ಈ ಗಿಡಮೂಲಿಕೆಗಳನ್ನು ತಿನ್ನಿ, ಸುಲಭವಾಗಿ ತೂಕ ಇಳಿಸಬಹುದು

0
87

ಪ್ರತಿಯೊಬ್ಬರಿಗೂ ತನ್ನ ದೇಹ ಸೌಂದರ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ, ಈ ಸೌಂದರ್ಯ ಎಂಬುದು ಪ್ರತಿಯೊಬ್ಬರಲ್ಲೂ ಇರುವುದಿಲ್ಲ. ಸಾಮಾನ್ಯವಾಗಿ ಜನರು ಬಾಹ್ಯಸೌಂದರ್ಯಕ್ಕೆ ಕೊಡೋ ಪ್ರಾಶಸ್ಯ ಆಂತರಿಕ್ಕೆ ಸೌಂದರ್ಯಕ್ಕೆ ನೀಡುವುದಿಲ್ಲ. ಕೆಲವೊಂದಷ್ಟು ಜನಗಳಿಗೆ ಅತಿಯಾದ ಕೊಬ್ಬಿನಾಂಶ ಮತ್ತು ಬೊಜ್ಜಿನ ಸಮಸ್ಯೆಯಿಂದಾಗಿ ದೇಹದ ಆಕಾರ ಮತ್ತು ಅನೇಕ ಆರೋಗ್ಯದ ಸಮಸ್ಯೆಗಳು ಅವರನ್ನು ಧೀರ್ಘವಾಗಿ ಕಾಡುತ್ತವೆ. ಕೆಲವರಿಗಂತೂ ತಮ್ಮದೇಹಸೌಂದರ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ ತಾವು ಧರಿಸುವ ಜೀನ್ಸ್, ಚೂಡಿದಾರ್, ಸೀರೆ ಹೀಗೆ ಯಾವುದೇ ರೀತಿಯ ಉಡುಪನ್ನು ಧರಿಸಿದರೂ ಸಹ ಆ ಉಡುಪುಗಳಿಗೆ ತನ್ನ ದೇಹ ಹೊಂದಿಕೊಳ್ಳಲೇಬೇಕು ಎಂಬ ವ್ಯಾಮೋಹ ಹಲವರಿಗೆ.

ಇದಕ್ಕಾಗಿ ಅವರು ಸರ್ಜರಿಯನ್ನು ಸಹ ಮಾಡಿಸಿಕೊಳ್ಳುತ್ತಾರೆ ಇನ್ನು ಕೆಲವರು ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆಯನ್ನು ಪಡೆಯಲು ಮುಂದಾಗುತ್ತಾರೆ. ಆದರೆ ಇಲ್ಲೊಂದು ವಿಚಾರ ಎಲ್ಲರನ್ನು ತನ್ನತ್ತ ಕೇಂದ್ರೀಕರಿಸುತ್ತಿದೆ. ಹಿಂದೆಲ್ಲಾ ಋಷಿಮುನಿಗಳು ಚಿಕಿತ್ಸೆಯ ಸಲುವಾಗಿ ಬಳಸುತ್ತಿದ್ದ ಗಿಡಮೂಲಿಕೆಗಳು ಈಗ ಮತ್ತೆ ಬಳಕೆಯ ಹಾದಿ ಹಿಡಿಯುತ್ತಿವೆ, ಮುಳ್ಳಿನ ಕೊಂಬೆಗಳನ್ನು ಹೊಂದಿರುವಂತಹ ಗಿಡವಾಗಿರುವ ಗುಗ್ಗುಲ್ ಭಾರತೀಯ ಗಿಡಮೂಲಿಕೆಳಲ್ಲಿ ಪುರಾತನವಾದ ಚಿಕಿತ್ಸಾ ಗಿಡವಾಗಿದ್ದು ಇದು ಕೊಬ್ಬಿನಾಂಶ ನಿವಾರಣೆಯ ಅಂಶವನ್ನು ಹೊಂದಿದೆ.

ಸೊಂಟನೋವು, ಥೈರಾಯ್ಡ್ ಸಮಸ್ಯೆ ಹಾಗೂ ಇತರೆ ಜೀರ್ಣಕ್ರಿಯೆ ಅಂತಹ ಸಮಸ್ಯೆಗಳಿಗೆ ಈ ಗಿಡಮೂಲಿಕೆಯನ್ನು ಪ್ರತಿದಿನ ಮೂರು ಬಾರಿ ಕನಿಷ್ಠ 25ಗ್ರಾಂನಷ್ಟು ಇದನ್ನು ಸೇವಿಸಿದರೆ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಗಿಡಮೂಲಿಕೆಗಳು ಉಷ್ಣವಲಯ ಮತ್ತು ಉಪವಲಯ ಭಾಗಗಳಲ್ಲಿ ಕಂಡುಬರುತ್ತದೆ. ಇದು ದೇಹದ ಕೊಬ್ಬನ್ನು ಕರಗಿಸುವುದು ಅಲ್ಲದೆ ದೇಹತೂಕದ ಸಮತೋಲನವನ್ನು ನಿಯಂತ್ರಿಸುತ್ತದೆ.

ಇಂದಿನ ಆಧುನಿಕತೆಗೆ ಮೊರೆಹೋಗಿ ಇಂದು ಎಷ್ಟು ಯುವಪೀಳಿಗೆ ಜಿಮ್, ಏರೋಬಿಕ್ಸ್, ವ್ಯಾಯಾಮ ಇತರೆ ದೈಹಿಕ ಚಟುವಟಿಕೆಗಳನ್ನು ಮಾಡಿ ದೇಹವನ್ನು ದಂಡಿಸುತ್ತಾರೆ. ಅದೇ ರೀತಿ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸರ್ಜರಿ, ಕಾಸ್ಮೆಟಿಕ್ ಅಂಶಗಳನ್ನು ಕೂಡ ಬಳಸುತ್ತಾರೆ ಆದರೆ ಈ ಗಿಡಮೂಲಿಕೆಗಳು ದೇಹದ ಆರೋಗ್ಯ ಮತ್ತು ತೂಕವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದಲ್ಲದೆ ಅಜೀರ್ಣ ಕೊಬ್ಬು ಚರ್ಮರೋಗಗಳಿಗೆ ರೋಗನಿರೋಧಕ ಶಕ್ತಿಯನ್ನು ಗಿಡಮೂಲಿಕೆಗಳು ಒಳಗೊಂಡಿದೆ ಹಾಗಾಗಿ ಇತ್ತೀಚಿನ ದಿನಗಳಲ್ಲಿ ಗಿಡಮೂಲಿಕೆಗಳು ಹೆಚ್ಚು ಪ್ರಸಿದ್ಧವಾಗಿದ್ದು, ಆಯುರ್ವೇದ ಮಾರುಕಟ್ಟೆಯಲ್ಲಿ ಅನುಸರಿಸುತ್ತಿದೆ.

LEAVE A REPLY

Please enter your comment!
Please enter your name here