ಅತ್ತೆಯನ್ನೇ ಮದುವೆಯಾದ ಪ್ರಖ್ಯಾತ ಸೀರಿಯಲ್ ನಟ ಯಾರು ಗೊತ್ತಾ? ಅತ್ತೆಯನ್ನು ಬಿಟ್ಟಿಲ್ಲ ಈ ನಟ

0
804

ಸ್ನೇಹಿತರೆ ಈ ನಮ್ಮ ಲೇಖನದಲ್ಲಿ ಒಂದು ಇಂಟ್ರೆಸ್ಟಿಂಗ್ ಸುದ್ದಿಯನ್ನು ತಿಳಿಸುತ್ತೇವೆ ಅದು ಏನಪ್ಪಾ ಅಂದರೆ ಒಬ್ಬ ಸೀರಿಯಲ್ ನಟ ತನ್ನ ಸ್ವಂತ ಅತ್ತೆಯನ್ನೇ ಮದುವೆಯಾಗಿದ್ದಾನೆ ಹೌದು ಮುಂದೆ ಓದಿ. ಸಿನಿಮಾ ಜಗತ್ತಿನಲ್ಲಿ ಗೊತ್ತಿಲ್ಲದಂತೆ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಈಗಾಗಲೇ ನಮಗೆ ಗೊತ್ತಿರುವಂತೆ ನಿಖಿಲ್ ಹಾಗೂ ರಚಿತಾರಾಮ್ ಮದುವೆ ವಿಷಯ ಹಾಗೂ ಹಲವಾರು ಇಂತಹ ಮದುವೆ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅನೇಕ ಜನರು ನಟರು ತಮ್ಮ ಪ್ರೊಫೆಷನ್ ನಲ್ಲಿಯೇ ಇರುವ ಅಂದರೆ ನಟನೆಯಲ್ಲಿರುವವರನ್ನು ಅಥವಾ ನಟರನ್ನೇ ಮದುವೆಯಾಗುವುದು ಈಗೀಗ ಸಾಮಾನ್ಯವಾಗಿದೆ.

ಪ್ರೀತಿಗೆ ಕಣ್ಣಿಲ್ಲ ಪ್ರೀತಿಸುವ ಧೈರ್ಯವಿದ್ದರೆ ಇಡೀ ಜಗತ್ತನ್ನು ಎದುರಿಸುವ ಸಾಮರ್ಥ್ಯ ಇರಬೇಕು. ಇಲ್ಲವಾದರೆ ಪ್ರೀತಿಸಲೇ ಬಾರದು ಎಂಬ ಮಾತು! ನಿಜವಾದ ಪ್ರೀತಿ ಎಂದರೆ ಜಾತಿ, ಧರ್ಮ, ಬಣ್ಣ, ಆಕಾರ ವಿಕಾರಗಳನ್ನು ನೋಡಿ ಮಾಡುವುದಲ್ಲ. ಅದೊಂದು ಅನಂತ ಭಾವನೆಗಳ ಎಲ್ಲೆಯನ್ನು ಮೀರಿದ್ದು. ಸಿನಿಮಾ ಆದರೆ ಮೂರು ಗಂಟೆಯಲ್ಲಿ ನೋಡಿ ನೋಡಿ ಮತ್ತೆ ಮರೆತು ಹೋಗುತ್ತವೆ. ಆದರೆ ಸೀರಿಯಲ್? ಪ್ರತಿದಿನ ನೋಡುತ್ತೇವೆ ಹಾಗೆ ನೂರಾರು ಎಪಿಸೋಡ್ಗಳಲ್ಲಿ ಸೀರಿಯಲ್ ನೋಡುತ್ತೇವೆ. ಅದರಲ್ಲಿ ಬರುವ ಪಾತ್ರಗಳು ಸಹ ನಮ್ಮ ಮೇಲೆ ಪ್ರಭಾವ ಬೀರುತ್ತದೆ.

ಇದೆಲ್ಲ ಯಾಕೆ ಗೊತ್ತಾ ? ತೆಲುಗಿನ ಸಾವಿರಾರು ಎಪಿಸೋಡ್ಗಳಲ್ಲಿ ಪ್ರಸಾರವಾಗಿ ಒಂದು ಸಂಚಲನ ಸೃಷ್ಟಿಸಿದ ಸೀರಿಯಲ್ ಅಂದ್ರೆ ಅದು ‘ಚಕ್ರವಾಕಂ’ ಅನ್ನೋ ಸೀರಿಯಲ್. ಈ ಸೀರಿಯಲ್ನಲ್ಲಿ ಹೀರೋ ಪಾತ್ರ ಮಾಡುತ್ತಿದ್ದ ಇಂದ್ರನೀಲ್ ವರ್ಮಾ ಮಾಡಿದ್ದೇನು ಗೊತ್ತಾ ಸೀರಿಯಲ್ನ ಸಾವಿರಾರು ಎಪಿಸೋಡ್ಗಳಲ್ಲಿ ತನ್ನ ಅತ್ತೆಯಾಗಿ ನಟಿಸಿದ್ದ ಮೇಘನಾರನ್ನು ಪ್ರೀತಿಸಿ ಮದುವೆಯಾದರು ಇಂದ್ರನೀಲ್. ಮಗಳನ್ನು ಕೊಟ್ಟ ಅತ್ತೆಯನ್ನೇ ಮದುವೆಯಾದೆಯಲ್ಲೋ ಎಂದು ಸಿರಿಯಲ್ನ ಪ್ರತಿಯೊಬ್ಬರೂ ಆತನನ್ನು ಆಟ ಆಡಿಸುತ್ತಿದ್ದಾರೆ.

ಅಷ್ಟೇ ಅಲ್ಲ, ಇಂದ್ರ ನೀಲ್ ಮತ್ತು ಮೇಘನಾ ಎಲ್ಲೇ ಹೋದರೂ ಇಂದ್ರನೀಲ್ ಇವರು ನಿಮ್ಮ ಅತ್ತೆ ತಾನೇ! ಎಂದು ಜನ ಕೇಳುತ್ತಾರಂತೆ. ಅದು ಸೀರಿಯಲ್ ನಲ್ಲಿ, ಈಗ ನನ್ನ ಹೆಂಡತಿ ಎಂದು ಹೇಳಲು ಪಾಪ ಇಂದ್ರನಿಗೆ ದೊಡ್ಡ ಸಮಸ್ಯೆಯಾಗುತ್ತಿದೆಯಂತೆ ಅದಕ್ಕೆ ಕಾರಣ. ಸೀರಿಯಲ್ನಲ್ಲಿ ಅತ್ತೆ ನಿಜ ಜೀವನದಲ್ಲಿ ನನ್ನ ಹೆಂಡತಿಯಾಗಿದ್ದಾಳೆ ಎಂದು ಹೇಳಿದಾಗ, ಜನ ಏನಪ್ಪಾ ನೀನು ಅತ್ತೆಯನ್ನೇ ಮದುವೆಯಾಗಿದ್ದೀಯ!? ಎಂದು ಪ್ರಶ್ನೆ ಮಾಡುತ್ತಾರಂತೆ ಜನ. ಅಷ್ಟೊಂದು ಗಾಢವಾದ ಸೀರಿಯಲ್ ಪ್ರಭಾವ ಜನರಲ್ಲಿ. ಪಾಪ ಈ ಜೋಡಿಗೆ ಇದೇ ದೊಡ್ಡ ಸಮಸ್ಯೆಯಾಗಿದೆ.

ಅಸಲಿಗೆ ಮೇಘನಾಗೆ ಅಷ್ಟೊಂದು ವಯಸ್ಸು ಏನೂ ಆಗಿಲ್ಲ. ದಪ್ಪ ಇದ್ದ ಕಾರಣ ಅತ್ತೆ ಪಾತ್ರ ಮಾಡುತ್ತಿದ್ದರಂತೆ. ಆದರೆ ಹೀರೋ ಇಂದ್ರನೀಲ್ ದಪ್ಪವನ್ನು ನೋಡದೆ ಆಕೆಯ ವಯಸ್ಸನ್ನು ನೋಡಿ ಪ್ರೀತಿಸಿ ಮದುವೆಯಾಗಿದ್ದಾರಂತೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಎಲ್ಲ ಸ್ನೇಹಿತರಿಗೂ ತಲುಪುವರೆಗೂ ಶೇರ್ ಮಾಡಿ.

LEAVE A REPLY

Please enter your comment!
Please enter your name here