ಎಲ್ಲರನನ್ನೂ ಸಾಮಾನ್ಯವಾಗಿ ಕಾಡುವ ಈ ಸಮಸ್ಯೆಗೆ ಇಷ್ಟೇ ಮಾಡಿ ಸಾಕು

0
149

ಅಶಕ್ತತೆ ಮುಂತಾದ ಸಾಮಾನ್ಯ ರೋಗಗಳು ಕಂಡುಬಂದ ಸಂದರ್ಭದಲ್ಲಿ ನೀವು ಆಸ್ಪತ್ರೆಗಳಿಗೆ ಹೋದರೆ ವೈದ್ಯರು ರಕ್ತ ತಪಾಸಣೆ ಮಾಡುತ್ತಾರೆ, ಅದರಲ್ಲಿ ಮೊದಲನೇದಾಗಿ ನೀವು ಸಾಮಾನ್ಯವಾಗಿ ಹಿಮೋಗ್ಲೋಬಿನ್ ಎಂಬ ಪದವನ್ನು ನೋಡುತ್ತೀರಿ. ಯಾಕೆ ಅದು ಅಷ್ಟು ಪ್ರಾಮುಖ್ಯತೆ ಪಡೆದಿದೆ, ಹಿಮೋಗ್ಲೋಬಿನ್ ಎಂದರೇನು, ಅದು ನಮಗೆ ಏಕೆ ಅವಶ್ಯಕ ಎಂಬ ಪ್ರಶ್ನೆಗಳು ನಿಮಗೆ ಬರಬಹುದು ಹಾಗಿದ್ದರೆ ಇಲ್ಲಿ ನೋಡಿ.

ಹಿಮೋಗ್ಲೋಬಿನ್ ಕೌಂಟ್ಡೌನ್ ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರನ್ನು ಕಾಡುವ ಸಮಸ್ಯೆ. ಅದರಲ್ಲೂ ಭಾರತೀಯ ಮಹಿಳೆಯರಿಗೆ ಇದು ಸರ್ವೇಸಾಮಾನ್ಯ. ಆರೋಗ್ಯವಂತ ಪುರುಷರಲ್ಲಿ 14 ರಿಂದ 17 ಮತ್ತು ಆರೋಗ್ಯವಂತ ಮಹಿಳೆಯರಲ್ಲಿ 12ರಿಂದ 15 ರಷ್ಟು ಹಿಮೋಗ್ಲೋಬಿನ್ ಅಂಶ ಇರಬೇಕೆಂದು ನಿಗದಿಪಡಿಸಲಾಗಿದೆ. ಆದರೆ ನೂರಕ್ಕೆ 50 ರಷ್ಟು ಮಹಿಳೆಯರಲ್ಲಿ ನಿಗದಿಪಡಿಸಿದಕ್ಕಿಂತ ಕಡಿಮೆ ಪ್ರಮಾಣದ ಹಿಮೋಗ್ಲೋಬಿನ್ ಇರುತ್ತದೆ.

ಒಂದುರೀತಿಯಲ್ಲಿ ನೋಡಿದರೆ ಎಲ್ಲಾ ರೋಗಗಳಿಗೂ ಇದು ಮೂಲವಾಗುತ್ತದೆ. ಹಾಗಿದ್ದರೆ ಇದನ್ನು ಹೆಚ್ಚಿಸುವ ಕ್ರಮಗಳನ್ನು ನೀವು ಪಾಲಿಸಲೇಬೇಕು. ಸ್ವಲ್ಪ ಆಹಾರ ಪದ್ಧತಿಯನ್ನು ಸರಿಪಡಿಸಿಕೊಂಡರೆ ಸಾಕು ನಿಮಗೆ ಅವಶ್ಯಕ ಹಿಮೋಗ್ಲೋಬಿನ್ ಲಭ್ಯವಾಗುತ್ತದೆ. ಹಿಮೋಗ್ಲೋಬಿನ್ ಹೆಚ್ಚಿಸುವ ಆಹಾರಗಳು ಇಂತಿವೆ. ಬೀಟ್ರೂಟ್ ಅನ್ನು ಬಹಳ ಜನ ಸೇವಿಸಲು ಇಷ್ಟಪಡುವುದಿಲ್ಲ. ಅದರ ವಾಸನೆ ಕಾರಣಕ್ಕೆ ಕೆಲವರು ರುಚಿಯ ಕಾರಣಕ್ಕೆ ಹಿಂಜರಿಯುತ್ತಾರೆ. ಆದರೆ ಅದರಲ್ಲಿರುವ ಕಬ್ಬಿಣ, ಫೈಬರ್, ಪೊಟಾಷಿಯಂ ಇರುವದರಿಂದ ನಿಮ್ಮ ಹಿಮೋಗ್ಲೋಬಿನ್ ಅತೀ ವೇಗದಲ್ಲಿ ಏರುತ್ತದೆ.

ದಾಳಿಂಬೆ ಹಣ್ಣಿನಲ್ಲಿ ಅಗಾದ ಪ್ರಮಾಣದ ಕ್ಯಾಲ್ಸಿಯಂ ಪ್ರೊಟೀನ್ ಕಬ್ಬಿನ ಕಾರ್ಬೋಹೈಡ್ರೇಟ್ ಮತ್ತು ಕರಗುವ ನಾರು ಇದೆ. ಇವು ರಕ್ತದಲ್ಲಿರುವ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ನೆರವಾಗುತ್ತದೆ. ಹಿಮೋಗ್ಲೋಬಿನ್ ಕೊರತೆಗೆ ಎಲ್ಲ ತರಹದ ಸೊಪ್ಪುಗಳನ್ನು ಉಪಯೋಗಿಸಬೇಕು. ಮುಖ್ಯವಾಗಿ ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು, ಸಬ್ಬಸಿಗೆ ಸೊಪ್ಪು ನುಗ್ಗೆ ಸೊಪ್ಪು ಬಸಳೆ ಸೊಪ್ಪು ಬಳಸಿ. ಸಾಧ್ಯವಾದರೆ ದಿನನಿತ್ಯವೂ ಒಂದೊಂದು ಸೇಬುಹಣ್ಣನ್ನು ಸೇವಿಸಿ. ಇಷ್ಟು ಮಾಡಿದರೆ ಸಾಕು ಹಲವಾರು ಸಮಸ್ಯೆಗಳಿಂದ ನೀವು ದೂರವಾಗುತ್ತೀರಿ.

LEAVE A REPLY

Please enter your comment!
Please enter your name here