ಬಾಲಿವುಡ್ ಚಿತ್ರರಂಗದ ಮೋಸಕ್ಕೆ ಬಲಿಯಾದ ನಾರಾಯಣ, ಹಿಂದಿಯವರು ಮಾಡಿದ್ದೇನು ಗೊತ್ತೇ

0
686

ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಕನ್ನಡಿಗರಿಗೆ ಹೇಳಲೇ ಬೇಕಿಲ್ಲ ಯಾಕೆಂದರೆ ಅಷ್ಟು ಚಿರಪರಿಚಿತ ಈ ಹೆಸರು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಕೆಜಿಎಫ್ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು ಅದರಂತೆಯೇ ಭರ್ಜರಿ ಯಶಸ್ಸನ್ನು ಗಳಿಸಿದೆ. ಕೆಜಿಎಫ್ ಚಿತ್ರದ ನಂತರ ಇದು ಎರಡನೇ ಕನ್ನಡ ಚಿತ್ರ ಇಡೀ ಐದು ಭಾಷೆಗಳಲ್ಲಿ ಮೂಡಿಬಂದಿದ್ದು, ಅಂದುಕೊಂಡಂತೆ ಕಳೆದ ಡಿಸೆಂಬರ್ ಅಲ್ಲಿ ಥೀಯೇಟರ್ ಅಲ್ಲಿ ಅಪ್ಪಳಿಸಿದ ನಾರಾಯಣ ಎಲ್ಲರ ಮೆಚ್ಚುಗೆಯನ್ನೂ ಸಹ ಪಡೆದಿದೆ.

ಈಗಾಗಲೇ ಕನ್ನಡ ತಮಿಳು ತೆಲುಗು ಹಾಗು ಮಲಯಾಳಂ ಅವತರಣಿಕೆಗಳು ಬಿಡುಗಡೆ ಆಗಿ ಎಲ್ಲರ ಮನಸ್ಸನ್ನು ಗೆದ್ದಿವೆ. ಆದರೆ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಈಗ ಬಹುದೊಡ್ಡ ಕಷ್ಟವೊಂದು ಬಂದಿದೆ, ಹಿಂದಿಯಲ್ಲಿ ಅವನೇ ಶ್ರೀಮನ್ನಾರಾಯಣನ ದರ್ಶನ ಆಗುತ್ತಿಲ್ಲ. ಇದರಿಂದ ಹಿಂದಿ ಪ್ರೇಕ್ಷಕರು ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಸದ್ಯಕ್ಕೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ದಕ್ಷಿಣ ಭಾರತದಲ್ಲಿ ಸಂಚರಿಸಿದ ಅವನೇ ಶ್ರೀಮನ್ನಾರಾಯಣ ಉತ್ತರದ ಪ್ರವೇಶಕ್ಕೆ ಅಡ್ಡಿಯಾಗಿದ್ದೇನು.

ಹಿಂದಿ ಬಿಡುಗಡೆಗೆ ಎದುರಾದ ವಿಘ್ನ ಏನು ಎಂಬುದರ ಬಗ್ಗೆ ಮುಂದೆ ಓದಿ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಜನವರಿ 17 ರಂದು (ಈ ವಾರ) ಅವನೇ ಶ್ರೀಮನ್ನಾರಾಯಣ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ ಈಗ ಅವನೇ ಶ್ರೀಮನ್ನಾರಾಯಣ ಸಿನಿಮಾ ಹಿಂದಿಯಲ್ಲಿ ರಿಲೀಸ್ ಆಗುತ್ತಿಲ್ಲ. ಇದು ರಕ್ಷಿತ್ ಶೆಟ್ಟಿಯ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದೆ, ಸೋಶಿಯಲ್ ಮೀಡಿಯಾ ಅಲ್ಲಿ ಉತ್ತರ ಭಾರತದ ಅಭಿಮಾನಿಗಳು ಬೇಗ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ.

ಇದರ ಬಗ್ಗೆ ಪುಷ್ಕರ್ ಅವರು ಹೇಳಿಕೆ ಕೊಟ್ಟಿದ್ದು ತಾಂತ್ರಿಕ ಕೆಲಸಗಳಿಂದಾಗಿ ಅವನೇ ಶ್ರೀಮನ್ನಾರಾಯಣ ಹಿಂದಿಯಲ್ಲಿ ಸ್ವಲ್ಪ ತಡವಾಗಿ ಬಿಡುಗಡೆ ಆಗುತ್ತಿದೆ ಎಂದು, ರಕ್ಷಿತ್ ಶೆಟ್ಟಿ ಅವರೂ ಕೂಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಒಂದನ್ನು ಹಾಕಿ ಹಿಂದಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದರು. ಆದರೆ ಇದು ಹೆಸರಿಗಷ್ಟೇ ಕಾರಣವೇ ಬೇರೆ ಇದೆ.

ಈಗ ಅವನೇ ಶ್ರೀಮನ್ನಾರಾಯಣಕ್ಕೆ ಆಗಿರುವ ಅನ್ಯಾಯ ಹಿಂದಿ ಚಿತ್ರರಂಗದಿಂದ, ಇದಕ್ಕೆ ಕಾರಣ ಅಲ್ಲಿನ ಕೆಲ ನಿರ್ಮಾಪಕರು ಹಾಗು ವಿತರಕರು. ಅಲ್ಲಿನ ಕೆಲ ನಿರ್ಮಾಪಕರು ಹಾಗು ವಿತರಕರು ಚಿತ್ರರಂಗವನ್ನು ಹಿಡಿತದಲ್ಲಿಟ್ಟುಕೊಂಡಿದ್ದು ಹಿಂದಿಯಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಕೊಂಡುಕೊಳ್ಳಲು ಯಾವ ವಿತರಕನೂ ಮುಂದೆ ಬರುತ್ತಿಲ್ಲ, ಇದಕ್ಕೆ ಇನ್ನೊಂದು ಕಾರಣ ಎಲ್ಲಿ ದಕ್ಷಿಣ ಭಾರತದ ಚಿತ್ರಗಳು ಇಲ್ಲಿ ಆಕ್ರಮಿಸಿಕೊಳ್ಳುತ್ತವೆ ಎಂದು.

ಬಾಲಿವುಡ್ ಅಲ್ಲಿ ಆಗುತ್ತಿರುವ ಕೆಲ ಘಟನೆಗಳಿಂದ ಅವನೇ ಶ್ರೀಮನ್ನಾರಾಯಣದಂತಹ ಉತ್ತಮವಾದ ಚಿತ್ರಗಳು ಬಲಿಯಾಗಿ ಹೆಸರೇ ಹೇಳದಂತೆ ಹೋಗುತ್ತಿವೆ, ಕೆಜಿಎಫ್ ಚಿತ್ರದ ಸಮಯದಲ್ಲೂ ಹಾಗೆ ಸ್ವಲ್ಪ ಗೊಂದಲವಾಗಿತ್ತು. ಕೆಜಿಎಫ್ ದಕ್ಷಿಣ ಭಾರತದ ಚಿತ್ರವಾಗಿದ್ದರಿಂದ ಅಲ್ಲಿನ ವಿತರಕರು ಬೇಗ ಚಿತ್ರವನ್ನು ಕೊಂಡಿಕೊಳ್ಳಲು ಹಿಂದೇಟು ಹಾಕಿದ್ದರು. ಈ ವಿಷಯದ ಬಗ್ಗೆ ಕನ್ನಡಿಗರು ಎಲ್ಲರು ಸ್ವಲ್ಪ ಆಲೋಚಿಸಬೇಕು.

ಕನ್ನಡಿಗರಿಗೆ ಪ್ರತಿಯೊಂದು ವಿಚಾರದಲ್ಲೂ ಮೋಸ ನಡೀತಾನೇ ಇದೆ. ಈ ಲೇಖನವನ್ನು ಆದಷ್ಟು ಕನ್ನಡಿಗರಿಗೆ ತಲುಪುವರೆಗೂ ಶೇರ್ ಮಾಡಿ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ನಿಮ್ಮ ಸ್ನೇಹಿತರೊಂದಿಗೆ ಈ ನಮ್ಮ ಲೇಖನವನ್ನು ಹಂಚಿಕೊಳ್ಳಿ. ಇನ್ನಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಬೆಂಗಳೂರು ಪೇಜ್ ನ್ನು ತಪ್ಪದೆ ಲೈಕ್ ಮಾಡಿ ಮತ್ತು ನಮ್ಮಂತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ.

LEAVE A REPLY

Please enter your comment!
Please enter your name here