ಜುಲೈ ತಿಂಗಳ ಅಂತ್ಯದವರೆಗೆ ಲಾಕ್ ಡೌನ್ ಆದೇಶ ಹೊರಡಿಸಿದ ಈ ರಾಜ್ಯ ಸರ್ಕಾರ

0
562

ಪಶ್ಚಿಮಬಂಗಾಳದ ಹಾದಿ ಹಿಡಿಯುತ್ತಾ ಕರುನಾಡು? ಕೊರೋನ ಹಾವಳಿ ದಿನದಿಂದ ದಿನಕ್ಕೆ ಸಾವಿನ ರಣಕೇಕೆ ಮುಂದುವರಿಸುತ್ತಾ ಹೋದಂತೆ ಪಶ್ಚಿಮ ಬಂಗಾಳದ ಎಚ್ಚೆತ್ತುಕೊಂಡು ಜುಲೈ ಲಾಕ್ಡೌನ್ 30ರವರೆಗೆ ಮುಂದುವರಿಸಿದೆ. ಕರ್ನಾಟಕದಲ್ಲೂ ಸಹ ಕರೋನ ಸೋಂಕಿತರ ಸಂಖ್ಯೆ ಹೆಚ್ಚಳ ವಾಗುವುದರೊಂದಿಗೆ ಸಾವಿನ ಸಂಖ್ಯೆಯು ಸಹ ಮಿತಿಮೀರಿದೆ, ಅದರಲ್ಲೂ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ದಿನವೊಂದಕ್ಕೆ ಐದರಿಂದ ಹತ್ತು ಸಾವುಗಳು ಸಂಭವಿಸುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತಿದ್ದಂತೆ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಹೆಚ್ಚಿನ ಜವಬ್ದಾರಿ ಹೊತ್ತು ಇಡೀ ರಾಜ್ಯವನ್ನು ಜೂನ್ 24ರಿಂದ ಜುಲೈ ಅಂತಿಮವರೆಗೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.

ಸರ್ವಪಕ್ಷ ಸಭೆ ಸೇರಿದ ನಂತರ ಈ ದಿಟ್ಟ ಹೆಜ್ಜೆಯನ್ನು ಮಮತಾಬ್ಯಾನರ್ಜಿ ಇಟ್ಟಿದ್ದಾರೆ, ಬೆಂಗಳೂರು ದಕ್ಷಿಣ ಕ್ಷೇತ್ರ ಇಷ್ಟುದಿನ ಹಸಿರುವಲಯವಾಗಿತ್ತು ಇತ್ತೀಚೆಗೆ ಕೆಲವು ವಾರ್ಡ್ ಗಳಲ್ಲಿ ಸೋಂಕಿತರ ಸಂಖ್ಯೆ ಕಂಡಿದ್ದು ಸ್ಥಳೀಯ ನಿವಾಸಿಗರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಒಂದಷ್ಟು ರಸ್ತೆಗಳನ್ನು ಸಹ ಸೀಲ್ ಡೌನ್ ಮಾಡಲಾಗಿದ್ದು ಬಿಗಿಯಾದ ವಾತಾವರಣ ಸೃಷ್ಠಿಯಾಗಿದೆ. ಕೊರೋನ ವೈರಸ್ ಹಾಟ್ ಸ್ಟಾಟ್ ಆಗಿ ಬೆಂಗಳೂರು ನಗರ ಏರ್ಪಡಬಹುದಾ ಎಂಬ ಶಂಕೆಮೂಡಿದೆ.

ಕೊರೋನ ಸೋಂಕಿತರ ವಿಷಯದಲ್ಲಿ ಬೆಂಗಳೂರು ಮುಂದಿನ ಮುಂಬೈ ಆಗದಿರಲಿ ಎಂಬ ಕೂಗು ಸಹ ಕೇಳಿಬರುತ್ತಿದೆ, ಒಂದು ವರ್ಗ ಲಾಕ್ ಡೌನ್ ಮಾಡಬೇಕು ಎಂದು ಹೇಳಿದರೆ ಮತ್ತೊಂದು ಕಡೆ ಕಾರ್ಮಿಕ ಶ್ರಮಿಕ ವರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ಬರುತ್ತಿದ್ದು, ಎಲ್ಲವೂ ಮುಖ್ಯಮಂತ್ರಿ ಯಡಿಯೂರಪ್ಪ ನವರು ವಿಧಾನ ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ಜೀವನ ಮತ್ತು ಜೀವ ಕುರಿತು ಮುಂದಿನ ತೀರ್ಮಾನ ಕೈಗೊಳ್ಳುವವರೆಗೂ ಕಾದುನೋಡಬೇಕಿದೆ. ಒಂದು ವೇಳೆ ಕರ್ನಾಟಕವನ್ನ ಸಂಪೂರ್ಣವಾಗಿ ಪಶ್ಚಿಮಬಂಗಾಳದಂತೆ ಲಾಕ್ ಡೌನ್ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.

LEAVE A REPLY

Please enter your comment!
Please enter your name here