ಮತ್ತೆ RCB ತಂಡ ಸೇರಿಕೊಳ್ಳುತ್ತಿರವ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್

0
158

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲದೇ ಅವತ್ತಿನಿಂದ ಈವತ್ತಿನ ವರೆಗೂ ಬೇಸರ ತರುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಕಳೆದ ಐಪಿಎಲ್ ನಲ್ಲಿ ಅಂತೂ ಬೆಂಗಳೂರು ತಂಡ ಹಿಂದೆ ಎಂದು ಕಾಣದ ಕಳಪೆ ಪ್ರದರ್ಶನವನ್ನ ನೀಡಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು, ಇನ್ನು ತಂಡದಲ್ಲಿ ತುಂಬಾ ಸ್ಟಾರ್ ಆಟಗಾರರು ಇದ್ದರೂ ಕೂಡ ಎಲ್ಲಾ ಪಂದ್ಯದಲ್ಲಿ ಕೊಹ್ಲಿ ಪಡೆ ಒಂದಲ್ಲ ಒಂದು ವಿಚಾರದಲ್ಲಿ ಎಡವುತ್ತಿತ್ತು. ಇನ್ನು ಕಳೆದ ಭಾರಿ ನೀಡಿದ ಕಳಪೆ ಪ್ರದರ್ಶನವನ್ನ ನೋಡಿ ಬೇಸರವನ್ನ ಮಾಡಿಕೊಂಡ ಬೆಂಗಳೂರು ತಂಡದ ಪ್ರಾಯೋಜಕರು ತಂಡದಲ್ಲಿ ಕೆಲವು ಬದಲಾವಣೆಗಳನ್ನ ಮಾಡಲು ನಿರ್ಧಾರವನ್ನ ಮಾಡಿದ್ದಾರೆ.

ಇನ್ನು ಆರ್ ಸಿ ಬಿ ತಂಡದಲ್ಲಿ ಇದ್ದ ಕೆಲವು ಆಟಗಾರರನ್ನ ತಂಡದಿಂದ ತಗೆದು ಹಾಕಿ ಕೆಲವು ಆಟಗಾರರನ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ತಂಡದ ಮುಖ್ಯಸ್ಥರು ತೀರ್ಮಾನವನ್ನ ಮಾಡಿದ್ದಾರೆ. ಇನ್ನು ಈಗ ಬೆಂಗಳೂರು ತಂಡದ ಮುಖ್ಯಸ್ಥರು ಒಬ್ಬ ಬಲಿಷ್ಠ ಆಟಗಾರರನ್ನ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧಾರವನ್ನ ಮಾಡಿದ್ದು ಇದು ಅಭಿಮಾನಿಗಳಿಗೆ ತುಂಬಾ ಸಂತಸವನ್ನ ತಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಆ ಬಲಿಷ್ಠ ಆಟಗಾರ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಆಟಗಾರನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಒಂದು ಕಾಲದಲ್ಲಿ ಬೆಂಗಳೂರು ತಂಡದಲ್ಲಿ ತನ್ನ ಭರ್ಜರಿ ಆಟದ ಮೂಲಕ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸುತ್ತಿದ್ದ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಅವರನ್ನ ಮತ್ತೆ ಬೆಂಗಳೂರು ತಂಡಕ್ಕೆ ಸೇರಿಸಿಕೊಳ್ಳಲು ತಂಡದ ಮುಖ್ಯಸ್ಥರು ತೀರ್ಮಾನವನ್ನ ಕೈಗೊಂಡಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. 2011 ರಿಂದ 2017 ರ ವರೆಗೆ ಬೆಂಗಳೂರು ತಂಡದಲ್ಲಿ ಏಳು ಆವೃತ್ತಿಗಳಲ್ಲಿ ಆಡಿದ ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಆಟಗಾರ ಮತ್ತು ಕ್ರಿಕೆಟ್ ಜಗತ್ತಿನ ದೈತ್ಯ ಆಟಗಾರ ಎಂದು ಕರೆಸಿಕೊಳ್ಳುವ ಕ್ರಿಸ್ ಗೇಲ್ ಅವರನ್ನ 11 ನೇ ಆವೃತ್ತಿಯಲ್ಲಿ ಬೆಂಗಳೂರು ತಂಡ ಕೈಬಿಟ್ಟಿತ್ತು.

ಇನ್ನು ಕೇವಲ 2 ಕೋಟಿ ರೂಪಾಯಿಯನ್ನ ಕೊಟ್ಟು ಪಂಜಾಬ್ ತಂಡ ಕ್ರಿಸ್ ಗೇಲ್ ಅವರನ್ನ ಖರೀದಿ ಮಾಡಿತ್ತು ಮತ್ತು ಕ್ರಿಸ್ ಗೇಲ್ ಅವರು ಪಂಜಾಬ್ ತಂಡದಲ್ಲಿ ಉತ್ತಮ ಪ್ರದರ್ಶನವನ್ನ ಕೂಡ ತೋರಿದರು, ಇನ್ನು ಬೆಂಗಳೂರು ತಂಡದ ಆಟಗಾರರು ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶವನ್ನ ತೋರಿದರು ಮತ್ತು ಈ ಕಾರಣಕ್ಕೆ ಮತ್ತೆ ಕ್ರಿಸ್ ಗೇಲ್ ಅವರನ್ನ ಮತ್ತೇ ಬೆಂಗಳೂರು ತಂಡಕ್ಕೆ ಕರೆತರಲು ತಂಡದ ಮುಖ್ಯಸ್ಥರು ಮತ್ತೆ ನಾಯಕ ವಿರಾಟ್ ಕೊಹ್ಲಿ ಅವರು ನಿರ್ಧಾರವನ್ನ ಮಾಡಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.ಇನ್ನು ಕ್ರಿಸ್ ಗೇಲ್ ಅವರು ಮರಳಿ ಬೆಂಗಳೂರು ತಂಡಕ್ಕೆ ಬಂದರೆ ತಂಡ ಇನ್ನಷ್ಟು ಬಲಿಷ್ಠ ಆಗುತ್ತದೆ ಮತ್ತು ತಂಡಕ್ಕೆ ಉತ್ತಮ ಆರಂಭಿಕ ಬಂದ ಹಾಗೆ ಆಗುತ್ತದೆ, ಇನ್ನು ಕ್ರಿಸ್ ಗೇಲ್ ಅವರು ಮರಳಿ ಬೆಂಗಳೂರು ತಂಡಕ್ಕೆ ಬಂದರೆ ತಂಡದ ಮೇಲೆ ಇರುವ ಕ್ರೇಜ್ ಇನ್ನಷ್ಟು ಜಾಸ್ತಿ ಆಗುವುದರಲ್ಲಿ ಈರದು ಮಾತಿಲ್ಲ, ಸ್ನೇಹಿತರೆ ನಿಮ್ಮ ಪ್ರಕಾರ ಮತ್ತೇ ಕ್ರಿಸ್ ಗೇಲ್ ಅವರು ಬೆಂಗಳೂರು ತಂಡಕ್ಕೆ ಬರಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ RCB ಅಭಿಮಾನಿಗೆ ತಲುಪಿಸಿ. ಈ ಲೇಖನ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಇನ್ನಷ್ಟು ಮಾಹಿತಿಗಳಿಗಾಗಿ ಪೇಜ್ ಲೈಕ್ ಮಾಡಿ.

LEAVE A REPLY

Please enter your comment!
Please enter your name here