ಹಸ್ತ ಮೈಥುನದಿಂದಾಗುವ ಅಡ್ಡಪರಿಣಾಮಗಳು ಹಾಗು ತೊಂದರೆಗಳು

0
778

ಹಸ್ತಮೈಥುನದ ಬಗ್ಗೆ ಇಂದಿನ ಯುವಕ ಯುವತಿಯರಲ್ಲಿ ಆತಂಕ ಇದ್ದೇ ಇದೆ,ಈ ಶುಕ್ರ ಧಾತು ಎನ್ನುವುದು ನಾವು ತಿಂದಂತಹ ಆಹಾರದ ಸಪ್ತಧಾತು ಅಂದರೆ ನಾವು ಇವತ್ತು ಸೇವಿಸಿದ ಆಹಾರ ಇದು ಎಲ್ಲಾ ಧಾತು ಗಳಿಗೆ ಪೋಷಣೆಮಾಡುತ್ತಾ ಮಾಡುತ್ತಾ ಏಳನೆಯ ದಿನ ಅದು ಶುಕ್ರವಾಗುತ್ತದೆ.ನಾವು ಸೇವಿಸಿದ ಆಹಾರದ ಸಾರ ಸಂಪೂರ್ಣವಾಗಿ ಹಿಂಡಿ ಅದರ ಎಲ್ಲಾ ವ್ಯರ್ಥವಾದ ಕೊಬ್ಬುಕರಗಿ ಉಳಿಯುವ ಸೆನ್ಸ್ ಇದಿಯಲ್ಲ ಆದೇ ಶುಕ್ರ.ಈ ಶುಕ್ರಕ್ಕೆ ಭಗವಂತ ಮತ್ತೊಂದು ಜೀವವನ್ನು ಸೃಷ್ಟಿಸುವ ಶಕ್ತಿನೀಡಿದ್ದಾನೆ.ಇಂತಹ ಶಕ್ತಿಯನ್ನು ನಾವು ನಾಶ ಮಾಡಿಕೊಂಡರೆ ಮುಂದೆ ಭವಿಷ್ಯದಲ್ಲಿ ಏನೆಲ್ಲಾ ತೊಂದರೆಗಳಾಗಬಹುದು ಚಿಂತಿಸಬೇಕಾಗಿದೆ.ಆದರೆ ಇದನ್ನು ಅಲ್ಲಗೆಳೆಯುವುದೂ ಉಂಟು.ಆದರೆ ವೈದ್ಯಶಾಸ್ತ್ರದಲ್ಲಿ ಬೆಳೆಯುವ ಎಳೆಯ ವಯಸ್ಸಿನಲ್ಲಿಯೇ ತನ್ನ ಶಕ್ರಧಾತುವನ್ನು ನಷ್ಟಮಾಡಿಕೊಂಡಲ್ಲಿ ಖಂಡಿತವಾಗಲೂ ಧಾತುವಿನ ಪೋಷಣೆಯಾಗುವುದಿಲ್ಲ.ಇದು ಹುಡುಗ ಹುಡುಗಿಯರಿಬ್ಬರಿಗೂ ಅನ್ವಯಿಸುತ್ತದೆ.

ಕೆಲವರು ಕೇಳಬಹುದು ಹುಡುಗಿಯರಲ್ಲಿ ಶುಕ್ರಧಾತು ಇರುತ್ತದೆಯೇ ಎಂಬುದು,ಹೌದು ಆಯುರ್ವೇದ ಸಿದ್ಧಾಂತದ ಪ್ರಕಾರ ಶುಕ್ರ ಹಾಗೂ ವೀರ್ಯಾ ಬೇರೆ ಬೇರೆ.ಶುಕ್ರ ಎನ್ನುವ ಧಾತು ಮಹಿಳೆಯರು ಹಾಗೂ ಪುರುಷರಿಬ್ಬರಲ್ಲಿಯೂ ಇರುತ್ತದೆ.ಶುಕ್ರ ಧಾತು ನಷ್ಟವಾದರೆ ಉತ್ತರ ಧಾತುಗಳು ವಿರುದ್ದ ದಿಕ್ಕುವಾಗಿ ಕ್ಷೀಣಿಸುತ್ತಾ ಕ್ಷೀಣಿಸುತ್ತಾ ನಿಶ್ಯಕ್ತಿ ಉತ್ಪಾದನೆ ಯಾಗುತ್ತದೆ.ಅದರಲ್ಲೂ ಬೆಳೆಯುವ ವಯಸ್ಸಿನಲ್ಲಿ ನಷ್ಟ ಮಾಡಿಕೊಂಡರೆ ಮುಂದೆ ಸಮಸ್ಯೆಖಂಡಿತ,ಆದರೆ ಹತಾಶರಾಗುವಂತಹ ಅವಕಾಶವಿಲ್ಲ.ಇದಕ್ಕೆ ಪರಿಹಾರವಾಗಿ ಆಯುರ್ವೇದದ ಮುಖಾಂತರ ಶುಕ್ರಧಾತುವನ್ನು ವೃದ್ದಿಸಕೊಳ್ಳಬಹುದು.ಹಾಗೆಯೆ ಮನೆಮದ್ದು ಗಳಾದ ತುಪ್ಪ,ಬೆಣ್ಣೆ,ಡ್ರೈಫ್ರೂಟ್ಸ್,ಹಾಲು ಇಂತಹ ಆಹಾರ ಸೇವನೆಯ ಮುಖಾಂತರವೇ ವೃದ್ದಿಸಬಹುದು.ಇದನ್ನ ಹೊರತುಪಡಿಸಿ ಮಾರುಕಟ್ಟೆಯಲ್ಲಿ ಸಿಗುವ ಔಷದಿಗಳನ್ನು ಬಳಸುವ ಮುನ್ನ ಎಚ್ಚರ.

ಇಂತಹ ವಿಚಾರವನ್ನು ತಂದೆ ತಾಯಿ,ಗುರು ಹಿರಿಯರು,ಗಳೆಯರೊಡನೆ ಹಂಚಿಕೊಳ್ಳಲು ಮುಜುಗರವಾಗಬಹುದು.ಆದರೆ ತನ್ನ ಸಮಾನ ವಯಸ್ಕರೊಡನೆ ಹಂಚಿಕೊಂಡರೂ ಅವರಿಗೂ ಈ ವಿಷಯದಲ್ಲಿ ಮಾಹಿತಿ ಕೊರತೆಯಿರಬಹುದು.ಹಸ್ತಮೈಥುನ ಕೆಲವರಿಗೆ ನಿರಂತರವಾಗಿ ಅಭ್ಯಾಸವಾಗಿ ಬಿಟ್ಟಿದ್ದರೇ ಅದರಿಂದ ಹೊರಬರುವುದೇ ಒಳ್ಳೇಯದು,ಇದೊಂತರ ಅಡಿಕ್ಷನ್ ರೀತಿಯೂ ಆಗಿಬಿಡಬಹುದು.ಮಧ್ಯಪಾನ,ಧೂಮಪಾನ ದಂತೆ ಇದನ್ನು ನಾಶಮಾಡಲು,ನಿಯಂತ್ರಣಮಾಡಲು ಸಾಧ್ಯವಿಲ್ಲ.ಹಾಗಾಗಿ ಇಂತಹ ಮನಸ್ಥಿತಿ ಯಿಂದ ನಾವು ಹೊರಬರಬೇಕಾದರೆ ಒಳ್ಳೆಯ ಪುಸ್ತಕ ಓದಲು ಆರಂಭಿಸಬೇಕು.ಏಕಾಂತದಲ್ಲಿ ಹೆಚ್ಚು ಸಂಗೀತ,ಒಳ್ಳೆಯ ಸಾಂಗತ್ಯವನ್ನು ಬೆಳೆಸಿಕೊಳ್ಳಬೇಕು.ಹಾಗೆಯೇ ಆಹಾರ ವಿಚಾರದಲ್ಲಿ ಹಾಲು,ತುಪ್ಪ,ಡ್ರೈಫ್ರೂಟ್ಸ್,ದ್ರಾಕ್ಷಿ,ಗೋಡಂಬಿ,ಅಂಜೂರ,ಇತ್ಯಾದಿ ವಿಹಾರ ಅಂದರೆ ಯೋಗಾಸನ ಪ್ರಾಣಾಯಾಮ ಸಾತ್ವಿಕತೆಯ ಕಡೆ ಗಮನ ಹರಿಸಿದಾಗ ಮಾನಸಿಕ ಸ್ಥಿತಿಯನ್ನು ಇಡಿದಿಟ್ಟುಕೊಳ್ಳಬಹುದು,ಹೀಗೆ ಶುಕ್ರ ಧಾತುವನ್ನು ಪೋಷಣೆ ಮಾಡಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here