ಗೆ ಗೌರವ ಇದೆ ಅಂತ ಸುನೀಲ್ ಶೆಟ್ಟಿ ತಿಳಿದ್ದಾರೆ. ಸುನೀಲ್ ಶೆಟ್ಟಿ ಹೇಳಿಕೆ ನೋಡಿದ್ರೆ, ಅಥಿಯಾ ಮತ್ತು ರಾಹುಲ್ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂತ ಅನಿಸುತ್ತದೆ. ಹಾರ್ದಿಕ್ ಪಾಂಡ್ಯ ನಂತರ, ಕೆ.ಎಲ್.ರಾಹುಲ್ ಎಂಗೇಜ್​ ಆಗೋ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

LEAVE A REPLY

Please enter your comment!
Please enter your name here