ಕರ್ನಾಟಕದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಂತೋಷದ ಸುದ್ದಿ

0
393

ಈ ಮಹಾಮಾರಿ ಕೊರನಾ ವೈರಸ್ ಅಬ್ಬರದ ನಡುವೆಯೂ ಕರ್ನಾಟಕದ ಕೆಲ ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ ಇಲ್ಲಿದೆ, ಹೌದು ಖುಷಿಯ ವಿಚಾರ ಏನೆಂದರೆ ಉಚಿತ ಇಂಟರ್ನೆಟ್ ಸೇವೆ. ಹೌದು ಲಾಕ್ಡೌನ್ ಇಂದಾಗಿ ಬಹುತೇಕ ಎಲ್ಲ ತರಗತಿಗಳು ಆನ್ಲೈನ್ನಲ್ಲಿ ನಡೆಯುತ್ತಿದ್ದು ಕರ್ನಾಟಕದ ಬಹುತೇಕ ವಿದ್ಯಾರ್ಥಿಗಳಿಗೆ ಆನ್ಲೈನ್ ಅಲ್ಲಿ ತರಗತಿಗಳು ನಡೆಯುತ್ತಿವೆ. ಕರ್ನಾಟಕದ ಬರೋಬ್ಬರಿ 1,10,000 ವಿದ್ಯಾರ್ಥಿಗಳ ಬಳಿ ಸರ್ಕಾರ ಕೊಟ್ಟಿರುವ ಲ್ಯಾಪ್ಟಾಪ್ಗಳು ಇದ್ದು ಅವುಗಳು ಸದ್ಬಳಕೆಯಾಗುತ್ತಿಲ್ಲ ಕಾರಣ ಬಹುತೇಕ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಪೂರೈಕೆಯಾಗುತ್ತಿಲ್ಲ.

ಹೀಗಾಗಿ ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಯು ಹೊಸ ನಿರ್ಧಾರಕ್ಕೆ ಬಂದಿದ್ದು ಎಲ್ಲಾ 1,10,000 ವಿದ್ಯಾರ್ಥಿಗಳಿಗೆ ಅಂದರೆ ಲ್ಯಾಪ್ಟಾಪ್ ಹೊಂದಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಅನ್ಲಿಮಿಟೆಡ್ ಉಚಿತ ಇಂಟರ್ನೆಟ್ ಅನ್ನು ಒದಗಿಸಲು ಮಾತುಕತೆ ನಡೆಸುತ್ತಿದೆ. ಈ ಸಂಬಂಧ ನಿನ್ನೆ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರು ಇಂಟರ್ನೆಟ್ ಒದಗಿಸುವ ಕಂಪನಿಗಳ ಜೊತೆ ಮಾಡಿದ್ದಾರೆ. ಕಂಪನಿಗಳು ಈ ಸೇವೆಗೆ ಒಪ್ಪಿದ್ದು ಸದ್ಯದಲ್ಲೇ 1,10,000 ವಿದ್ಯಾರ್ಥಿಗಳು ಉಚಿತ ಇಂಟರ್ನೆಟ್ ಸೇವೆಯನ್ನು ಪಡೆಯಲಿದ್ದಾರೆ.

ಸದ್ಯ ಇಷ್ಟು ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸೇವೆಯನ್ನು ಒದಗಿಸಲು ತಯಾರಾಗಿರುವ ಕರ್ನಾಟಕ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳಿಗೆ ಸೇವೆ ಸಿಗುವಂತೆ ಮಾಡಬಹುದು, ಇನ್ನು ಕರೋನವೈರಸ್ ನಿಂದಾಗಿ ಎರಡು ತಿಂಗಳುಗಳಿಂದ ಶಾಲಾ ಕಾಲೇಜುಗಳಲ್ಲೇ ಮುಚ್ಚಿದ್ದು ಆನ್ಲೈನ್ನಲ್ಲಿ ತರಗತಿಗಳು ನಡೆಯುತ್ತಿವೆ. ಆದರೆ ಗ್ರಾಮೀಣ ಭಾಗದ ಜನರಿಗೆ ಇಂಟರ್ನೆಟ್ ಸೇವೆ ಇಲ್ಲದೆ ತೊಂದರೆಯಾಗುತ್ತಿದ್ದು ಸರಿಯಾಗಿ ಅವರಿಗೆ ಶಿಕ್ಷಣ ಸಿಗುತ್ತಿಲ್ಲ. ಇದರ ಬಗ್ಗೆಯೂ ಯೋಚಿಸುತ್ತಿರುವ ಕರ್ನಾಟಕ ಸರ್ಕಾರ ಸದ್ಯದಲ್ಲಿ ಸದ್ಯದಲ್ಲೇ ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಲಿದೆ.

LEAVE A REPLY

Please enter your comment!
Please enter your name here