ಕನ್ನಡ ನಟ ನಟಿಯರ ಬಳಿ ಇರುವ ದುಬಾರಿ ಬೆಲೆಯ ಕಾರುಗಳು ಹಾಗು ಕಾರುಗಳ ಬೆಲೆ

0
696

ಕಾರುಗಳೆಂದರೆ ಯಾರಿಗೆ ಇಷ್ಟ ಇಲ್ಲ ತಾನೆ ಹೇಳಿ, ಹುಡುಗ ಆಗಲಿ ಹುಡುಗಿ ಆಗಲಿ ಸಣ್ಣವರ ಆಗಲಿ ಪ್ರತಿಯೊಬ್ಬರಿಗೂ ಕಾರು ಕಂಡರೆ ಇಷ್ಟ ಹಾಗೆಯೇ ಪ್ರತಿಯೊಬ್ಬರ ಜೀವನದಲ್ಲೂ ತಾವು ತಮ್ಮ ಸ್ವಂತ ಕಾರನ್ನು ಹೊಂದಬೇಕು ಎಂಬುದು ಬಹುತೇಕ ಜನರ ಕನಸು. ಅದರಲ್ಲೂ ಯುವಜನತೆಗೆ ದುಬಾರಿ ಕಾರುಗಳನ್ನು ಹಾಡಿ ಬಿಎಂಡಬ್ಲ್ಯೂ ಮರ್ಸಿಡಿಸ್-ಬೆನ್ಜ್ ಕಾರುಗಳೆಂದರೆ ಪಂಚಪ್ರಾಣ ಭಾರತದಲ್ಲಿ ಯುವ ಸಮುದಾಯಕ್ಕೆ ದುಬಾರಿ ಬ್ರಾಂಡು ಗಳ ಕಾರುಗಳ ಬಗ್ಗೆ ಬಹಳಷ್ಟು ಆಸಕ್ತಿ ಮೂಡಿದೆ.

ನೀವು ದೊಡ್ಡ ದೊಡ್ಡ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರದಲ್ಲಿ ಕೋಟಿ ಬೆಲೆಬಾಳುವ ಕಾರುಗಳನ್ನು ಸಹ ನೋಡಿರುತ್ತೀರಿ ಉದಾಹರಣೆಗೆ ಲ್ಯಾಂಬೋರ್ಗಿನಿ ಕಾರು ಹಾಗೂ ಫೆರಾರಿ ಎಂತಹ ಬಹು ದುಬಾರಿ ಕಾರುಗಳು ಸಹ ನಮ್ಮ ಬೆಂಗಳೂರು ನಗರದಲ್ಲಿ ಇವೆ. ಈಗ ನಾವು ನಿಮಗೆ ನಮ್ಮ ಕನ್ನಡ ಚಿತ್ರರಂಗದ ಯಾವ ನಟ-ನಟಿಯರ ಬಳಿ ಯಾವ ಹಾಗೂ ಎಷ್ಟು ದುಬಾರಿ ಬೆಲೆಯ ಕಾರುಗಳು ಇದೆ ಎಂದು ತಿಳಿಸುತ್ತೇವೆ ಕೆಳಗಡೆ ನೋಡಿರಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಮೊದಲಿನಿಂದಲೂ ದುಬಾರಿ ಕಾರುಗಳಿವೆ ಯಾಕೆಂದರೆ ಅವರಿಗೆ ಕಾರುಗಳೆಂದರೆ ಪಂಚಪ್ರಾಣ, ಬನ್ನಿ ದರ್ಶನ್ ಅವರ ಬಳಿ ಯಾವ ಯಾವ ಕಾರುಗಳಿವೆ ಎಂದು ತಿಳಿದುಕೊಳ್ಳೋಣ. ಮೊದಲನೆಯದು ಲ್ಯಾಂಬೋರ್ಗಿನಿ ಅವೆಂಟಡೊರ್ ಹಾಗು ಉರುಸ್. ಅವರ ಬಳಿ ಲ್ಯಾಂಬೋರ್ಗಿನಿ ಕಂಪನಿಯ ಎರಡು ಕಾರುಗಳು ಇದ್ದು ಅವೆಂಟಡೊರ್ ಹಾಗೂ ಇನ್ನೊಂದು ಉರುಸ್ ಎಂದು. ಒಂದಕ್ಕೆ 5ಕೋಟಿ ಹಾಗು ಇನ್ನೊಂದಕ್ಕೆ 4ಕೋಟಿ.

ದರ್ಶನ್ ಅವರ ಬಳಿ ಫೋರ್ಡ್ ಕಂಪನಿಯ ಮಸ್ಟಾಂಗ್ ಸ್ಪೋರ್ಟ್ಸ್ ಕಾರು ಸಹ ಇದೆ, ಇದರ ಬೆಲೆ 85 ಲಕ್ಷ ರೂಪಾಯಿಗಳು. ಹಾಗೆ ದರ್ಶನ್ ಅವರ ಬಳಿಗೆ ಜಾಗ್ವಾರ್ ಎಂಬ ಕಂಪನಿಯ xkr ಎಂಬ ಕಾರಿದ್ದು ಬೆಲೆ 90 ಲಕ್ಷದಿಂದ ಒಂದೂವರೆ ಕೋಟಿ ತನಕ ಇದೆ.

ಪುನೀತ್ ರಾಜಕುಮಾರ್ ಅವರ ವಿಷಯಕ್ಕೆ ಬಂದರೆ ಪುನೀತ್ ಅವರ ಬಳಿಗೆ ನೀಲಿಬಣ್ಣದ ಲ್ಯಾಂಬೋರ್ಗಿನಿ ಕಂಪನಿಯ ಉರುಸ್ ಎಂಬ ಕಾರಿದ್ದು ಬೆಲೆ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಗಳು ಪುನೀತ್ ರಾಜ್ ಕುಮಾರ್ ಅವರು ಬೈಕ್ ಪ್ರಿಯರು ಆಗಿದ್ದರಿಂದ ಅವರ ಬಳಿ ಸಾಕಷ್ಟು ದುಬಾರಿ ಬೆಲೆಯ ಬೈಕುಗಳ ಸಂಗ್ರಹವೇ ಇದೆ ಮತ್ತು ಪುನೀತ್ ಅವರ ಬಳಿ ರೇಂಜ್ ರೋವರ್ ಎಂಬ ಕಾರಿದ್ದು ಬೆಲೆ ಸುಮಾರು 90ಲಕ್ಷ ರೂಪಾಯಿಗಳು.

ಸೆಂಚುರಿ ಸ್ಟಾರ್ ಶಿವಣ್ಣ ಅವರು ಕಾರು ಹಾಗು ಬೈಕ್ ಪ್ರಿಯರು ಅಲ್ಲ, ಎಂದಿಗೂ ಶಿವಣ್ಣ ಅವರು ತಾವು ಕಾರು ಪ್ರಿಯರು ಎಂದು ಹೇಳಿಕೊಂಡಿಲ್ಲ. ಶಿವಣ್ಣ ಅವರ ಬಳಿಯುವಂತಹ ಕಾರು ಗಳಿದ್ದು ಮೊನ್ನೆಯಷ್ಟೇ ಶಿವಣ್ಣ ಅವರು ವೋಲ್ವೋ90 ಎಂಬ ಕಾರನ್ನ ಖರೀದಿಸಿದ್ದು ಖರೀದಿಸಿದ್ದು ಇದರ ಬೆಲೆ 95ಲಕ್ಷದಿಂದ ಶುರುವಾಗುತ್ತದೆ, ಇನ್ನು ಶಿವಣ್ಣನವರ ಬಳಿ ಬಿಎಂಡಬ್ಲ್ಯೂ ಕಂಪನಿಯ 530 d ಹೆಸರಿನ ಕಾರಿದೆ ಇದರ ಬೆಲೆ ಹೆಚ್ಚುಕಮ್ಮಿ 1ಕೋಟಿ ಸಮೀಪ ಬರುತ್ತದೆ.

ಈಗ ಸ್ನೇಹಿತ್ ಜಗದೀಶ್ ಅವರ ಬಗ್ಗೆ ಹೇಳುತ್ತೇವೆ, ಸ್ನೇಹಿತ್ ಜಗದೀಶ್ ಯಾರು ಎಂದು ನಿಮಗೆಲ್ಲರಿಗೂ ಗೊತ್ತೇ ಇದೆ ಅಪ್ಪು ಪಪ್ಪು ಖ್ಯಾತಿಯ ಬಾಲನಟರಾಗಿ ಕನ್ನಡ ಚಿತ್ರಕ್ಕೆ ಬಂದ ಹಾಗು ಸ್ನೇಹಿತರು ಚಿತ್ರದಲ್ಲಿ ನಟಿಸಿರುವ ಸ್ನೇಹಿತ್ ಅವರ ಬಳಿಗೆ ಸ್ಪೋರ್ಟ್ಸ್ ಕಾರಿದೆ. ಆಡಿ ಆರ್8 ಎಂಬ ಹೆಸರಿನ ಈ ಸ್ಪೋರ್ಟ್ಸ್ ಕಾರ್ ಬೆಲೆ ಸುಮಾರು 2.5ಕೋಟಿ ರೂಪಾಯಿಗಳು.

ಇನ್ನು ಸ್ನೇಹಿತ್ ಅವರ ಬಳಿ ಹಲವಾರು ಕಾರುಗಳಿದ್ದು ಜಾಗ್ವರ್xjl ಎಂಬ ದುಬಾರಿ ಕಾರು ಸಹ ಇದೆ ಹಾಗು ಇದರ ಬೆಲೆ ಸುಮಾರು ಒಂದು ಕೋಟಿ ರೂಪಾಯಿಗಳು, ಹಾಗೆಯೇ ಅವರ ಬಳಿ ಆಡಿ ಕಂಪನಿಯ q7ಎಂಬ ಮಾಡೆಲ್ ಕಾರ್ ಇದ್ದು ಇದರ ಬೆಲೆ 88ಲಕ್ಷ ರೂಪಾಯಿಗಳು. ಫೋರ್ಡ್ ಕಂಪನಿಯ ಎಂಡೀವೌರ್ ಎಂಬ ಕಾರು ಸಹ ಇದ್ದು ಈ ಕಾರಿನ ಬೆಲೆ ಬರೋಬ್ಬರಿ 32ಲಕ್ಷ.

ಪ್ರಣೀತಾ ಸುಭಾಷ್ ಅವರ ಬಳಿಯೂ ಸಹ ಮಿನಿ ಕೂಪರ್ ‘ಎಸ್’ ಎಂಬ ಹೆಸರಿನ ಸ್ಪೋರ್ಟ್ಸ್ ಕಾರಿದ್ದು ಇದರ ಬೆಲೆ ಬರೋಬ್ಬರಿ 45ಲಕ್ಷ ರೂಪಾಯಿಗಳು, ಕನ್ನಡದ ಯುವ ನಟ ಅನಿಶ್ ತೇಜೇಶ್ವರ ಅವರ ಬಳಿಯೂ ಸಹ ಬಿಎಂಡಬ್ಲ್ಯೂ ಕಂಪನಿಯ ದುಬಾರಿ ಲಕ್ಸುರಿ ಕಾರ್ ಇದೆ, ಬಿಎಂಡಬ್ಲ್ಯೂ530 d ಎಂಬ ಹೆಸರಿನ ಈ ಕಾರಿನ ಬೆಲೆ 72ಲಕ್ಷ ರೂಪಾಯಿಗಳು. ಪ್ರಜ್ವಲ್ ದೇವರಾಜ್ ಅವರ ಬಳಿಯೂ ಸಹ ವೋಲ್ವೋ ಕಂಪನಿಯ ಕಾರೊಂದು ಇದ್ದು ಇದರ ಬೆಲೆ ಲಕ್ಷ ರೂಪಾಯಿಗಳು.

ರಿಯಲ್ ಸ್ಟಾರ್ ಉಪ್ಪಿ ಅವರ ಬಳಿಯೂ ಸಹ ಜಾಗ್ವರ್ ಕಂಪನಿಯ ಎಂಬ ಮೋಡೆಲ್ನ ಕಾರು ಇದೆ ಹಾಗು ಈಕಾರಿನ ಬೆಲೆ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿಗಳು. ನವರಸನಾಯಕ ಜಗ್ಗೇಶ್ ಅವರ ಬಳಿ ಬಿಎಂಡಬ್ಲ್ಯೂ ಬ್ರಾಂಡ್ನ ಎರಡು ದುಬಾರಿ ಕಾರುಗಳಿದ್ದು ಒಂದು ಕಾರಿನ ಬೆಲೆ 80ಲಕ್ಷ ರೂಪಾಯಿಗಳು ಹಾಗು ಇನ್ನೊಂದು ಕಾರಿನ ಬೆಲೆ 60ಲಕ್ಷ ರೂಪಾಯಿಗಳು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮೊದಲಿನಿಂದಲೂ ಬೈಕ್ ಹಾಗು ಕಾರು ಪ್ರಿಯರು, ಸುದೀಪ್ ಅವರ ಬಳಿ ಕಾರುಗಳಿಗಿಂತ ಜಾಸ್ತಿ ಬೈಕುಗಳೇ ಇವೆ. ಸುದೀಪ್ ಅವರ ಬಳಿ ಬಿಎಂಡಬ್ಲ್ಯೂ ಎಂಬ ಹೆಸರಿನ ಕಾರಿದ್ದು ಇದರ ಬೆಲೆ 90ಲಕ್ಷದಿಂದ ಶುರುವಾಗುತ್ತದೆ. ವೋಲ್ವೋ ಎಂಬ ಇನ್ನೊಂದು ಕಾರಿದ್ದು ಇದರ ಬೆಲೆ ಒಂದು ಕೋಟಿ. ಹಾಗೆ ಬಿಎಂಡಬ್ಲ್ಯೂಎಂಬ ಸ್ಪೋರ್ಟ್ಸ್ ಕಾರಿದ್ದು ಇದರ ಬೆಲೆ ಒಂದು ಕೋಟಿ ಅರವತ್ತು ಲಕ್ಷ ರೂಪಾಯಿಗಳು, ಕಿಚ್ಚ ಅವರ ಬಳಿ ಜೀಪ್ ಕಂಪಾಸ್ ಎಂಬ ಕಾರು ಸಹ ಇದ್ದು ಇದರ ಬೆಲೆ 25ಇಪ್ಪತ್ತೈದು ಲಕ್ಷ.

ನಮ್ಮ ನಾರಾಯಣ ರಕ್ಷಿತ್ ಶೆಟ್ಟಿ ಅವರ ಬಳಿ ಆಡಿq5 ಹಾಗು ಆಡಿq3 ಎಂಬ ಹೆಸರಿನ ಎರಡು ದುಬಾರಿ ಕಾರುಗಳಿದ್ದು ಈ ಕಾರುಗಳ ಬೆಲೆ ಅರವತ್ತು ಹಾಗು ನಲವತ್ತೈದು ಲಕ್ಷ ರೂಪಾಯಿಗಳು. ರಚಿತಾ ರಾಮ್ ಅವರ ಬಳಿಯೂ ಸಹ ಸುಮಾರು ಎಂಬತ್ತು ಲಕ್ಷ ಬೆಲೆ ಬಾಳುವ ದುಬಾರಿ ಬೆಂಜ್ ಕಾರು ಇದೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರ ಬಳಿಯೂ ದುಬಾರಿ ಬೆಲೆಯ ಲಂಬೋರ್ಘಿನಿ ಕಾರ್ ಇದ್ದು ಇದರ ಬೆಲೆ 5ಕೋಟಿ ರೂಪಾಯಿಗಳು. ಹಾಗೆ ನಿಖಿಲ್ ಅವರ ಬಳಿ ಬಿಎಂಡಬ್ಲ್ಯೂ ಹಾಗು ಲ್ಯಾಂಡ್ ರೋವರ್ ಮೇಬ ಕಾರುಗಳು ಸಹ ಇವೆ.

ಇನ್ನು ಕನ್ನಡದ ಮಾನ್ಸ್ಟರ್ ರಾಕಿಂಗ್ ಸ್ಟಾರ್ ಯಶ್ ಅವರ ಕಥೆ ನೋಡಿ, ಯಶ್ ಅವರ ಬಳಿ Mercedes Benz glc amz coupe ಎಂಬ ಕಾರಿದ್ದು ಇದರ ಬೆಲೆ 72ಲಕ್ಷ ರೂಪಾಯಿಗಳು. Mercedes Benz gls ಎಂಬ ಕಾರಿದ್ದು ಬೆಲೆ 90ಲಕ್ಷ. Audi a6 ಎಂಬ ಕಾರಿದ್ದು ಬೆಲೆ 74ಲಕ್ಷ, mitsubishi pajero sports ಎಂಬ ಕಾರಿದ್ದು ಬೆಲೆ 38ಲಕ್ಷ, Audi q7 ಎಂಬ ಕಾರಿದ್ದು ಬೆಲೆ 80ಲಕ್ಷ ರೂಪಾಯಿಗಳು.

LEAVE A REPLY

Please enter your comment!
Please enter your name here