ಪ್ರಬಲವಾಗುತ್ತಿದೆ ಚೀನಾ, ಕರೋನಾ ನಡುವೆಯೂ ಚೀನಾದ ಮೊಬೈಲ್ ಎಷ್ಟು ಮಾರಾಟವಾಗಿವೆ ಗೊತ್ತೆ

0
276
Image: 0088342930, License: Rights managed, Restrictions: WORLDWIDE RIGHTS AVAILABLE EXCLUDING CHINA, HONG KONG & FRANCE ONLY. End users shall not licence, sell, transmit, or otherwise distribute any photographs represented by eyevine, to any third party. Contact eyevine for more information: Tel: +44 (0) 20 8709, (101212) -- JIUJIANG, Dec. 12, 2010 -- Technicians examine mobile phone chips at a manufacture plant in Jiujiang, east China's Jiangxi Province, Nov. 10, 2010. The production volume of mobile phone in China in 2010 is expected to reach 700 million, accounting 60 percent of global production volume., Model Release: No or not aplicable, Credit line: Profimedia.com, Eyevine

ಕೆಂಪು ಡ್ರ್ಯಾಗನ್ ಚೀನಾ ರಾಷ್ಟ್ರ ಹೆಚ್ಚು-ಕಡಿಮೆ ವಿಶ್ವದ ಹಿರಿಯಣ್ಣ ಅಮೇರಿಕಾ ದೇಶದ ಸರಿಸಮವಾಗಿದೆ ಎಲ್ಲ ವಿಷಯದಲ್ಲಿ. ಅದರಲ್ಲೂ ಕಚ್ಚಾವಸ್ತುಗಳ ಮಾಡುವುದರಲ್ಲಿ ಚೀನಾ ದೇಶ ಮುಂಚೂಣಿಯಲ್ಲಿದೆ ಜಗತ್ತಿನ ಬಹುತೇಕ ಕಚ್ಚಾವಸ್ತುಗಳು ಚೀನಾದಿಂದಲೇ ಬರುತ್ತವೆ. ನಾವು ಬಳಸುವ ಮೊಬೈಲಿನಿಂದ ಹಿಡಿದು ಮೊಬೈಲ್ ಕವರ್ ತನಕ ಬಹುತೇಕ ರಾಷ್ಟ್ರಗಳು ಚೀನಾ ದೇಶದ ಮೇಲೆ ಅವಲಂಬಿತವಾಗಿವೆ, ಈ ಕಾರಣದಿಂದ ಚೀನಾದೇಶವು ಪ್ರತಿವರ್ಷ ತನ್ನ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿ ಮಾಡಿಕೊಳ್ಳುತ್ತಲೇ ಇದೆ ಹೆಚ್ಚುಕಡಿಮೆ ಎಲ್ಲಾ ಉತ್ಪನ್ನಗಳ ಮೇಲೆ ಮೇಡ್ ಇನ್ ಚೈನಾ ಎಂದು ನೋಡುತ್ತೇವೆ.

ಈ ನಡುವೆ ಮೊಬೈಲ್ ಮಾರಾಟಗಳ ಅಂಕಿ-ಅಂಶಗಳು ಹೊರಬಂದಿದ್ದು ಇದರಲ್ಲೂ ಕೂಡ ಚೀನಾದೇಶವು ಮೈಲುಗಲ್ಲು ಸಾಧಿಸುತ್ತಿದೆ. ನಮಗೆಲ್ಲಾ ಗೊತ್ತಿರುವ ಪ್ರಕಾರ ಬಹುತೇಕ ರಾಷ್ಟ್ರಗಳಲ್ಲಿ ಹಾಗೂ ನಮ್ಮ ಭಾರತ ದೇಶದಲ್ಲಿಯೂ ಸಹ ಕಂಪನಿಯ ರೆಡ್ಮಿ ಮೊಬೈಲ್ ಗಳು ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಸದ್ಯ ಭಾರತದಲ್ಲಿ ಕಡಿಮೆಯೆಂದರೂ ಅರ್ಧದಷ್ಟು ಜನ ಶಿಯೋಮಿ ಕಂಪನಿಯ ಮೊಬೈಲ್ ಗಳನ್ನು ಬಳಸುತ್ತಿದ್ದಾರೆ. ಕಳೆದವಾರ ಭಾರತೀಯರು ಚೀನಾ ದೇಶದ ಟಿಕ್ ಟಾಕ್ ಆಪ್ ಅನ್ನು ಬಹಿಷ್ಕರಿಸಬೇಕೆಂದು ಮೊಬೈಲ್ ಇಂದ ಡಿಲೀಟ್ ಮಾಡಿದ್ದರು.

ಯಾಕಂದರೆ ಮೇಡ್ ಇನ್ ಚೈನಾ ಬದಲು ಮೇಡ್ ಇನ್ ಇಂಡಿಯಾ ಆಗಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಕನಸು. ಕೊರೋನಾದ ಸಲುವಾಗಿ ಮೊಬೈಲ್ ಜಗತ್ತಿನಲ್ಲಿ ಮಾರಾಟಗಳು ತೀರ ಕುಸಿದಿದ್ದು ಬಹುತೇಕ ಎಲ್ಲಾ ಕಂಪನಿಯ ಮೊಬೈಲ್ ಗಳ ಮಾರಾಟ ಕುಸಿದಿದ್ದು ಚೀನಾ ಕಂಪನಿಯಾದ ಶಿಯೋಮಿ ಮೊಬೈಲ್ಗಳ ಮಾರಾಟ ಮಾತ್ರ ಏರಿದೆ.

ಹೌದು ಇದು ಆಶ್ಚರ್ಯವೆನಿಸಿದರೂ ಸತ್ಯ ಮೊಬೈಲ್ಗಳ ಗುಣಮಟ್ಟ ಹಾಗೂ ಅವುಗಳು ಭಾರತೀಯರ ಕೈಗೆಟುಕುವ ದರದಲ್ಲಿ ಇರುವುದರಿಂದ ಭಾರತದಲ್ಲಿ ಸಾಕಷ್ಟು ಮಾರಾಟವಾಗುತ್ತಿವೆ. ಶ್ರೇಷ್ಠ ಮೊಬೈಲ್ ಆದ ಆಪಲ್ ಐಫೋನ್ ಮಾರಾಟದಲ್ಲಿ 9% ಕುಸಿತಗೊಂಡಿದೆ ಹಾಗೂ ಸ್ಯಾಮ್ಸಂಗ್ ಮೊಬೈಲ್ ಮಾರಾಟದಲ್ಲಿ ಶೇಕಡ 22 ರಷ್ಟು ಕುಸಿತ ಕಂಡಿದೆ ಆದರೆ ಮಾತ್ರ ಸುಮಾರು ಶೇಕಡಾ ಎರಡರಷ್ಟು ಏರಿಕೆ ಕಂಡಿದ್ದು ಮೊಬೈಲ್ ಜಗತ್ತಿನಲ್ಲಿ ಚೀನಾದ ದೇಶದ ಪ್ರಾಬಲ್ಯ ಎಷ್ಟಿದೆ ಎಂದು ಇದರಿಂದ ಸಾಬೀತಾಗುತ್ತದೆ.

LEAVE A REPLY

Please enter your comment!
Please enter your name here