ಕೊರೋನಾ ಅಬ್ಬರದ ನಡುವೆಯೇ ದೇಶಕ್ಕೆ ಸಿಹಿ ಸುದ್ದಿ ಕೊಟ್ಟ ಅರೋಗ್ಯ ಇಲಾಖೆ

0
285
NEW DELHI, INDIA - MARCH 31: A bus driver in a protective suit before ferrying people who took part in a Tablighi Jamaat function earlier this month to a quarantine facility amid concerns of infection, on day 7 of the 21 day nationwide lockdown imposed by PM Narendra Modi to check the spread of coronavirus, at Nizamuddin West on March 31, 2020 in New Delhi, India. (Photo by Ajay Aggarwal/Hindustan Times via Getty Images)

ಕೊರೋನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರ ರುದ್ರನರ್ತನಕ್ಕೆ ಭಾರತ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳ ಬೆಲೆ ತೆರುತ್ತಲಿವೆ. ಲಾಕ್ಡೌನ್ ತೆರೆದರೂ ಕೂಡ ದೇಶ ಸಂಪೂರ್ಣವಾಗಿ ಮೊದಲಿನ ಸ್ಥಿತಿಗೆ ಬರುತ್ತಿಲ್ಲ ಅದಕ್ಕೆ ಕಾರಣ ನಮ್ಮ ನಡುವೆಯೇ ಏರುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ.

ಈ ಮಧ್ಯೇ ಕೇಂದ್ರ ಆರೋಗ್ಯ ಇಲಾಖೆ ಒಂದು ಸಂತಸದ ವಿಷಯವನ್ನು ಹಂಚಿಕೊಂಡಿದೆ, ಅದೇನೆಂದರೆ ಕಳೆದ 24 ಗಂಟೆಗಳಲ್ಲಿ 9440 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ ಅಲ್ಲದೆ ಇಲ್ಲಿಯವರೆಗೆ ಭಾರತದಲ್ಲಿ ಕೊರೋನಾ ಎಂಬ ಮಹಾಮಾರಿಗೆ ಒಳಗಾದ ಸೋಂಕಿತರ ಪೈಕಿ 237195 ರೋಗಿಗಳು ಸಂಪೂರ್ಣವಾಗಿ ಗುಣಮುಖವಾಗಿದ್ದಾರೆ ಎಂದು ತಿಳಿಸಿದೆ.

ಈ ಮಹಾಮಾರಿ ವೈರಸ್ಸಿನ ಅಬ್ಬರದ ನಡುವೆ ಆರೋಗ್ಯ ಇಲಾಖೆ ಈ ವಿಷಯ ಹಂಚಿಕೊಂಡಿರುವುದು ಎಲ್ಲರಲ್ಲಿಯೂ ಒಂದು ರೀತಿಯ ನಿರಾಳತೆಯನ್ನು ನೀಡುವುದಂತೂ ಸತ್ಯ. ಹೌದು ಇತ್ತೀಚಿನ ದಿನಗಳಲ್ಲಿ ನಮ್ಮ ಕೊರೋನಾ ವಾರಿಯರ್ಸ್ ಅವರ ಧೈರ್ಯ ಮತ್ತು ಸಹಾಯ ಮನೋಭಾವದಿಂದ ಗುಣಮುಖರಾಗುವ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಶೇಕಡವಾರು ಲೆಕ್ಕಕ್ಕೆ ಬಂದರೆ ಅದರ ಸಂಖ್ಯೆ 55.1 ಕ್ಕೆ ಬಂದು ನಿಂತಿದೆ. ಮುಂದುವರೆದು ಟ್ವೀಟ್ ನಲ್ಲಿ ಆರೋಗ್ಯ ಇಲಾಖೆ ಇನ್ನೂ 127387 ಜನ ಚಿಕಿತ್ಸೆ ಹಂತದಲ್ಲಿದ್ದು ಅವರೆಲ್ಲರೂ ಗುಣಮುಖರಾಗುವ ಎಲ್ಲ ಲಕ್ಷಣಗಳಿವೆ ಎಂದು ತಿಳಿಸಿದೆ. ಇದರ ಜೊತೆಗೆ ಜಗತ್ತಿನೆಲ್ಲೆಡ ಈ ಮಹಾಮಾರಿ ನಿರ್ಮೂಲನಕ್ಕೆ ಔಷಧಿಗಳ ಸಿದ್ಧತೆ ಭರದಿಂದ ಸಾಗಿದೆ, ಈ ಎಲ್ಲ ವಿಷಯಗಳನ್ನು ಗಮನಿಸಿದರೆ ಕೊಂಚ ಮಟ್ಟಿಗೆ ಸಮಾಧಾನ ಸಿಗುವುದಂತೂ ಸತ್ಯ.

LEAVE A REPLY

Please enter your comment!
Please enter your name here