ಈ ಕೆಲವು ಸಣ್ಣ ಬದಲಾವಣೆಗಳ ಮಾಡಿಕೊಂಡು ನೆಮ್ಮದಿಯಿಂದಿರಿ

0
150

ವಾಸ್ತು ಈಗ ವೈಜ್ಞಾನಿಕವಾಗಿ ಎಲ್ಲರೂ ಪಾಲಿಸುವಂತಹ ಗೃಹ ವಿಜ್ಞಾನವಾಗಿದೆ. ನಾವು ಮಾಡುವಂತಹ ಕೆಲವು ಪುಟ್ಟ ಬದಲಾವಣೆಗಳು ನಮ್ಮ ಮತ್ತು ನಮ್ಮ ಮನೆಯವರ ಜೀವನವನ್ನು ಸಂತೋಷದಿಂದ ಇಡುತ್ತವೆ. ನಾವು ಅರಿವಿಲ್ಲದೆ ಮನೆ ಕಟ್ಟುವಾಗಾಗಲಿ ಖರೀದಿಸುವಾಗಾಗಲಿ ಅಥವಾ ಸಾಮಾನು ಹೊಂದಿಸವಾಗಾಗಲಿ ಕೆಲವು ಸಣ್ಣ ಪುಟ್ಟ ತಪ್ಪು ಮಾಡಿ ನಮ್ಮ ನೆಮ್ಮದಿಯ ಜೀವನಕ್ಕೆ ನಾವೇ ಕಲ್ಲು ಹಾಕಿಕೊಳ್ಳುತ್ತೇವೆ, ಆದ್ದರಿಂದ ಇಂದೇ ಅವನ್ನು ಸರಿಪಡಿಸಿಕೊಳ್ಳಿ.

ಮುಂಭಾಗ ಮತ್ತು ಹಿಂಭಾಗಗಳಲ್ಲಿ ರಸ್ತೆಗಳು ಇರುವ 90 ಡಿಗ್ರಿ ಮೂಲೆಗಳು ಇರುವ ನಿವೇಶನಗಳು ಉತ್ತಮವಾದದ್ದು. ಉತ್ತರ ದಿಕ್ಕು ಶತಮಾನಗಳಿಂದಲೂ ಶುಭ ಸಂಕೇತವಾದುದು ಆದರೆ ಅಡುಗೆ ಮಾಡುವಾಗಾಗಲಿ ತಿನ್ನುವಾಗ ಆಗಲಿ ಕುಡಿಯುವಾಗ ಆಗಲಿ ಉತ್ತರ ದಿಕ್ಕಿನತ್ತ ಮುಖ ಮಾಡಬೇಡಿ ಬದಲಾಗಿ ಪೂರ್ವ ದಿಕ್ಕಿನ ಕಡೆ ಮುಖ ಮಾಡುವುದರಿಂದ ಉತ್ತಮ ಜೀರ್ಣ ಶಕ್ತಿ ಮತ್ತು ಆರೋಗ್ಯ ಲಭಿಸುವುದು.

ಕೆಲಸಮಾಡುವಾಗ ಓದುವಾಗ ವ್ಯವಹಾರ ಮಾಡುವಾಗ ನಿಮ್ಮ ಮುಖ ಉತ್ತರ ಅಥವಾ ಪೂರ್ವ ದಿಕ್ಕಿನತ್ತ ಇರಲಿ. ಮನೆಯಲ್ಲಿ ಕಿಟಕಿಗಳನ್ನು ಆದಷ್ಟು ಉತ್ತರ ಮತ್ತು ಪೂರ್ವ ದಿಕ್ಕಿಗೆ ಮಾಡಿಕೊಳ್ಳಿ ಏಕೆಂದರೆ ನೈರುತ್ಯ ಕಿಟಕಿಗಳು ಸಂತೋಷದ ಜೀವನಕ್ಕೆ ಒಳ್ಳೆಯದಲ್ಲ. ಅಡುಗೆ ಒಲೆಯು ಪೂರ್ವ ಅಥವಾ ಆಗ್ನೇಯ ದಿಕ್ಕಿನ ಕಡೆ ಇರಬೇಕು ಮತ್ತು ಅಡುಗೆ ಮಾಡುವವರ ಮುಖ ಪೂರ್ವ ದಿಕ್ಕಿನಲ್ಲಿರಬೇಕು. ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಪಡೆಯಲು ಮನೆಯ ಗೋಡೆಗಳಿಗೆ ಬೇರೆಬೇರೆ ಬಣ್ಣಗಳನ್ನ ಬಳಸಬೇಕು.

LEAVE A REPLY

Please enter your comment!
Please enter your name here