ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರ ಉಪಯೋಗ ಏನು ಗೊತ್ತೇ

0
217

ನಿಮಗೊತ್ತಾ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದರೆ ನೀವು ನಿಜಕ್ಕೂ ಪಾಲಿಸುತ್ತೀರ, ಹಾಗದರೆ ಇದರ ಬಗ್ಗೆ ಇನ್ನಷ್ಟು ತಿಳಿಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಬೆಳಿಗ್ಗೆ ಎದ್ದ ಕೂಡಲೇ ನಾವು ಕೆಲವು ನಿಯಮಗಳನ್ನು ಚಟುವಟಿಕೆಗಳನ್ನು ತಪ್ಪದೇ ಮಾಡುತ್ತೇವೆ. ಹಾಗೆ ಮಾರ್ನಿಂಗ್ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ದೇಹದಲ್ಲಿರುವ ಕಲ್ಮಶಗಳು, ಅನಗತ್ಯ ರಾಸಾಯನಿಕಗಳು ಮಲಮೂತ್ರ ವಿಸರ್ಜನೆ ಮೂಲಕ ಹೊರಹೋಗುತ್ತವೆ. ಇದರಿಂದ ದೇಹದಲ್ಲಿ ರಕ್ತಚಲನೆ ಸರಾಗವಾಗಿ ನಡೆಯುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯ ವೃದ್ದಿಯಾಗಲು ಸಹಕಾರಿಯಾಗಿ ದೇಹದ ಸಮತೋಲನಕ್ಕೆ ಸಹಾಯವಾಗುತ್ತದೆ. ಹಾಗೆ ಕ್ಯಾಲೋರಿ ಅಂಶ ಕಡಿಮೆಯಾಗುವಂತದ್ದು ಇದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತದ್ದು.

ಅಂದಹಾಗೆ ಬೆಳಿಗ್ಗೆ ತಿಂಡಿ ತಿನ್ನುವ ಅರ್ಧ ಗಂಟೆಯ ಮುಂಚಿತವಾಗಿ ಕನಿಷ್ಟ ಅರ್ಧ ಲೀಟರ್ ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ನಿಯಮಿತವಾಗಿ ನಿಯಂತ್ರಿಸ ಕೊಳ್ಳಬಹುದಾಗಿದೆ. ಇದರಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಅದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತೆ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿರುವ ಹಾನಿಕಾರಕ ಬ್ಯಾಕ್ಟಿರಿಯಾ ವಿರುದ್ದ ಹೋರಾಡುವಂತಹ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಅಂದಹಾಗೆ ಮುಖ್ಯವಾಗಿ ತಲೆನೋವು ಸಮಸ್ಯೆ, ಮೈಗ್ರೇನ್ ಸಮಸ್ಯೆ ಇರುವವರು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಅಂತಹ ಸಮಸ್ಯೆಗಳನ್ನು ಶಾಶ್ವತವಾಗಿ ನಿಯಂತ್ರಿಸಬಹುದಾಗಿದೆ. ಅದರಿಂದ ದೇಹದಲ್ಲಿ ನೀರಿನಾಂಶ ಸದಾ ಇರುವಂತೆ ನೋಡಿಕೊಳ್ಳುವುದು ಉತ್ತಮ ಎಂದು ವೈದ್ಯರು ಸಹ ಸಲಹೆ ನೀಡುತ್ತಾರೆ.

LEAVE A REPLY

Please enter your comment!
Please enter your name here