ಇಷ್ಟು ದಿನ ದರ್ಶನ್ ಗೆ ತಮ್ಮನಾಗಿದ್ದ ಅಭಿಷೇಕ್ ಈಗ ವಿಲನ್ ಆಗುತ್ತಾನೆ ಅಂತೆ! ಮುಂದೆ ಓದಿ

0
135

ಕನ್ನಡ ಚಲನಚಿತ್ರದ ಚಾಲೆಂಜಿಂಗ್ ಸ್ಟಾರ್ ಮತ್ತು ಹಲವರು ಖ್ಯಾತ ನಟರು ನಟಿಸಿದ ಹೆಮ್ಮೆಯ ಚಿತ್ರ ಕುರುಕ್ಷೇತ್ರ. ಕುರುಕ್ಷೇತ್ರ ಚಿತ್ರ ಕನ್ನಡ ಮತ್ತು ತಮಿಳ್,ತೆಲುಗಿನಲ್ಲಿ ಯಾವ ಸದ್ದು ಮಾಡಿದೆ ಎಂಬುವ ವಿಷಯ ನಿಮಗೆಲ್ಲ ಗೊತ್ತೇ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ಆಚರಿಸಿದೆ. ಶಿವರಾತ್ರಿಯ ದಿನ, ಬೆಂಗಳೂರಿನ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಸಿ ಎಂ ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.

ಇನ್ನು ಈ ಕಾರ್ಯಕ್ರಮಕ್ಕೆ ಸಚಿವ ಬೈರತಿ ಬಸವರಾಜ್ ಮತ್ತು ಅಭಿಷೇಕ್ ಅಂಬರೀಶ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಸಮಯದಲ್ಲಿ ಮಾತನಾಡಿದ ಅಭಿಷೇಕ್ ಅಂಬರೀಶ್, ಅಪ್ಪನ ಪರವಾಗಿ ನಾನು ಇಲ್ಲಿ ಬಂದಿದ್ದೀನಿ ಎಂದರು. ಇನ್ನು ನಿರ್ಮಾಪಕ ಮುನಿರತ್ನ ಬಗ್ಗೆ ಮಾತನಾಡಿದ ಅಭಿಷೇಕ್ ಅಂಬರೀಷ್ ನಿಮ್ಮ ಸಿನಿಮಾದಲ್ಲಿ ನಮ್ಮ ಇಡಿ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ ನಿಮಗೆ ನನ್ನ ಅಭಿನಂದನೆಗಳು.

ಕುರುಕ್ಷೇತ್ರದಲ್ಲಿ ಅಪ್ಪ ಮತ್ತು ಅಣ್ಣ ದರ್ಶನ್ ಅವರಿಗೆ ಅವಕಾಶ ನೀಡಿದ್ರೆ, ಮುಂದಿನ ಸಿನಿಮಾ ಮದಕರಿನಾಯಕ ಚಿತ್ರದಲ್ಲಿ ಅಮ್ಮ ಸುಮಲತಾ ಅವರು ಕೂಡ ಇದ್ದಾರೆ. ಆದರೆ ನನ್ನ ಯಾಕೆ ಬಿಟ್ಟಿದ್ದೀರಿ ಎಂದು ಕೇಳಿದರು. ಇನ್ನು ಮಾತು ಮುಂದುವರೆಸಿದ ಅಭಿ “ನನಗೆ ಅವಕಾಶ ಕೊಡುವುದಾದರೆ ದರ್ಶನ್ ಅವರು ಹೀರೋ ಆಗಿರಬೇಕು, ನನ್ನನ್ನು ವಿಲನ್ ಆಗಿ ಮಾಡಿ ಎಂದು ಕೇಳಿಕೊಂಡರು.

ವಿಲನ್ ಪಾತ್ರದಲ್ಲಿಯೆ ಯಾಕೆ ಮಾಡಬೇಕು ಎನ್ನುವುದನ್ನು ಸಹ ಅಭಿ ವಿವರಿಸಿದರು. ಚಿಕ್ಕವನಾಗಿದ್ದಾಗಿನಿಂದಲು ಅಪ್ಪ ಬೈಯುತ್ತಿದ್ದರು. ನನ್ನ ಕಂಟ್ರೋಲ್ ಗೆ ನೀನು ಬರುವುದಿಲ್ಲ ನಿನ್ನ ಅಣ್ಣನ ಹತ್ರ ಹೋಗು ಎಂದು ಹೇಳುತ್ತಿದ್ದರು. ದಿನ ಬೈಯಿಸಿಕೊಂಡು ಅಭ್ಯಾಸ ಆಗಿದೆ. ಹಾಗಾಗಿ ಸ್ಕ್ರೀನ್ ನಲ್ಲಿ ಆದರೆ ನನಗೂ ವರ್ಕೌಟ್, ನಿಮಗೂ ಆಗುತ್ತೆ ಎಂದು ಹೇಳಿ ನಕ್ಕರು.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಭಿಷೇಕ್ ಅಂಬರೀಷ್, ಮುನಿರತ್ನ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮುನಿರತ್ನ ಅವರ ನಿರ್ಮಾಣದ ವಿಂಗ್ ಕಮಾಂಡರ್ ಅಭಿನಂದನ್ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ಅವರು ಕೂಡ ಬಣ್ಣಹಚ್ಚುತ್ತಿದ್ದಾರೆ.

ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರೂ ಲೈಕ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ನಿಮ್ಮ ಸ್ನೇಹಿತರೊಂದಿಗೆ ಈ ನಮ್ಮ ಲೇಖನವನ್ನು ಹಂಚಿಕೊಳ್ಳಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ರಾಯ ಬೆಂಗಳೂರು ಪೇಜ್ ನ್ನು ತಪ್ಪದೆ ಲೈಕ್ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ.

LEAVE A REPLY

Please enter your comment!
Please enter your name here