ಕಪ್ ನಮ್ದೇ ಎನ್ನುವ ಖುಷಿಯಲ್ಲಿದ್ದ RCB ತಂಡಕ್ಕೆ ನಿರಾಸೆ ಪಡಿಸಿದ ಎ ಬಿ ಡಿವಿಲಿಯರ್ಸ್

0
9787

ಭಾರತದಲ್ಲಿ ನಡೆಯುವ ಐಪಿಎಲ್ ಲೀಗ್ ಇಡೀ ವಿಶ್ವದಲ್ಲೆ ಅತೀ ದೊಡ್ಡ ಲೀಗ್ ಆಗಿ ಮುನ್ನುಡಿಯುತ್ತಿದೆ. ಐಪಿಎಲ್ ಬರುತ್ತಿದೆ ಅಂದರೆ ಸಾಕು ಅದೆಷ್ಟೋ ಅಭಿಮಾನಿಗಳಿಗೆ ಹಬ್ಬ ಇದ್ದಂತೆ. ಇಡೀ ವಿಶ್ವದಲ್ಲೇ ಹೆಚ್ಚಿನ ಅಭಿಮಾನಿಗಳು ಇರುವುದು ಐಪಿಎಲ್ ಗೆ ಮಾತ್ರ. ಅದರಲ್ಲೂ ರಾಯಲ್ ಚಾಲೆಂಜರ್ಸ್ ತಂಡಗೆ ಇರುವ ಅಭಿಮಾನಿಗಳು ಜಾಸ್ತಿ. ಯಾಕೆಂದರೆ ಜಗತ್ತಿನ ಸೂಪರ್ ಸ್ಟಾರ್ ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ, ಎ ಬಿ ಡಿವಿಲಿಯರ್ಸ್ ಅಂತಹ ಆಟಗಾರರಿದ್ದಾರೆ. ಹತ್ತು ವರ್ಷದಿಂದ ಕಪ್ ಗಾಗಿ ಕಾದು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಈಗ ಮತ್ತೊಂದು ನಿರಾಸೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ನಿರಾಸೆ ಏನಪ್ಪಾ ಅಂದರೆ ಬನ್ನಿ ಈ ನಮ್ಮ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ. ಸೂಪರ್ ಸ್ಟಾರ್ ಆಟಗಾರನಾದ
ಎ ಬಿ ಡಿವಿಲಿಯರ್ಸ್ ಈಗ ಬ್ಯಾಟಿಂಗ್ ನಲ್ಲಿ ತುಂಬಾ ವೈಫಲ್ಯ ಕಾಣುತ್ತಿದ್ದು ಬ್ಯಾಟಿಂಗ್ ಮಾಡಲು ತುಂಬಾ ಒದ್ದಾಡುತಿದ್ದಾನೆ. ಐಪಿಎಲ್ ಲೀಗ್ ನಂತರ ತುಂಬಾ ಪೇಮಸ್ ಆದ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಬ್ರಿಸ್ಬೇನ್ ಹೀಟ್ ತಂಡ ಸೇರಿಕೊಂಡಿರುವ ಎ ಬಿ ಡಿವಿಲಿಯರ್ಸ್ ಸತತ ಬ್ಯಾಟಿಂಗ್ ನಲ್ಲಿ ವೈಫಲ್ಯ ಕಾಣುತ್ತಿದ್ದಾನೆ.

ಎ ಬಿ ಡಿವಿಲಿಯರ್ಸ್ ಬಂದ ನಂತರ ಬಿಗ್ ಬ್ಯಾಷ್ ನಲ್ಲಿ ಬ್ರಿಸ್ಬೇನ್ನ ಹೀಟ್ ತಂಡ ಸತತವಾಗಿ ಎರಡು ಪಂದ್ಯ ಸೋತು ಮಂಕಾಗಿದೆ. ಈ ಎರಡೂ ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಬರೀ ನಾಲ್ಕು ರನ್ ಗಳಿಸಿದ್ದಾರೆ ಅಷ್ಟೇ. ಎ ಬಿ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ಈಗೆ ಮುಂದುವರೆದರೆಈ ಸಲ ಕಪ್ ನಮ್ದೇ ಎನ್ನುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಭಾರಿ ನಿರಾಸೆವಾಗುತ್ತದೆ. ಇನ್ನು ಮೇಲೆ ಆದರೂ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ನಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಕೊಳ್ಳಬೇಕು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರೂ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದುಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here