ಕೊರೊನದಿಂದ ತತ್ತರಿಸಿರುವ ಕರ್ನಾಟಕಕ್ಕೆ ಕೇಂದ್ರದಿಂದ ಕೊಡುಗೆ

0
228
Davanagere: Prime Minister Narendra Modi with Karnataka BJP President and chief ministerial candidate B S Yeddyurappa during the party's 'Farmers Convention' at Davanagere on Tuesday. PTI Photo by Shailendra Bhojak (PTI2_27_2018_000159B) *** Local Caption ***

ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಶುಭಸುದ್ದಿ! ಕೊರೋನ ಸೋಂಕಿತರಿಗೆ ಚಿಕಿತ್ಸೆ ಅವಶ್ಯಕವಾಗಿ ಸಿಗಬೇಕಾದರೆ ಪ್ರಮುಖವಾಗಿ ಗುಣಮಟ್ಟದ ವೆಂಟಿಲೇಟರ್ ಗಳ ಪೂರೈಕೆ ಮತ್ತು ನಿರ್ವಹಣೆ ಅತ್ಯಗತ್ಯ, ಆದರೆ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಯಲ್ಲಿ ಹೇಳಿಕೊಳ್ಳುವಷ್ಟು ವೆಂಟಿಲೇಟರ್ ಗಳ ಲಭ್ಯತೆ ಇಲ್ಲ. ಸರ್ಕಾರ ವೆಂಟಿಲೇಟರ್ ಗಳನ್ನ ಸರಿದೂಗಿಸುವುದಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಗಳನ್ನ ಕಡ್ಡಾಯವಾಗಿ ಒಂದಷ್ಟು ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಬಳಸಬೇಕು ಎಂಬ ನಿಯಮವನ್ನು ತಂದಿದ್ದಾರೆ.

ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಪ್ರಶ್ನೆ? ಪ್ರತಿಯೊಂದು ರಾಜ್ಯದ ವೆಂಟಿಲೇಟರ್ ಗಳ ಸಮಸ್ಯೆಯನ್ನು ನೀಗಿಸುವುದಕ್ಕೆ ಕೇಂದ್ರ ಸರ್ಕಾರ ಪ್ರಧಾನಿ ಮಂತ್ರಿ ಪರಿಹಾರ ನಿಧಿಯಿಂದ ದೇಶದ ಆಯಾರಾಜ್ಯದ ಅವಶ್ಯಕತೆಗೆ ತಕ್ಕಂತೆ ಬರೋಬ್ಬರಿ 2000 ಕೋಟಿಯಷ್ಟು ಖರ್ಚುಮಾಡಿ ದೇಶದಲ್ಲೇ ತಯಾರಿಸಲಾದ ಒಟ್ಟು 1300ವೆಂಟಿಲೇಟರ್ ಗಳನ್ನು ಪೂರೈಕೆ ಮಾಡಲಾಗುತ್ತಿದೆ, ಅದರಲ್ಲಿ ಪ್ರಮುಖವಾಗಿ ಕರ್ನಾಟಕಕ್ಕೆ 90ವೆಂಟಿಲೇಟರ್, ಹೆಚ್ಚು ಸೋಂಕಿತರನ್ನು ಹೊಂದಿರುವ ಮಹರಾಷ್ಟ್ರದ ಮುಂಬೈ ನಗರಕ್ಕೆ 275, ದೆಹಲಿಗೆ 275, ಬಿಹಾರಕ್ಕೆ 100 ಗುಜರಾತ್ ಗೆ 175, ಮತ್ತು ರಾಜಸ್ಥಾನಕ್ಕೆ 75ವೆಂಟಿಲೇಟರ್ ಗಳನ್ನು ತ್ವರಿತವಾಗಿ ಪೂರೈಕೆ ಮಾಡಲು ಕೇಂದ್ರಸರ್ಕಾರ ಸಜ್ಜುಗೊಂಡಿದೆ.

ಇದಲ್ಲದೆ ಬೇರೆ ರಾಜ್ಯ ಮತ್ತು ವಿವಿಧ ಜಿಲ್ಲೆಗಳಿಂದ ಬಂದು ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬಂದು ದಿನಕೂಲಿ ಮಾಡುವ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಒಂದು ಸಾವಿರ ಕೋಟಿಯನ್ನು ಮೀಸಲಿಡಲಾಗಿದ್ದು, ಕರ್ನಾಟಕಕ್ಕೆ ಕೇಂದ್ರ ಸರ್ಕಾರ 34ಕೋಟಿಯನ್ನು ನೆರವು ಘೋಷಿಸಲಾಗಿದೆ. ಒಟ್ಟಾರೆಯಾಗಿ ರಾಜ್ಯದ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ವೆಂಟಿಲೇಟರ್ ಪೂರೈಕೆ ಮಾಡಿರುವುದು ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಾಯಕಾರಿಯಾಗಿದ್ದು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳ ಕೊರತೆಗೆ ಕೇಂದ್ರದ ನೆರವು ಕೊಂಚ ಕೊಡುಗೆಯಾಗಿದೆ.

LEAVE A REPLY

Please enter your comment!
Please enter your name here