ಚಹಾ ಕುಡಿದ ಮೇಲೆ ಚಹಾಪುಡಿಯನ್ನು ಬಿಸಾಕುವವರು ಒಮ್ಮೆ ಇದನ್ನು ನೋಡಿ

0
360

ನಿಮಗೊತ್ತಾ ನಮ್ಮ ಮನೆಯಲ್ಲಿರುವಂತಹ ಎಷ್ಟೋ ನಿರುಪಯುಕ್ತ ವಸ್ತುಗಳನ್ನು ನಾವು ಉತ್ತಮ ರೀತಿಯಲ್ಲಿ ಬಳಸಿದರೆ ಪ್ರಯೋಜನ ವಸ್ತುವಾಗಿ ಮಾಡಬಹುದು, ನಾವು ದಿನನಿತ್ಯ ಜೀವನದಲ್ಲಿ ಬಳಸುವಂತಹ ಎಷ್ಟು ವಸ್ತುಗಳು ಪದಾರ್ಥಗಳು ಅನಾವಶ್ಯಕ, ನಿಷ್ಪ್ರಯೋಜಕ ವಾಗಿರುತ್ತವೆ ಹಾಗೆ ಪ್ರತಿಯೊಂದು ವಸ್ತು ಕೂಡ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಅರಿಯುವುದು ನಾವು ಕಸವನ್ನು ರಸವನ್ನಾಗಿ ಪರಿವರ್ತಿಸಿದ ನಂತರವೇ ಅದು ಸಹ ಉಪಯೋಗಕ್ಕೆ ಬರುವ ವಸ್ತು ಎಂಬ ಅರಿವು ನಮಗಾಗುತ್ತದೆ. ಹಾಗೆ ನಾವು ದಿನ ಬೆಳ್ಗಗಾದರೆ ಕುಡಿಯುವ ಚಹದ ಪುಡಿಯನ್ನು ಬಳಸಿದ ನಂತರ ಬಿಸಾಡುತ್ತೇವೆ.

ಆದರೆ ಅದನ್ನು ಕೂದಲಿನ ಆರೈಕೆಗೆ ಬಳಸಬಹುದಾಗಿದೆ, ಉದಾಹರಣೆಗೆ ಸಾಮಾನ್ಯವಾಗಿ ಬಿಸಿಲಿಗೆ ಅಥವಾ ಧೂಳಿಗೆ ನಮ್ಮ ಕೂದಲುಗಳು ಒರಟಾಗುವುದು ಸಹಜ ಮತ್ತು ಕೂದಲಿನ ಕಪ್ಪು ಬಣ್ಣ ಬಿಳಿ ಬಣ್ಣ, ಕೊಂಚ ಕೆಂಚಾಗಬಹುದು ಇದಕ್ಕೆ ಪರಿಹಾರವಾಗಿ ನಾವು ಈ ಚಹದ ಪುಡಿಯನ್ನು ಬಳಸಬಹುದು. ಅದರ ವಿಧಾನ ಹೇಗೆ?ಅಂದರೆ ವಿಧಾನ ವರದಿಯನ್ನು ಸ್ವಲ್ಪ ನೀರಿಗೆ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಬಿಸಿನೀರಿಗೆ ಹಾಕಿ ಇರಿಸಿ, ತಣ್ಣಗಾದ ನಂತರ ಅದನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಬೇಕು.

ಸ್ವಲ್ಪ ಸಮಯದ ನಂತರ ನೀವು ಕೂದಲನ್ನು ಸ್ವಚ್ಛಗೊಳಿಸಬಹುದು. ಹೀಗೆ ಬಳಸಿದ ಚಹಾದ ಪುಡಿಯಿಂದಾಗಿ ಕೂದಲಿನ ಆರೈಕೆ ಮಾಡಬಹುದು, ಅದಲ್ಲದೆ ಕೆಲವರಿಗೆ ಕಾಲು ನೋವು ಮಂಡಿ ನೋವು ಸುಸ್ತಿನ ಲಕ್ಷಣವಿದ್ದರೆ ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಇದರಲ್ಲಿರುವ ಚಹಾದ ಪುಡಿಯನ್ನು ಆದರೊಳಗೆ ಹಾಕಿ ಅರ್ಧ ಗಂಟೆಯ ನಂತರ ಕಾಲನ್ನು ಅದರಲ್ಲಿ ಇರಿಸಬೇಕು.

ಇದರಿಂದ ಕಾಲಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ಸೌಗಂಧ ದ್ರವ್ಯವಾಗಿಯೂ ಸಹ ಉಪಯೋಗಿಸಬಹುದು, ಉದಾಹರಣೆಗೆ ಶೌಚಾಲಯ, ಸ್ನಾನದ ಗೃಹ ಗಳಲ್ಲಿ ಸುವಾಸನೆ ಭರಿತ ದ್ರವ್ಯವಾಗಿ ಬಳಸಲು ಸಹಾಯಕವಾಗುತ್ತದೆ. ಹೀಗೆ ಮನೆಯಲ್ಲಿ ಹಲವಾರು ನಿರುಪಯುಕ್ತ ವಸ್ತುಗಳಿಂದ ಪ್ರಯೋಜನಕಾರಿ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ. ಕಸದಿಂದ ರಸವನ್ನಾಗಿ ಪರಿವರ್ತಿಸುವ ಚಾಕಚಕ್ಯತೆ ಇದ್ದರೆ ಎಲ್ಲವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here