ಕೈತಪ್ಪುತ್ತಿದೆ ಬೆಂಗಳೂರು, ಖ್ಯಾತ ತೆಲುಗು ನಟನ ಪಾಲಾದ ಬೆಂಗಳೂರಿನ ಕಪಾಲಿ ಥಿಯೇಟರ್ ಎಲ್ಲಾ ಜಾಗ

0
551

ಡಾಕ್ಟರ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಸುಮಾರು ಹದಿನಾಲ್ಕು ವರ್ಷಗಳೇ ಕಳೆದಿವೆ ಆದರೆ ಇದುವರೆಗೂ ಅವರ ನಮ್ಮ ಜೊತೆ ಇಲ್ಲವೆಂದು ಯಾವತ್ತಿಗೂ ಅನಿಸಿರಲಿಲ್ಲ ಆದರೆ ಈಗ ಅವರ ಅನುಪಸ್ಥಿತಿ ನಮ್ಮ ನಿಮ್ಮಂತ ಸಾಮಾನ್ಯ ಕನ್ನಡಿಗರಿಗೆ ಎದ್ದು ಕಾಣುತ್ತಿದೆ. ರಾಜಕುಮಾರ್ ಅವರು ಇದ್ದಾಗ ಹಿಡಿತದಲ್ಲಿದ್ದ ಕನ್ನಡ ಚಿತ್ರರಂಗ ಅವರು ಮೇಲೆ ಕನ್ನಡಿಗರ ಕೈತಪ್ಪುತ್ತಿದ, ರಾಜಕುಮಾರ್ ಅವರು ಇದ್ದಾಗ ಪರಭಾಷಾ ಹಾವಳಿ ಅಷ್ಟಕ್ಕಷ್ಟೇ ಇತ್ತು ಆದರೆ ಈಗ ಪರಭಾಷಾ ಚಿತ್ರಗಳ ಹಾವಳಿ ತೀರಾ ಹೆಚ್ಚಾಗಿದೆ.

ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಇನ್ನೇನು ಕನ್ನಡ ಚಿತ್ರರಂಗ ಮುಚ್ಚಿ ಹೋಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ, ನಿಮಗೆ ಗೊತ್ತೇ ಇದೆ ಬೆಂಗಳೂರಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡಿಗರಿಗೆ ಪರಭಾಷಿಗರಿಂದ ತೊಂದರೆ ಆಗುತ್ತಲೇ ಇದೆ ಮತ್ತು ಚಿತ್ರರಂಗ ಇದಕ್ಕೆ ಹೊರತೇನಲ್ಲ. ಮೊನ್ನೆ ತಾನೇ ತಮಿಳು ನಟ ರಜನೀಕಾಂತ್ ಅವರ ಚಿತ್ರ ದರ್ಬಾರ್ ಎಂಬ ಚಿತ್ರದ ತೆಲುಗು ಅವತರಣಿಕೆ ಬೆಂಗಳೂರಿನ ಹೃದಯ ಭಾಗದ ಕೆಂಪೇಗೌಡ ರಸ್ತೆ ತನಕ ಬಂದಿತ್ತು.

ಅಂದರೆ ಬೆಂಗಳೂರಿನ ಹೃದಯ ಭಾಗದಲ್ಲಿನ ಗಾಂಧಿನಗರದ ಕೆಜಿ ರಸ್ತೆಯಲ್ಲಿ ಪರಭಾಷಾ ಚಿತ್ರವೊಂದು ಬಿಡುಗಡೆ ಆಗಿ ವಿವಾದ ಸೃಷ್ಟಿ ಮಾಡಿತ್ತು, ಕನ್ನಡ ಚಿತ್ರಗಳಿಗಂತಾನೆ ಮೀಸಲಿದ್ದ ನರ್ತಕಿ ಚಿತ್ರಮಂದಿರದಲ್ಲಿ ತಮಿಳು ಚಿತ್ರವೊಂದು ತೆಲುಗಿಗೆ ಡಬ್ ಆಗಿ ಅಲ್ಲಿ ಬಿಡುಗಡೆ ಆಗಿತ್ತು. ಕನ್ನಡ ಚಿತ್ರಗಳಿಗೆ ಮೀಸಲಿದ್ದ ನರ್ತಕಿ ಅಲ್ಲಿ ಯಾಕೆ ಪರಭಾಷಾ ಚಿತ್ರ ಬಿಡುಗಡೆ ಮಾಡಿದ್ರಿ ಕೆಲ ಸಂಘಟನೆಗಳು ಹೋರಾಟ ಕೂಡಾ ಮಾಡಿದ್ವು. ಇಷ್ಟೆಲ್ಲಾ ಪರಭಾಷಾ ಹಾವಳಿ ಇದ್ದರೂ ಕೂಡಾ ಕನ್ನಡ ಚಿತ್ರರಂಗದವರು ಸುಮ್ಮನೆ ಕೈಕಟ್ಟಿ ಕುಳಿತಿರುವುದನ್ನು ನೋಡಿದರೆ ಕೆಲ ಅನುಮಾನಗಳು ಶುರು ಆಗಿವೆ.

ಇದಕ್ಕೆಲ್ಲಾ ಕನ್ನಡ ಚಿತ್ರರಂಗದ ಒಳ ಬೆಂಬಲ ಇದೆಯಾ ಎಂಬ ಅನುಮಾನಗಳು ಸಹ ಜನರಲ್ಲಿ ಈಗ ಶುರು ಆಗಿವೆ, ಪರಭಾಷಾ ಚಿತ್ರಗಳು ಡಬ್ ಆಗದೆ ನೇರ ಭಾಷೆಯಲ್ಲಿ ಕರ್ನಾಟಕದಾದ್ಯಂತ ನೂರಾರು ಥಿಯೇಟರ್ ಅಲ್ಲಿ ಬಿಡುಗಡೆ ಆಗುತ್ತಿದ್ರು ಕನ್ನಡ ಚಿತ್ರರಂಗ ಯಾಕೆ ಸುಮ್ಮನಿದೆ ಎಂಬ ಪ್ರಶ್ನೆ ಸಾಮಾನ್ಯ ಜನರಿಗೆ ದೊಡ್ಡದಾಗಿ ಕಾಡುತ್ತಿದೆ. ರಾಜಕುಮಾರ್ ಅವರು ಇದ್ದಾಗ ಎರಡರಿಂದ ಮೂರು ವಾರಗಳ ನಂತರ ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿದ್ದವು.

ಅಷ್ಟರ ಮಟ್ಟಿಗೆ ರಾಜಕುಮಾರ್ ಅವರು ಪರಭಾಷಾ ಚಿತ್ರಗಳನ್ನು ಹತೋಟಿಯಲ್ಲಿಟ್ಟದ್ದರು, ಈಗ ಹೊಸ ವಿಷಯ ಏನೆಂದರೆ ವರ್ಷಗಳ ಹಿಂದೆ ಗಾಂಧಿನಗರದ ಕಪಾಲಿ ಚಿತ್ರಮಂದಿರವನ್ನು ಕೆಡವಲಾಯಿತು ಹಾಗು ಆ ಜಾಗವನ್ನು ಮಾರಲಿದ್ದಾರೆ ಎಂದು ಸುದ್ದಿ ಇತ್ತು. ಈಗ ಆ ಜಾಗವನ್ನು ಖ್ಯಾತ ತೆಲುಗು ನಟನೊಬ್ಬ ಖರೀದಿ ಮಾಡಿದ್ದಾನೆ ಎಂಬ ಸುದ್ದಿ ದೊಡ್ಡದಾಗಿ ಗಾಂಧೀ ನಗರದಲ್ಲಿ ಕೇಳಿಬರುತ್ತಿದೆ, ಈ ಸುದ್ದಿ ಬಹುತೇಕ ಖಚಿತವಾಗಿದ್ದು ಇನ್ನಷ್ಟೇ ಹೊರಗೆ ಬರಲಿದೆ.

ಅಷ್ಟಕ್ಕೂ ಆ ನಟ ಯಾರು ಗೊತ್ತೇ, ತೆಲುಗಿನ ನಟ ಮಹೇಶ್ ಬಾಬು ಅವರು ಕಪಾಲಿ ಥಿಯೇಟರ್ ಜಾಗದಲ್ಲಿ ಬೃಹತ್ ಮಲ್ಟಿಪ್ಲೆಕ್ಸ್ ಅನ್ನು ನಿರ್ಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಹೈದೆರಾಬಾದ್ ಅಲ್ಲಿ ಆರಂಭಿಸಿದ ‘ಎಎಂಬಿ’ ಎಂಬ ಮಲ್ಟಿಪ್ಲೆಕ್ಸ್ ಥಿಯೇಟರ್ ಅನ್ನು ಬೆಂಗಳೂರಿನಲ್ಲಿ ಆರಂಭಿಸೋ ಯೋಚನೆಯಲ್ಲಿದ್ದಾರಂತೆ, ಅಂದರೆ ಇನ್ನು ಮುಂದೆ ಕಪಾಲಿ ಜಾಗದಲ್ಲಿ ಸಿದ್ಧವಾಗೋ ಈ ಮಲ್ಟಿಪ್ಲೆಕ್ಸ್ ಅಲ್ಲಿ ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ತೆಲುಗು ಹಾವಳಿಯಂತೂ ಜೋರಾಗೆ ಶುರು ಆಗುತ್ತದೆ.

ಬೆಂಗಳೂರಿನ ಮುಖ್ಯ ಭಾಗವನ್ನೇ ಬೇರೆಯವರಿಗೆ ಬಿಟ್ಟು ಕೊಡುವ ಬದಲು ಯಾಕೆ ಕನ್ನಡ ಚಿತ್ರರಂಗದವರೇ ಸೇರಿ ಒಂದು ಮಲ್ಟಿಪ್ಲೆಕ್ಸ್ ಅಥವಾ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಕಟ್ಟಿಸಿ ಕನ್ನಡ ಚಿತ್ರಗಳನ್ನು ಬೆಳೆಸಬಾರದು? ಈಗ ಕಪಾಲಿ ಕನ್ನಡಿಗರ ಕೈತಪ್ಪುತ್ತಿದೆ ಮುಂದೆ ಕೆಜಿ ರಸ್ತೆಯ ಸಂತೋಷ್ ಹಾಗು ನರ್ತಕಿ ಚಿತ್ರಮಂದಿರಗಳು ತೆಲುಗು ಹಾಗು ತಮಿಳು ಚಿತ್ರ ಮಂದಿರಗಳಾಗಿ ಪರಿವರ್ತನೆ ಆದರೂ ಆಶ್ಚರ್ಯ ಪಡಬೇಕೆನಿಲ್ಲ. ಈಗಿರುವ ಯಾವ ಹಿರಿಯ ನಟರೂ ಕೂಡಾ ಅಣ್ಣಾವರಂತೆ ಆಗಲಿಲ್ಲ ಎಂಬುದೇ ಬೇಸರದ ಸಂಗತಿ.

LEAVE A REPLY

Please enter your comment!
Please enter your name here