ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲಿಗಿಂತ ಡೀಸೆಲ್ ದುಬಾರಿ

0
220

ತೈಲ ಬೆಲೆಗಳ ಪೈಪೋಟಿಯಲ್ಲಿ ಪೆಟ್ರೋಲ್ ದರವನ್ನು ಹಿಂದಿಕ್ಕಿ ಡೀಸೆಲ್ ಬೆಲೆ ದುಬಾರಿಯಾಗಿದೆ! ಹೌದು ಸಾಮಾನ್ಯವಾಗಿ ಪೆಟ್ರೋಲ್ ದರ, ಡೀಸೆಲ್ ದರಕ್ಕಿಂತ ತುಸು ಹೆಚ್ಚೇ ಇರುತ್ತದೆ ಆದರೆ ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 79.76 ಪೈಸೆಯಾಗಿದ್ದು ಡೀಸೆಲ್ ಬೆಲೆಯು 79.88 ಪೈಸೆಯಾಗಿದ್ದು ತೈಲದರದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಡೀಸೆಲ್ ಪೆಟ್ರೋಲ್ ದರವನ್ನ ಮೀರಿ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರವು ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ, ಪೆಟ್ರೋಲ್ ಪ್ರತಿ ಲೀಟರ್ ಗೆ 8ರಿಂದ 10ರೂವರೆಗೂ ಏರಿಕೆಯಾಗಿದೆ.

ಒಂದೆಡೆ ಕೊರೋನ ವೈರಸ್ ದಾಳಿಗೆ ಜನಸಾಮಾನ್ಯರು ಉದ್ಯೋಗವಿಲ್ಲದೆ ತತ್ತರಸಿ ಹೋಗಿರುವುದು, ನಿರುದ್ಯೋಗ ಸಮಸ್ಯೆ ಮತ್ತು ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ನಷ್ಟ, ಆಟೋ ಚಾಲಕರು ಮತ್ತು ಕ್ಯಾಬ್ ಡ್ರೈವರ್ ಗಳಿಗೆ ಬಾಡಿಗೆ ಇಲ್ಲದೆ ದಿನದ ಒಪ್ಪತ್ತು ಊಟಕ್ಕೂ ಹಿಂದೆ ಮುಂದೆ ನೋಡುವ ಸ್ಥಿತಿ ಹೀಗಿರುವಾಗ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗುತ್ತಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಸಾಮನ್ಯವಾಗಿ ಡೀಸೆಲ್ ದರ ಪೆಟ್ರೋಲ್ ದರಕ್ಕಿಂತ 5ರಿಂದ 10ರೂವರೆಗೆ ಕಡಿಮೆ ಇರುತ್ತದೆ ಆದರೆ ದೆಹಲಿಯಲ್ಲಿ ಡೀಸೆಲ್ ದರವೇ ಹೆಚ್ಚಾಗಿದ್ದು ಎಲ್ಲರು ಉಬ್ಬೇರಿಸುವಂತೆ ಮಾಡಿದೆ. ಸಧ್ಯಕ್ಕೆ ಪೆಟ್ರೋಲ್ ದಲ ದೆಹಲಿಯಲ್ಲಿ 79.76 ಪೈಸೆ, ಡೀಸೆಲ್ ದರ 79.88 ಪೈಸೆಯಲ್ಲಿ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಎಂದಿನಂತೆ ಯಾವುದೇ ಬದಲಾವಣೆ ಇಲ್ಲದೆ ಪೆಟ್ರೋಲ್ ದರವೇ ಅಧಿಕವಾಗಿದೆ.

LEAVE A REPLY

Please enter your comment!
Please enter your name here