ಭಾರತದಲ್ಲಿ ಯಾವ ರಾಜಕಾರಣಿಯನ್ನು ಜಾಸ್ತಿ ಜನರು ಇಷ್ಟಪಟ್ಟಿದ್ದಾರೆ ಎಂಬ ಸಮೀಕ್ಷೆ, ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತೆ

0
655

ಭಾರತದಲ್ಲಿ ಘೋಷಣೆಯಾಗಿ ಸುಮಾರು ಎರಡುವರೆ ತಿಂಗಳುಗಳೇ ಕಳೆದವು ಇದರಿಂದ ಚಟುವಟಿಕೆಗಳು ಎಲ್ಲಾ ಸ್ತಬ್ಧವಾಗಿವೆ, ಇದರ ಮಧ್ಯೆ ಸಿ ಓಟರ್ ಎಂಬ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದ್ದು ಇದರಲ್ಲಿ ಯಾರು ಜನರ ಮೆಚ್ಚಿನ ರಾಜಕಾರಣಿ ಎಂಬ ಸಮೀಕ್ಷೆಯಲ್ಲಿ ವಿಶೇಷವಾದ ಫಲಿತಾಂಶ ಬಂದಿದೆ. ಬನ್ನಿ ಹಾಗಾದರೆ ಆದರೆ ನೋಡೋಣ ಯಾವ ರಾಜಕಾರಣಿ ಜನಮೆಚ್ಚಿದ ರಾಜಕಾರಣಿ ಅಂತ. ರಾಹುಲ್ ಗಾಂಧಿ ಅವರಿಗೆ ಮೂರು ರಾಜ್ಯಗಳಲ್ಲಿ ಅತಿಹೆಚ್ಚಿನ ಅಭಿಮಾನಿಗಳು ಇದ್ದಾರೆ ಹಾಗೂ ಮೋದಿಯವರಿಗೂ ಕೂಡ ಅನೇಕ ರಾಜ್ಯಗಳಲ್ಲಿ ಅಭಿಮಾನಿಗಳು ಇದ್ದಾರೆ, ಹಾಗಾದರೆ ಯಾವ ರಾಜ್ಯದಲ್ಲಿ ರಾಹುಲ್ ಅವರಿಗೆ ಹಾಗೂ ಮೋದಿಯವರನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಯೋಣ ಬನ್ನಿ.

ಇದಕ್ಕಿಂತ ಮೊದಲು ರಾಜ್ಯಗಳ ಬಗ್ಗೆ ನೋಡುವುದಾದರೆ ಯಾವ ರಾಜ್ಯದ ಮುಖ್ಯಮಂತ್ರಿಗೆ ಎಷ್ಟನೇ ಸ್ಥಾನ ಬಂದಿದೆ ಹಾಗೂ ಯಾವ ಮುಖ್ಯಮಂತ್ರಿಯನ್ನು ಜನ ಮೆಚ್ಚಿದ್ದಾರೆ ಎಂದು ನೋಡೋಣ ಬನ್ನಿ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಷ್ಟನೇ ಸ್ಥಾನ ಸಿಕ್ಕಿದೆ ಎಂದು ನೋಡಿರಿ. ಒಡಿಸ್ಸಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶೇಕಡ 82.96 ಪಡೆದು ಮೊದಲ ಸ್ಥಾನದಲ್ಲಿ ನಿಂತು ಜನಮೆಚ್ಚಿದ ಮುಖ್ಯಮಂತ್ರಿಯ ಪಟ್ಟ ಪಡೆದಿದ್ದಾರೆ.

ಎರಡನೇ ಸ್ಥಾನದಲ್ಲಿ ಛತ್ತಿಸ್ಗಢ ಮುಖ್ಯಮಂತ್ರಿ ಆದ ಭೂಪೇಶ್ ಅವರು ಶೇಕಡ 81.06 ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು 80% ಪಡೆದು ಮೂರನೇ ಸ್ಥಾನದಲ್ಲಿದ್ದಾರೆ, ಇನ್ನು ನಾಲ್ಕನೇ ಸ್ಥಾನದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿದ್ದಾರೆ. ಐದನೇ ಸ್ಥಾನದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದ್ದು ಜನರು ಇವರ ಆಡಳಿತವನ್ನೂ ಮೆಚ್ಚಿ ಇವರಿಗೆ ಸ್ಥಾನ ನೀಡಿದ್ದಾರೆ.

ಆರನೇ ಸ್ಥಾನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇದ್ದಾರೆ ಹಾಗೂ ಏಳನೇ ಸ್ಥಾನದಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ್ ಠಾಕೂರ್ ಅವರಿದ್ದಾರೆ. ಇನ್ನು ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಂಟನೇ ಸ್ಥಾನದಲ್ಲಿದ್ದು ಶೇಕಡ 68ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಇನ್ನು ರಾಷ್ಟ್ರದ ದೊಡ್ಡ ನಾಯಕರ ಬಗ್ಗೆ ಹೇಳುವುದಾದರೆ ಪ್ರಧಾನ ಮೋದಿ ಅವರ ಆಡಳಿತವನ್ನು ಶೇಕಡಾ 52ರಷ್ಟು ಜನ ಮೆಚ್ಚಿದ್ದಾರೆ.

ಈ ಮೂರು ರಾಜ್ಯಗಳಲ್ಲಿ ನರೇಂದ್ರ ಮೋದಿ ಅವರಿಗಿಂತ ರಾಹುಲ್ ಗಾಂಧಿ ಅವರನ್ನು ಹೆಚ್ಚು ಜನ ಮೆಚ್ಚಿದ್ದಾರೆ, ಅವು ಯಾವುವೆಂದರೆ ಕೇರಳ ತಮಿಳುನಾಡು ಹಾಗೂ ಗೋವಾ ರಾಜ್ಯಗಳು. ಹೌದು ಅಚ್ಚರಿಯಾದರೂ ನಿಜ ಗೋವಾ ಕೇರಳ ತಮಿಳುನಾಡು ಮೋದಿ ಅವರಿಗಿಂತ ರಾಹುಲ್ ಗಾಂಧಿ ಅವರಿಗೆ ಜಾಸ್ತಿ ಅಂಕಗಳು ಬಂದಿವೆ. ನಿಮಗೆ ಈ ನಮ್ಮ ಲೇಖನ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ.

LEAVE A REPLY

Please enter your comment!
Please enter your name here