ಕೊರೊನ ಎಫೆಕ್ಟ್, ತರಕಾರಿಗಳನ್ನು ಯಾವ ರೀತಿ ತೊಳೆದು ಬಳಸಬೇಕು ನೋಡಿರಿ

0
83

ಕೊರೋನ ವೈರಸ್ ತನ್ನ ವ್ಯಾಪ್ತಿಯನ್ನು ದಿನಕಳೆದಂತೆ ದೇಶದಾದ್ಯಂತ ವಿಸ್ತರಿಸಿಕೊಳ್ಳುತ್ತಿದೆ, ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಇಂದೆಂದು ಕಂಡರಿಯದಂತಹ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಕೊರೋನ ವೈರಸ್ ಆರಂಭದಲ್ಲಿ ದಿನವೊಂದಕ್ಕೆ ಸೋಂಕಿತರ ಸಂಖ್ಯೆ ಒಂದಂಕಿಯಿಂದ ಆರಂಭವಾಗಿ ಈಗ ಮೂರಂಕಿವರೆಗೆ ತಲುಪಿದೆ. ರಾಜ್ಯದಲ್ಲಿ ದಿನೇದಿನೇ ಕೊರೋನ ವೈರಸ್ 5ರಿಂದ 10ಜನ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಸಧ್ಯದ ಪರಿಸ್ಥಿತಿ ಹೀಗಿರುವಾಗ ಜನಸಾಮಾನ್ಯರು ಮನೆಯಿಂದ ಹೊರಬರಲು ಎದುರುತ್ತಿದ್ದಾರೆ, ಜನರು ತಮ್ಮ ತಮ್ಮ ರಸ್ತೆಗಳಿಗೆ ಬೇರೆಯವರು ಬರದಂತೆ ಸ್ವತಃ ತಾವೇ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಿಕೊಂಡಿದ್ದಾರೆ.

ಜನರಿಗೆ ಇನ್ನೊಂದು ಪ್ರಮುಖ ಸಮಸ್ಯೆ ಏನೆಂದರೆ ಕೆಲವು ದಿನಗಳಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಕೆಲವು ದುಷ್ಕರ್ಮಿಗಳು ಹಣ್ಣು ತರಕಾರಿಗಳಿಗೆ ಉಗುಳು ಸವರುವುದು ಇತ್ಯಾದಿ ಹೇಡಿತನದ ಚಟುವಟಿಕೆಗಳು ನಡೆದಿದ್ದವು. ಆದಕಾರಣ ತಾವು ಪ್ರತಿನಿತ್ಯ ಕೊಳ್ಳುವ ತರಕಾರಿಗಳು ಮತ್ತು ಹಣ್ಣು ಹಂಪಲುಗಳ ಶುದ್ದತೆ ಬಗ್ಗೆ ಗುಣಮಟ್ಟದ ಬಗ್ಗೆ ಜನರು ಆತಂಕ ಪಡುವಂತಾಗಿದೆ, ಇನ್ನೊಂದಡೆ ಇಂತಹ ಕೆಲವು ಅನುಮಾನಗಳಿಗೆ ಪರಿಹಾರವು ಸಹ ಸಿಕ್ಕಿದೆ ಅವುಗಳು ಕೆಳಗಿನಂತಿವೆ‌.

ನೀವು ತರಕಾರಿ ಕೊಂಡಾಗ ಒಂದು ಪಾತ್ರೆಗೆ ನೀರನ್ನು ಹಾಕಿ ಬಿಸಿ ಮಾಡಿಕೊಂಡು ತುಸು ಉಪ್ಪು ನೀರಿನಿಂದ ತರಕಾರಿಯನ್ನು ತೊಳೆದುಕೊಳ್ಳಬಹುದು, ತದನಂತರ ಅದನ್ನು ಸ್ವಲ್ಪ ಹೊತ್ತು ಆರಿಸಿ ಅಡುಗೆಗೆ ಬಳಸಬಹುದು. ಮತ್ತೊಂದು ಸುಲಭವಾದ ಕೆಲಸವೆಂದರೆ ಬೆಚ್ಚಗಿನ ನೀರಿಗೆ ಬೇಕಿಂಗ್ ಸೋಡ ಹಾಕಿ ಐದತ್ತು ನಿಮಿಷಗಳ ಕಾಲ ಹಣ್ಣು ತರಕಾರಿಗಳನ್ನು ಅದರಲ್ಲಿ ಇಟ್ಟು ಸ್ವಚ್ಛಗೊಳಿಸಿದ ನಂತರ, ತರಕಾರಿಗಳನ್ನು ಬಳಸಿದರೆ ನಿಮ್ಮ ಅನುಮಾನಗಳಿಗೆ ವಿರಾಮ ಕೊಟ್ಟು ನಿಶ್ಚಿಂತೆಯಿಂದ ಮುಕ್ತವಾಗಿ ಹಣ್ಣು ತರಕಾರಿಯನ್ನು ಉಪಯೊಗಿಸಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

LEAVE A REPLY

Please enter your comment!
Please enter your name here