ಜಪಾನ್ ದೇಶ ಭಾರತ ದೇಶಕ್ಕಿಂತ ಎಷ್ಟು ವರ್ಷ ಮುಂದೆ ಇದೆ ಗೊತ್ತೇ

0
451

ವಿಶ್ವದಲ್ಲಿ 2ನೆಯ ಅತಿ ಹೆಚ್ಚು ಜಿಡಿಪಿ ಹೊಂದಿರುವ ದೇಶ ಅಂದರೆ ಅದು ಜಪಾನ್ ದೇಶ ಇದು ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ವಿಶ್ವದ ಪ್ರಮುಖ ದೇಶಗಳಲ್ಲೊಂದು. ಜಪಾನ್ ದೇಶ ಮುಂದುವರೆದ ದೇಶ, ತಂತ್ರಜ್ಞಾನದ ತವರು ಎಂದು ಹೇಳಬಹುದು, ಇನ್ನು ಒಮ್ಮೆಯೂ ಜಪಾನ್ ದೇಶಕ್ಕೆ ಭೇಟಿ ನಿಡಿರದಿದ್ದರೂ ಅಲ್ಲಿ ಇರುವ ತಂತ್ರಜ್ಞಾನದ ಬಗ್ಗೆ ಕೇಳಿಯೇ ಸುಸ್ತಾಗಿರುತ್ತೇವೆ ಅಲ್ಲವೇ? ಒಂದು ಮಾತಿನಲ್ಲಿ ಹೇಳಬೇಕು ಎಂದರೆ ಜಪಾನ್ ತಂತ್ರಜ್ಞಾನ ನಮ್ಮ ತಂತ್ರಜ್ಞಾನಕ್ಕಿಂತ ಹತ್ತಾರು ವರ್ಷಗಳ ಕಾಲ ಮುಂದಿದೆ. ಹೌದು, ಜಾಪಾನ್ ದೇಶದಲ್ಲಿ ಎಲ್ಲವೂ ತಂತ್ರಜ್ಞಾನವೇ ಆಗಿದೆ.

ಅಲ್ಲಿ ಕಾಫಿ ಕುಡಿಯುವ ಕಪ್‌ನಿಂದ ಹಿಡಿದು, ತಲೆಗೆ ಸಿಕ್ಕಿಸಿಕೊಳ್ಳುವ ಒಂದು ಏರ್‌ಪಿನ್ ಅನ್ನು ಸಹ ಅವರು ಗ್ಯಾಜೆಟ್ ಆಗಿ ಪರಿವರ್ತಿಸಿರುವುದನ್ನು ನಾವು ಕಾಣಬಹುದು. ದೈನಂದಿನ ಜೀವನದ ಸರಳಗೊಳಿಸುವ ಸಲುವಾಗಿ ಜಪಾನಿಯರು ಪ್ರತಿಯೊಂದರಲ್ಲಿಯೂ ತಂತ್ರಜ್ಞಾನದ ಹಿಂದೆ ಬಿದ್ದಿರುವುದನ್ನು ನೋಡಬಹುದು. 2020ರ ಸನಿಹದಲ್ಲಿ ಮಾರುಕಟ್ಟೆಗೆ ಡ್ರೋಣ್ ರೂಪದ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ.

ಮನುಷ್ಯ ಮಾಡುವ ಕೆಲಸಗಳನ್ನೆಲ್ಲ ತಂತ್ರಜ್ಞಾನವನ್ನ ಬಳಸಿಕೊಂಡು ಮಾಡಬಹುದು. ಮಾನವನಿಗೆ ಬೇಕಾದ ರೀತಿಯಲ್ಲಿ ತಕ್ಕಂತೆ ತಂತ್ರಜ್ಞಾನದ ಅಭಿವೃದ್ಧಿ ಪಡಿಸುವುದು ಜಪಾನಿಗರ ವೈಶಿಷ್ಟ್ಯವಾಗಿದೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ, ಎಲೆಕ್ಟ್ರಾನಿಕ ಉಪಕರಣಗಳು, ಗೃಹಬಳಕೆ ವಸ್ತುಗಳು, ಮೊಬೈಲ್ ಹೀಗೆ ಎಲ್ಲ ತಂತ್ರಜ್ಞಾನದಲ್ಲೂ ಜಪಾನ್ ಟೆಕ್ನಾಲಜಿ ಐಟಂ ಅಂದ್ರೆ ಜನ ಕ್ಯುನಿಂತಾದರೂ ಸರಿ ಜಪಾನ್ ದೇಶದ ವಸ್ತುಗಳನ್ನು ಖರೀದಿಸುತ್ತಾರೆ.

ಹಾಗೇ ಈ ವರದಿಯಲ್ಲಿ ನಾವು ತಿಳಿಸುವುದೇನೆಂದರೆ ಜಪಾನ್ ದೇಶದ ಸಾರಿಗೆ ವ್ಯವಸ್ಥೆಯ ಕುರಿತು ಇಲ್ಲಿ ಮರ್ಸೀಡೀಸ್ ಬೆಂಜ಼್ ಫ್ಯುಚರ್ ಟ್ರಕ್ ಇದು ಚಾಲಕ ರಹಿತವಾಗಿ ಚಲಿಸುತ್ತದೆ, ಇದಕ್ಕೆ ಪಿಕಪ್ ಲೊಕೇಷನ್ ಮತ್ತು ಡ್ರಾಪ್ ಲೊಕೇಷನ್ ಸೆಟ್ ಮಾಡಿದರೆ ಸಾಕು ಇದು ತನ್ನಿಂತಾನೇ ನಿಯಂತ್ರಿಸುತ್ತದೆ. ಏನಾದರೂ ಎಮರ್ಜೆನ್ಸಿ ಇದ್ರೆ ಮಾತ್ರ ನಮ್ಮನ್ನು ಎಚ್ಚರಿಸುತ್ತದೆ ಅಷ್ಟರ ಮಟ್ಟಿಗೆ ಜಪಾನ್ ತಂತ್ರಜ್ಞಾನ ಅಭಿವೃದ್ದಿಪಡಿಸಿದೆ. ಹಾಗೆ ಕೇವಲ ಐಷಾರಾಮಿ ಕಾರುಗಳನ್ನು ತಯಾರುಮಾಡುತ್ತಿದ್ದ ಬೆಂಜ಼್ ಕಂಪನಿ ಭವಿಷ್ಯದ ಅಗತ್ಯತೆ ತಿಳಿದು ಮರ್ಸೀಡೀ಼ಸ್ ಬೆಂಜ಼್ ಫ್ಯುಚರ್ ಬಸ್ ಗಳನ್ನು ಕೂಡ ತಯಾರುಮಾಡಿದೆ.

ಇದಕ್ಕೆ ಯಾವುದೇ ಚಾಲಕ ಅವಶ್ಯಕತೆ ಇರುವುದಿಲ್ಲ. ಪೈಲಟ್ ಮೋಡ್ ನಿಂದಾಗಿ ತನ್ನಿಂತಾನೆ ಚಾಲನೆಯಾಗುತ್ತದೆ ಹಾಗೆ ವೇಗದ ನಿಯಂತ್ರಣವನ್ನೂ ಕೂಡ ಸ್ವಯಂ ನಿಯಂತ್ರಿಸುತ್ತದೆ, ಇದರ ವಿಶೇಷತೆ ಏನೆಂದರೆ ವೈರ್ ಲೆಸ್ ಚಾರ್ಜರ್ ಮುಖಾಂತರ ನಾವು ಕೂತಲ್ಲಿಯೇ ಮೊಬೈಲ್ ಚಾರ್ಜರ್ ಮಾಡಬಹುದಾಗಿದೆ. ಮತ್ತೊಂದು ಟೆಸ್ಲಾ ಸೆಮಿ ಟ್ರಕ್ ಇದು ವಿದ್ಯುತ್ಚಾಲಿತ ಸಾರಿಗೆ ಆಗಿದ್ದು ಒಮ್ಮೆ ಇದನ್ನು ಚಾರ್ಜ್ ಮಾಡಿದರೆ ಸುಮಾರು 850ಕಿಮೀ ಚಲಿಸಬಹುದಾಗಿದೆ.

ಕೇವಲ 35ನಿಮಿಷದಲ್ಲಿ 85%ನಷ್ಟು ಚಾರ್ಜ್ ಆಗುತ್ತದೆ ನಾಲ್ಕುಬ್ಯಾಟರಿಯನ್ನು ಒಳಗೊಂಡಿದೆ. ಇದೇ ರೀತಿ ಭಾರತ ದೇಶದಲ್ಲಿಯೂ ಕೂಡ ಇಂಧನ ಚಾಲಿತ ವಾಹನಗಳನ್ನು ನಿಷೇಧಿಸಿ ಎಲೆಕ್ಟ್ರಾನಿಕ್ ಸಾರಿಗೆ ವ್ಯವಸ್ಥೆಯನ್ನು ಹತ್ತು ಹದಿನೈದು ವರ್ಷಗಳಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಇದರಿಂದ ದೇಶದಲ್ಲಿ ಕಲುಷಿತ ಪರಿಸರದಿಂದ ಮುಕ್ತಿ ದೊರೆಯುವಂತಾಗುತ್ತದೆ.

LEAVE A REPLY

Please enter your comment!
Please enter your name here