ಬಿಗ್ ಬಾಸ್ ಆಟದಲ್ಲಿ ಬಿದ್ದು ರಕ್ತ ಬರಿಸಿಕೊಂಡ ದೀಪಿಕಾ ದಾಸ್

0
243

ಈಸಲದ ಕನ್ನಡದ ಬಿಗ್ ಬಾಸಿನ ಏಳನೇ ಸೀಸನ್ ಹಲವಾರು ಕಾರಣಗಳಿಂದ ಬಹಳಷ್ಟು ಕುತೂಹಲ ಮೂಡಿಸಿದೆ,ಈ ಸಲ ಮನೆಯಲ್ಲಿ ವಿವಾದ ಜಗಳಗಳು ಅಷ್ಟೇನಿಲ್ಲದಿದ್ದರೂ ಪ್ರತಿಯೊಬ್ಬ ಸ್ಪರ್ಧಿ ಭಾರಿ ಪೈಪೋಟಿ ನೀಡುತ್ತಿದ್ದಾರೆ,ನಿನ್ನೆಯಷ್ಟೇ ನಡೆದ ಟಾಸ್ಕ್ ಅಲ್ಲಿ ದೀಪಿಕಾ ದಾಸ್ ಬಿದ್ದು ರಕ್ತ ಬಾರಿಸಿಕೊಂಡಿದ್ದಾರೆ.ಅದೇನಂತ ಹೇಳ್ತಿವಿ ಅದಕ್ಕಿಂತ ಮುಂಚೆ ವಾರಗಳ ಹಿಂದೆ ಮನೆಯಿಂದ ಹೊರಗಡೆ ಬಂದಿರುವ ಚೈತ್ರಾ ಅವರ ಹೊಸ ಸುದ್ದಿ ನೋಡಿ ಇಲ್ಲಿ ಕರ್ನಾಟಕದಲ್ಲಿ ಚೈತ್ರಾ ಕೊಟ್ಟೂರು ಅಂದ್ರೆ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ ಯಾಕೆಂದರೆ ಅವರು ಈಗ ಅಷ್ಟು ಫೇಮಸ್ ಆಗಿದ್ದಾರೆ,ಚೈತ್ರಾ ಕೊಟ್ಟೂರು ಅವರು ಕನ್ನಡದಲ್ಲಿ ಮೂಡಿಬರುತ್ತಿರುವ ಏಳನೇ ಸೀಸನ್ ಅಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.ಹಾಗೆಯೇ ಚೈತ್ರಾ ಕೊಟ್ಟೂರ್ ಅವರು ಬಹಳ ಅಭಿಮಾನಿಗಳನ್ನು ಗಳಿಸುವುದಲ್ಲದೆ ಅದರಂತೆಯೇ ಬಹಳ ವಿರೋಧಿಗಳನ್ನೂ ಸಹ ಗಳಿಸಿದ್ದಾರೆ.

ಚೈತ್ರಾ ಅವರ ನೇರ ನಡೆ ನುಡಿಗಳಿಂದ ಎಷ್ಟೋ ಜನ ಅವರಿಗೆ ಫ್ಯಾನ್ ಆಗಿ ಹೋಗಿದ್ದಾರೆ ಅಷ್ಟೇ ಅಲ್ಲದೆ ಈಸಲದ ಬಿಗ್ ಬಾಸ್ ಅಲ್ಲಿ ಮರುಜನ್ಮ ಪಡೆದು ಎಲಿಮಿನೇಟ್ ಆಗಿದ್ದರು ಮತ್ತೆ ಬಿಗ್ ಬಾಸ್ಗೆ ಹೋಗುವ ಅವಕಾಶ ಗಿಟ್ಟಿಸಿಕೊಂಡಿದ್ದ ಏಕೈಕ ಸ್ಪರ್ಧಿ ಅಂದರೆ ಅದು ಚೈತ್ರಾ ಕೊಟ್ಟೂರು ಅವರು. ಇನ್ನು ಹಿರಿಯ ಬರಹಗಾರ ಹಾಗು ಬಿಗ್ ಬಾಸ್ನ ಮಾಜಿ ಸ್ಪರ್ಧಿ ಆಗಿರುವ ಪತ್ರಕರ್ತ ರವಿ ಬೆಳೆಗೆರೆ ಅವರು ಚೈತ್ರಾ ಕೊಟ್ಟೂರು ಅವರ ಕುರಿತು ಮಾತನಾಡಿದ್ದಾರೆ ಹಾಗು ಚೈತ್ರಾ ಅವರೇ ರವಿ ಬೆಳಗೆರೆ ಅವರ ಆಫೀಸಿಗೆ ಭೇಟಿ ಆಗಿ ರವಿ ಬೆಳಗೆರೆ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ರವಿ ಬೆಳಗೆರೆ ಅವರು ಒಂದು ಕೃತಿಯನ್ನು ಆಧರಿಸಿ ಚಿತ್ರ ಅಥವಾ ಧಾರಾವಾಹಿಯನ್ನು ಮಾಡಲು ನಿರ್ಧರಿಸದ್ದು ಚೈತ್ರಾ ಅವರಿಗೆ ಆಫರ್ ನೀಡಿದ್ದಾರಂತೆ,ಹಾಗಾದರೆ ಇದನ್ನು ಚೈತ್ರ ಕೊಟ್ಟೂರ್ ಅವರು ಒಪ್ಪಿದಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗುವುದು ಖಚಿತವಾಗುತ್ತೆ.ಬಿಗ್ ಬಾಸ್ ಮನೆಯಲ್ಲಿ ಜಗಳ ಗಾಯ,ಬಿಗ್ಬಾಸ್ ಮನೆಯಲ್ಲಿ ಯುದ್ದಕಾಂಡ ಲಕ್ಸುರಿ ಬಜೆಟ್ ಟಾಸ್ಕ್ನಲ್ಲಿ ವಿವಿಧ ಹಂತದ ಸವಾಲುಗಳನ್ನು ನೀಡಲಾಗಿತ್ತು.ಈ ಆಟದಲ್ಲಿ ಸ್ಪರ್ದಾಳು ದೀಪಿಕಾದಾಸ್ ಅವರಿಗೆ ಗಾಯವಾಗಿದೆ.ಹೌದು ಗೆಲುವಿಗಾಗಿ ಕಿಶನ್ ಮತ್ತು ಹರೀಶ್ ರಾಜ್ ತಂಡಗಳ ನಡುವೆ ಭಾರಿ ಪೈಪೋಟಿ ನಡದಿತ್ತು,ಈ ಆಟದ ನಡುವೆ ಕಿಶನ್ ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ ಎಂದು ಕುರಿ ಪ್ರತಾಪ್ ಮತ್ತು ಹರೀಶ್ ರಾಜ್ ಅಸಮಾಧಾನ ಹೊರ ಹಾಕಿದ್ದಾರೆ.

ಭೂಮಿ ಶೆಟ್ಟಿಯನ್ನು ಕಿಶನ್ ತಳ್ಳಿದ ವಿಚಾರವೇ ಈ ಮಾತಿನ ಚಕಮಕಿಗೆ ಕಾರಣವಾಗಿದೆ,ಆಟದಲ್ಲಿ ಹರೀಶ್ ರಾಜ್ ರನ್ನು ತಡೆಯುವ ಪ್ರಯತ್ನದಲ್ಲಿ ದೀಪಿಕಾದಾಸ್ ರವರ ತುಟಿಗೆ ಗಾಯವಾಗಿ ರಕ್ತ ಬಂದಿದೆ.ಕಿಶನ್ ಮತ್ತು ಹರೀಶ್ ರಾಜ್ ನೇತೃತ್ವದಲ್ಲಿ ಢಮರುಗ ಮತ್ತು ಗರುಡ ತಂಡಗಳ ನಡುವೆ ಗೆಲುವಿಗಾಗಿ ಪೈಪೋಟಿ ನಡೆದಿದೆ.ಬಿಗ್ಬಾಸ್ ಮನೆಗೆ ಬಂದ್ದಿದ್ದ ವಾಸುಕಿ ಯವರ ತಾಯಿ ಚೆನ್ನಾಗಿ ಆಡಿ ಗೆಲ್ಲುವಂತೆ ಸಲಹೆ ನೀಡಿ ಬಂದ್ದಿದ್ದಾರೆ.ಎಲ್ಲರೂ ಚೆನ್ನಾಗೆ ಆಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,ತಾಯಿ ಬಂದು ಹೋದ ಬಳಿಕ ಮಾತನಾಡಿದ ವಾಸುಕಿ ಟಿಪಿಕಲ್ ಮದರ್ ಸ್ಟೈಲ್ ನಲ್ಲಿ ಅಡ್ವೈಸ್ ನೀಡಿದ್ದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here