ಬಡವನೆಂದು ಕಾರ್ ಶೋರೂಮ್ ಒಳಗಡೆ ಬಿಡದ ಮಾಲೀಕರು, ಯಾರೆಂದು ಗೊತ್ತಾದ ಮೇಲೆ ಕಾಲಿಗೆ ಬಿದ್ದರು

0
470

ಈ ಜಗತ್ತಿನಲ್ಲಿ ಮನುಷ್ಯರು ಇನ್ನೊಬ್ಬ ಮನುಷ್ಯನನ್ನು ಅಳೆಯುವುದು ಅವನ ಆರ್ಥಿಕ ಸ್ಥಿತಿಯ ಮೇಲೆಯೇ, ಹೌದು ಇದು ವಿಚಿತ್ರ ಹಾಗೂ ತಪ್ಪು ಅನ್ನಿಸಿದರೂ ಈಗ ಜಗತ್ತು ನಡೆಯುತ್ತಿರುವುದೇ ಹೀಗೆ. ಕೆಲವರು ಇನ್ನೊಬ್ಬ ಮನುಷ್ಯನ ಜಾತಿ, ಬಣ್ಣ ನೋಡಿ ಅವನನ್ನು ಅಳೆದರೆ ಇನ್ನೂ ಕೆಲವರು ಅವನ ಆಸ್ತಿ ಅಂತಸ್ತಿನ ಮೇಲೆ ಜನರನ್ನು ವಿಂಗಡಿಸುತ್ತಾರೆ. ಇದರಿಂದಾಗಿಯೇ ಈ ಭೂಮಿಯ ಮೇಲೆ ಬಡವರಿಗೆ ಎಲ್ಲಿಯೂ ಬೆಲೆ ಇಲ್ಲದಂತಾಗಿದೆ. ದಾರಿಯಲ್ಲಿ ಒಬ್ಬ ಶ್ರೀಮಂತ ಕಲ್ಲು ಹೃದಯದ ವ್ಯಕ್ತಿಗೆ ಬೆಲೆ ಕೊಡುತ್ತಾರೆ ಹೊರತು ಪಕ್ಕದಲ್ಲೇ ಇರುವ ಒಳ್ಳೆಯ ಮನಸ್ಸಿನ ಬಡವನಿಗೆ ಅಷ್ಟು ಬೆಲೆ ಕೊಡುವುದಿಲ್ಲ, ಕಾರಣ ಬಡವನ ಹತ್ತಿರ ಏನೂ ಇಲ್ಲ ಶ್ರೀಮಂತನ ಎಲ್ಲವೂ ತುಸು ಹೆಚ್ಚೇ ಇರುತ್ತದೆ ಅಂತ.

ಇನ್ನು ಇಲ್ಲೊಬ್ಬ ಮಧ್ಯಮ ವರ್ಗದ ವ್ಯಕ್ತಿ ತನ್ನ ಕನಸಿನ ದುಬಾರಿ ಕಾರನ್ನು ನೋಡಲು ದುಬಾರಿ ಕಾರಿನ ಶೋರೋಮ್ ಕಡೆಗೆ ಬರುತ್ತಾನೆ ಆದರೆ ಶೋರೂಮ್ ಮುಂದೆ ನಿಂತಿರುವ ಸೆಕ್ಯುರಿಟಿ ಗಾರ್ಡ್ ಅವನನ್ನು ಬಿಡದೇ ನಿಮ್ಮ ತಿಂಗಳ ಸಂಬಳ‌ ಎಷ್ಟು ಎಂದು ಕೇಳುತ್ತಾನೆ,ಅಂದರೆ ಕಾರುಗಳನ್ನು ಸುಮ್ಮನೆ ಕಣ್ಣಾಡಿಸಿ ನೋಡಲೂ ಕೂಡಾ ನಮ್ಮ ಬಳಿ ಸಾಕಷ್ಟು ಹಣ ಇರಬೇಕು ಎಂಬುದು ಇದರ ಅರ್ಥ. ಅಬ್ಬಾ ಇನ್ನು ಕೆಲವರು ಇರುತ್ತಾರೆ, ಅವರು ನೀವು ಹಾಕುವ ಬಟ್ಟೆಯ ಮೇಲೆಯೇ ನಿಮ್ಮನ್ನು ನಿಮಿಷದಲ್ಲೇ ಅಳೆದು ಬಿಡುತ್ತಾರೆ. ಒಳ್ಳೆಯ ಬಟ್ಟೆ ಹಾಕಿದ್ದರೆ ನಿಮಗೆ ಗೌರವ ಕೊಡತ್ತಾರೆ ಇಲ್ಲವೇ ಅಸಡ್ಡೆ ತೋರಿಸುತ್ತಾರೆ. ಸಣ್ಣ ಮಧ್ಯಮ ವರ್ಗದ ಕಾರಿನಲ್ಲಿ ಬಂದ ವ್ಯಕ್ತಿಯನ್ನು ಅಲ್ಲಿನ ಸೆಕ್ಯುರಿಟಿ ಗಾರ್ಡ್ ತೆಡೆದು ಏನು ಬೇಕೆಂದು ಕೇಳುತ್ತಾನೆ.

ಈ ಬಡವ ವ್ಯಕ್ತಿ ಕಾರನ್ನು ನೋಡಬೇಕೆಂದಾಗ ಶೋರೂಮ್ ಮಾಲಿಕ ನಿಮ್ಮ ಸಂಬಳ ಎಷ್ಟು ನಿಮಗೆ ಇದನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಈ ಬಡವ ವ್ಯಕ್ತಿ ಹಾಗೇ ಮಾತನಾಡುತ್ತಾ ನಾನು ಈ ಕಾರನ್ನು ಖರೀದಿಸುತ್ತೇನೆ, ನನಗೆ ಟೆಸ್ಟ್ ಡ್ರೈವ್‌ ಕೊಡುವಿರಾ ಒಂದು ದಿನ ಈ‌ ಕಾರನ್ನು ಎಂದು ಕೇಳುತ್ತಾನೆ, ಆದರೆ ಶೋರೂಮ್ ಮಾಲಿಕ ನಿಮ್ಮ ಕೈಲಿ ಇಷ್ಟು ದುಬಾರಿ ಕಾರನ್ನು ಕೊಳ್ಳಲು ಆಗುವುದಿಲ್ಲ ಎಂದು ಹೇಳಿ ತಿರಸ್ಕರಿಸುತ್ತಾರೆ. ಸ್ವಲ್ಪ ಸಮಯದ ನಂತರ ಶೋರೂಮ್ ಮಾಲಿಕರು ಈ‌ ಬಡ ವ್ಯಕ್ತಿಯನ್ನು ನೋಡಿ‌ ಶಾಕ್ ಆಗುತ್ತಾರೆ ಹಾಗು ಆತನ ಬಳಿ ಕ್ಷಮೆ ಕೇಳುತ್ತಾರೆ, ಕಾರಣ ಏನ್ ಗೊತ್ತೇ ನೋಡಿರಿ ಇಲ್ಲಿ.

ಶೋರೂಮ್ ಮಾಲಿಕರು ತನ್ನನ್ನು ತಿರಸ್ಕರಿಸಿದಾಗ ಈ ಬಡ ವ್ಯಕ್ತಿ ತನ್ನ‌ ಅಸಲಿ ಮುಖವನ್ನು ತೋರಿಸುತ್ತಾನೆ, ಯಾರಿಗೋ ಒಬ್ಬರಿಗೆ ಕರೆ ಮಾಡಿ ತನ್ನ ಕಾರನ್ನು ತರಲು ಆದೇಶಿಸುತ್ತಾನೆ.ಅದರಂತೆಯೇ ಹತ್ತೇ ನಿಮಿಷದಲ್ಲಿ ಆ ಬಡ ವ್ಯಕ್ತಿ ಇದ್ದ ಶೋರೂಮ್ಗೆ ಒಂದು ದುಬಾರಿ ಕಾರು ಬರುತ್ತದೆ, ಆ ಕಾರು ಬಡವನ ಕಾರೇ ಆಗಿದ್ದು ಅಸಲಿಗೆ ಆ ಬಡ ವ್ಯಕ್ತಿ ಬಡವನೇ ಅಲ್ಲ, ಬಡವನ ತರಹ ಸಣ್ಣ ಕಾರಿನಲ್ಲಿ ಬಂದು ಈ ಸಮಾಜದಲ್ಲಿ ಬಡವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪರೀಕ್ಷೆ ಮಾಡುತ್ತಾನೆ.

ಆ ಬಡ ವ್ಯಕ್ತಿ ವೇಷದಲ್ಲಿ ಬಂದಿದ್ದ ಮನುಷ್ಯ ಆಗರ್ಭ ಶ್ರೀಮಂತನಾಗಿದ್ದರೂ ಕೂಡಾ ತಾನು ಹರಿದ ಬಟ್ಟೆಯಲ್ಲಿ ಹೋದರೆ ಹೇಗೆ ನನ್ನನ್ನು ಜನ ನೋಡುತ್ತಾರೆ ಎಂದು ನೋಡಬೇಕಂತಾನೇ ಈ ಥರ ವೇಷ ಹಾಕಿಕೊಂಡು ಬಡವನ‌ ರೀತಿಯಲ್ಲಿ ಶೋರೂಮ್ ಮಾಲಿಕನಿಗೆ ಬುದ್ದಿ ಕಲಿಸುತ್ತಾನೆ.ಇದನ್ನು ಬಡ ವೇಷದಲ್ಲಿ ಬಂದಿದ್ದ ವ್ಯಕ್ತಿ ಎರಡು ಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಇಟ್ಟು ಜನರು ಪ್ರತಿಕ್ರಿಯೆಗಳನ್ನು ರೆಕಾರ್ಡ್ ಮಾಡಿದ್ದಾನೆ, ವ್ಯಕ್ತಿಯ ಬಗ್ಗೆ ತಿಳಿದ ಶೋರೂಮ್ ಮಾಲಿಕರು ಆ ವ್ಯಕ್ತಿಯ ಬಳಿ‌ ಕ್ಷಮೆ ಕೇಳಿದ್ದಾರೆ.

LEAVE A REPLY

Please enter your comment!
Please enter your name here