ದರ್ಶನ್ ಬರ್ತಡೇಯಲ್ಲಿ ಭಾರಿ ಕಿರಿಕ್! ಬೇಸೆತ್ತು ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಪಕ್ಕದ ಮನೆ ನಿವಾಸಿ

0
574

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟಿದ ದಿನವನ್ನು ಯಾವ ರೀತಿ ಮಾಡಬೇಕು ಎಂದು ಅಭಿಮಾನಿಗಳು ಎದುರು ನೋಡುವ ದಿನ ಬಂತು. ದರ್ಶನ್ ಅವರ ಜನ್ಮದಿನ ಗ್ರಾಂಡ್ ಆಗಿ ಸೆಲೆಬ್ರಿಟಿ ಮಾಡುವ ಅವಕಾಶ ದರ್ಶನ್ ಅವರು ಕೊಟ್ಟಿಲ್ಲ ಅದರ ಬದಲು ದವಸ ದಾನ್ಯ ಅನಾಥರಿಗೆ ಕೊಡಿ ಅಂದು ಹೇಳಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ ಅಂದ್ರೆ ಅಭಿಮಾನಿಗಳಿಗೆ ಎಂದು ಮರೆಯದ ಒಂದು ದೊಡ್ಡ ಹಬ್ಬ ಇರಬಹುದು. ಆದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಬಂದ್ರೆ ಸಾಕು, ದರ್ಶನ್ ಅವರ ನಿವಾಸದ ಅಕ್ಕ-ಪಕ್ಕದ ಮನೆಯವರಿಗೆ ಒಂದು ದೊಡ್ಡ ತಲೆ ನೋವು.

ಯಾಕಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನದಂದು ದಾಸನಿಗೆ ಶುಭ ಕೋರಲು ಬರುವ ಅಭಿಮಾನಿಗಳ ಸಂಖ್ಯೆ ಸಣ್ಣ-ಪುಟ್ಟದ್ದೇನಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮ ದಿನ ಪ್ರಯುಕ್ತ ಪ್ರತಿ ವರ್ಷ, ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸಕ್ಕೆ ಜನಸಾಗರವೇ ಹರಿದು ಬರುತ್ತದೆ. ಅದರಂತೆ ನಿನ್ನೆ ಫೆಬ್ರವರಿ 16 ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬರ್ತಡೇ ಪ್ರಯುಕ್ತ ದರ್ಶನ್ ನಿವಾಸದ ಮುಂದೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಜಮಾಯಿಸಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನದ ಜನಸಾಗರದಿಂದ ತೊಂದರೆ ಅನುಭವಿಸಿದ ಅಚಾತುರ್ಯ ಘಟನೆಯಿಂದಾಗಿ ದರ್ಶನ್ ನಿವಾಸದ ಅಕ್ಕ-ಪಕ್ಕದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದರ್ಶನ್ ಅಭಿಮಾನಿಗಳು ಮತ್ತು ದರ್ಶನ್ ಬರ್ತಡೇ ಆಯೋಜನೆ ಮಾಡಿದ್ದ ವ್ಯವಸ್ಥಾಪಕರ ವಿರುದ್ಧ ದರ್ಶನ್ ಮನೆಯ ಅಕ್ಕ-ಪಕ್ಕದ ನಿವಾಸಿಗಳು ದೂರು ನೀಡಿದ್ದಾರೆ. ಜನ್ಮದಿನದಂದು ದರ್ಶನ್ ಗೆ ಶುಭ ಕೋರಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾಗ ನೂಕುನುಗ್ಗಲು ಉಂಟಾಗಿದೆ.

ಆಗ, ಪಕ್ಕದ ಮನೆ ಅವರ ಕಾರೊಂದು ಜಖಂಗೊಂಡಿದೆ. ಇದರಿಂದ ಬೇಸೆತ್ತ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಿವಾಸಿ ರಾಮಪ್ರಸಾದ್.ಎಂ.ಎಸ್ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ದರ್ಶನ್ ಗೆ ವಿಶ್ ಮಾಡಲು ಬಂದ ಅಭಿಮಾನಿಗಳು ರಾಮಪ್ರಸಾದ್.ಎಂ.ಎಸ್ ಗೆ ಸೇರಿದ ಕಾರನ್ನು ಜಖಂಗೊಳಿಸಿದ್ದಾರೆ. ರೋಡಿನಲ್ಲಿ ನಿಲ್ಲಿಸಿದ್ದ ರಾಮಪ್ರಸಾದ್.ಎಂ.ಎಸ್ ರವರಿಗೆ ಸೇರಿದ ಕಾರನ್ನು ಹತ್ತಿ, ಕಾರಿನ ಮೇಲೆಲ್ಲಾ ಗೀಚಿ ಅಭಿಮಾನಿಗಳು ರಂಪಾಟ ಮಾಡಿದ್ರಂತೆ.

ಇದರಿಂದ 40 ಸಾವಿರ ರೂಪಾಯಿ ನಷ್ಟ ಉಂಟಾಗಿದೆ ಎಂದು ರಾಮಪ್ರಸಾದ್.ಎಂ.ಎಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವುದು ಗೊತ್ತಿದ್ದರೂ, ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ಬ್ಯಾರಿಕೇಡ್ ವ್ಯವಸ್ಥೆ ಮಾಡಿರಲಿಲ್ಲ. ಆದ್ದರಿಂದ, ಈ ಘಟನೆ ನಡೆದಿದೆ ಎಂಬುದು ರಾಮಪ್ರಸಾದ್.ಎಂ.ಎಸ್ ರವರ ಆರೋಪ. ಹೀಗಾಗಿ, ಬರ್ತಡೇ ಆಯೋಜನೆ ಮಾಡಿದವರು ಮತ್ತು ಅಭಿಮಾನಿಗಳ ವಿರುದ್ಧ ರಾಮಪ್ರಸಾದ್.ಎಂ.ಎಸ್ ಕಂಪ್ಲೇಂಟ್ ಕೊಟ್ಟಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು.

ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರಿಗೆ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿಸುತ್ತೇನೆ ಎಂದು ಹುಟ್ಟುಹಬ್ಬಕ್ಕೂ ಮುನ್ನ ದರ್ಶನ್ ಪದೇ ಪದೇ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಹೀಗಿದ್ದರೂ, ಕೆಲವರು ಕಾರನ್ನು ಜಖಂಗೊಳಿಸಿ ಅತಿರೇಕದ ವರ್ತನೆ ತೋರಿದ್ದಾರೆ.

ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ನಿಮ್ಮ ಸ್ನೇಹಿತರೊಂದಿಗೆ ಈ ನಮ್ಮ ಲೇಖನವನ್ನು ಶೇರ್ ಮಾಡಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಬೆಂಗಳೂರು ಪೇಜ್ ನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here