ಕೊರೊನಾಗೆ ಮತ್ತೊಬ್ಬ ಖ್ಯಾತ ಕ್ರಿಕೆಟರ್ ಬಲಿ

0
520

ಭಾರತದಲ್ಲಿ ಕರೋನವೈರಸ್ ಅಟ್ಟಹಾಸ ಮುಂದುವರೆದಿದ್ದು ದಿನಕ್ಕೆ ಎಂಟರಿಂದ 9,000 ಕೇಸ್ಗಳು ದಾಖಲಾಗುತ್ತಿವೆ, ಐದಾರು ತಿಂಗಳು ಹಿಂದೆ ಚೀನಾ ದೇಶದ ವುಹಾನ್ ಎಂಬ ನಗರದಲ್ಲಿ ಕಾಣಿಸಿಕೊಂಡ ಈ ಮಹಾಮಾರಿ ವೈರಸ್ ಈಗ ಭಾರತವನ್ನು ಬೆಂಬಿಡದೆ ಕಾಡುತ್ತಿದೆ, ಭಾರತದಲ್ಲಿ ಎರಡು ಲಕ್ಷದ 15,000 ಕೇಸುಗಳು ಇಲ್ಲಿಯವರೆಗೆ ದಾಖಲಾಗಿವೆ ಹಾಗೂ ಸುಮಾರು 5,000 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 4000 ರೆಡಿಯಾಗಿದ್ದು ಸಾವಿನ ಸಂಖ್ಯೆ 54ಕ್ಕೆ ಏರಿದೆ.ಇದರಲ್ಲಿ ಬಹುತೇಕ ಕಲಬುರ್ಗಿ ಯಾದಗಿರಿ ರಾಯಚೂರಿನಲ್ಲಿ ಕೇಸುಗಳು ದಾಖಲಾಗಿವೆ.

ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಕೇವಲ 385 ಕೇಸ್ಗಳು ಇಲ್ಲಿಯವರೆಗೆ ದಾಖಲಾಗಿವೆ. ಈಗ ವಿಶೇಷ ಇರುವುದು ಬೆಂಗಳೂರಿನ ಬಗ್ಗೆ ಯಾಕೆಂದರೆ ಬನ್ನಿ ಒಮ್ಮೆ ಬೇರೆ ರಾಜ್ಯದ ದೊಡ್ಡ ದೊಡ್ಡ ನಗರದ ಕೇಸ್ ಗಳ ಬಗ್ಗೆ ನೋಡೋಣ. ಮಹಾರಾಷ್ಟ್ರದ ರಾಜಧಾನಿ ಮುಂಬೈ ನಗರವೊಂದರಲ್ಲೇ 43,100 ಕೇಸುಗಳು ಬಂದಿವೆ, ಅಬ್ಬಾ ಇದು ಊಹಿಸಲು ಸಾಧ್ಯವಾಗದಂಥ ಅಂಕಿ, ಮಹಾರಾಷ್ಟ್ರ ಹಾಗೂ ಮುಂಬೈ ನಗರ ಕರೋನವೈರಸ್ ಮಹಾಮಾರಿಗೆ ತತ್ತರಿಸಿಹೋಗಿದ್ದು ನಗರವೊಂದರಲ್ಲೇ 43,000 ಜನರಿಗೆ ಸೋಂಕು ತಗುಲಿದೆ.

ಜಗತ್ತಿನ ವಿಲನ್ ಆಗಿರುವ “ಕೊರೋನ” ವೈರಸ್ ದಾಳಿಗೆ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಸರ್ಫರಾಜ್ ಅಸುನೀಗಿ ತಿಂಗಳುಗಳು ಕಳೆಯುತ್ತಿರುವಾಗಲೇ ಮತ್ತೊಬ್ಬ ಪಾಕಿಸ್ತಾನದ ಮಾಜಿ ತಂಡದ ನಾಯಕ, ಆಟಗಾರ ರಿಯಾಜ಼್ ಶೇಖ್ (51)ಕೊರೋನ ದಾಳಿಗೆ ತುತ್ತಾಗಿದ್ದಾರೆ. ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇವರು ಈಗ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ರಶೀದ್ ಲತೀಫ್ ವಿಷಾದ ವ್ಯಕ್ತಪಡಿಸಿದ್ದಾರೆ.

ರಿಯಾಜ಼್ ಶೇಕ್ ಅವರಿಗೆ ಸೋಂಕು ತಗುಲಿದಾಗಿನಿಂದ ಎಚ್ಚರಿಕೆ ವಹಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶೇಕ್ ಅವರು ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ, ಕ್ರೆಕೆಟ್ ಕ್ಷೇತ್ರದಲ್ಲಿ ಇವರ ಸಾಧನೆ ನೋಡುವುದಾದರೆ ರಿಯಾಝ್ ಶೇಖ್ 1987ರಲ್ಲಿ ಮೊದಲ ಆಟವನ್ನಾಡಿದ್ದು 2005ರವರೆಗೆ ಫಾರ್ಮ್ ನಲ್ಲಿದ್ದು 43 ಪಂದ್ಯಗಳನ್ನು ಆಡಿದ್ದಾರೆ. ಅಂತೂ ಕೊರೋನ ಬಡವ, ಶ್ರೀಮಂತ ಅನ್ನದೆ ಸಮಾನವಾಗಿ ಎಲ್ಲರನ್ನು ಕಾಣುತ್ತಿದೆ. ಪಾಕಿಸ್ತಾನದ ಕ್ರಿಕೇಟ್ ದಿಗ್ಗಜರು ರಿಯಾಝ್ ಶೇಕ್ ಅವರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here