ಬ್ರೇಕಿಂಗ್ ನ್ಯೂಸ್! ಕೆಜಿಎಫ್ – 2 ರಿಲೀಸ್ ಡೇಟ್ ಫಿಕ್ಸ್ ಯಾವಾಗ ಬಿಡುಗಡೆ ಗೊತ್ತಾ? ಖುಷಿಯಲ್ಲಿ ಅಭಿಮಾನಿಗಳು

0
5580

ಕನ್ನಡ ಚಲಚಿತ್ರದ ದೊಡ್ಡ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾಗಳು ಮಾತ್ರವಲ್ಲದೆ ಅವರ ಹುಟ್ಟುಹಬ್ಬ ಕೂಡ ದಾಖಲೆ ಬರೆದಿವೆ, ಬರೋಬ್ಬರಿ ಐದು ಸಾವಿರ ಕೆಜಿ ತೂಕದ ಕೇಕ್ ಕತ್ತರಿಸುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ರಾಕಿಂಗ್ ಹಬ್ಬ ಎಂಬ ಹೆಸರಿನಲ್ಲಿ ಇಡೀ ಕಾರ್ಯಕ್ರಮ ನಡೆದಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ದಾಖಲೇನೆ ಸರಿ. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.

ಕೆಜಿಎಫ್ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರು ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದರು. ಕೆಜಿಎಫ್ ಚಾಪ್ಟರ್ 1 ಚಿತ್ರ ಬಾಕ್ಸಾಫೀಸ್ ದಲ್ಲಿ 250+ ಕೋಟಿ ಕಲೆಕ್ಷನ್ ಮಾಡಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ದೊಡ್ಡ ದಾಖಲೆಯನ್ನೇ ಮಾಡಿತ್ತು. ಇನ್ನು ಈಗ ಕೆಜಿಎಫ್ ಚಾಪ್ಟರ್ 2 ದೇ ಎಲ್ಲೆಡೆ ಸದ್ದಾಗುತ್ತಿದೆ. ಹಾಗಾದ್ರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಗೊತ್ತಾ? ಈಗಾಗಲೇ ಕೆಜಿಎಫ್ ಚಪ್ಟರ್ ಟು ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಇನ್ನೂ ಜಾಸ್ತಿ ನಿರೀಕ್ಷೆ ಹುಟ್ಟಿಸಿದೆ.

ಇನ್ನು ಕೆಜಿಎಫ್ ಚಾಪ್ಟರ್ ಟು ಚಿತ್ರದ 70% ಚಿತ್ರದ ಶೂಟಿಂಗ್ ಮುಗಿದಿದೆ. ಕೆಜಿಎಫ್ ಚಾಪ್ಟರ್ ಟು ಚಿತ್ರದ ಚಿತ್ರೀಕರಣ ಎಪ್ರಿಲ್ ತಿಂಗಳಲ್ಲಿ ಮುಗಿಯಲಿದೆ. ಕೆಜಿಎಫ್ ಚಾಪ್ಟರ್ ಟು ಸಿನಿಮಾ ದೀಪಾವಳಿಗೆ ಅಥವಾ ಕ್ರಿಸ್ ಮಸ್ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನೀವು ಕೂಡ ಕೆಜಿಎಫ್ ಚಾಪ್ಟರ್ ಟು ಸಿನಿಮಾ ನೋಡಲು ಕಾಯುತ್ತಿದ್ದರೆ ಕಮೆಂಟ್ ಮಾಡಿ ತಿಳಿಸಿ. ನಿಮಗೆ ಈ ನಮ್ಮ ಲೇಖನ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಮೆಂಟ್ ಬಾಕ್ಸ್ ನಲ್ಲಿ ತಪ್ಪದೆ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here